ಅನಗತ್ಯ ಕಿರುಕುಳ ವಿರುದ್ಧ ಕೋರ್ಟಿಗೆ ದೂರು ನೀಡಲು ಚಿಂತನೆಜಿಲ್ಲಾ ಉಸ್ತುವಾರಿ ಪ್ರಿಯಾಂಕ್‍ಗೆ ವಾರ್ನಿಂಗ್ ನೀಡಿದ ಮಣಿಕಂಠ ರಾಠೋಡ್

ಕಲಬುರಗಿ,ಜು 11: ರಾಜಕೀಯ ದ್ವೇಷದ ಕಾರಣಕ್ಕಾಗಿ ತಮ್ಮ ವಿರುದ್ಧ ಅನಗತ್ಯವಾಗಿ ಕಿರುಕುಳ ನೀಡುತ್ತಾ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುತ್ತಿರುವ ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ಚುನಾವಣಾ ಸಂದರ್ಭದಲ್ಲಿ ತಾವು ನೀತಿ-ಸಂಹಿತೆ ಉಲ್ಲಂಘಿಸಿರುವುದಾಗಿ ಜಿಲ್ಲೆಯಬೇರೆ ಬೇರೆ ಠಾಣೆಗಳಲ್ಲಿ ತಮ್ಮ ವಿರುದ್ಧ ದೂರುಗಳನ್ನು ದಾಖಲಿಸಲಾಗುತ್ತಿದೆ. ಈ ಕುರಿತು ಕಲಬುರಗಿಯ ಚೌಕ್ ಪೊಲೀಸ್ ಠಾಣೆ,ಮಾಡಬೂಳ ಮತ್ತು ಚಿತ್ತಾಪುರ ಪೊಲೀಸ್ ಠಾಣೆಗಳಿಂದ ಈಗಾಗಲೇತಮಗೆ ನೋಟಿಸ್‍ಗಳನ್ನು ಜಾರಿ ಮಾಡಲಾಗಿದೆ. ಆ ಮೂಲಕ ತಮ್ಮನ್ನುಹಾಗೂ ತಮ್ಮ ಬೆಂಬಲಿಗರನ್ನು ಬೆದರಿಸುವ ಕೆಲಸ ನಡೆದಿದೆ ಎಂದು ರಾಠೋಡ್ ಹೇಳಿದರು.
ಸಚಿವ ಪ್ರಿಯಾಂಕ್ ಅವರು ಪ್ರಸ್ತುತ ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್‍ರಾಜ್ ಹಾಗೂ ಐಟಿ-ಬಿಟಿ ಮಿನಿಸ್ಟರ್ ಆಗಿದ್ದರೂ ಅವರು ತಮಗೆ ವಹಿಸಿರುವ ಖಾತೆಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಚಿಂತಿಸದೆ ಕೇವಲ ತಮ್ಮ ವಿರುದ್ಧ ರಾಜಕೀಯ ದ್ವೇಷ ಸಾಧನೆಗೆಏನೆಲ್ಲಾ ಮಾಡಬೇಕೋ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ಮಣಿಕಂಠ ಗಂಭೀರ ಆರೋಪ ಮಾಡಿದರು.
ಈ ಹಿಂದೆ ಚುನಾವಣೆಗೂ ಮುಂಚೆ ಸಚಿವ ಪ್ರಿಯಾಂಕ್ ಅವರ ಬೆಂಬಲಿಗ ರಾಜು ಜಾನೆ ವಿರುದ್ಧ ತಾವು ಆರೋಪ ಮಾಡಿದ್ದಕ್ಕೆ ಪ್ರತೀಕಾರವಾಗಿ ತಮ್ಮ ವಿರುದ್ಧ ಚೌಕ್‍ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಚಿತ್ತಾಪುರದಲ್ಲಿ ಡಿ.ಜೆ. ಬಳಸಿದ
ಕಾರಣಕ್ಕಾಗಿ ತಮ್ಮ ಬೆಂಬಲಿಗ ಹಾಗೂ ಬಿಜೆಪಿ ಮುಖಂಡ ಅಶ್ವತ್ಥರಾಂ ರಾಠೋಡ್‍ವಿರುದ್ಧ ಚಿತ್ತಾಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಚುನಾವಣೆಗೆಸ್ಪರ್ಧಿಸಿದ್ದ ವೇಳೆ ಪ್ರಿಯಾಂಕ್ ಅವರ ನಾಮಪತ್ರ
ಅನೂರ್ಜಿತಗೊಳಿಸಬೇಕೆಂದು ಒತ್ತಾಯಿಸಿ ಅಶ್ವತ್ಥರಾಂ ರಾಠೋಡ್ ಕಲಬುರಗಿಹೈಕೋರ್ಟ್ ಪೀಠದಲ್ಲಿ ಮನವಿ ಸಲ್ಲಿಸಿದ್ದಕ್ಕೆ ಪ್ರತೀಕಾರವಾಗಿ ಅಶ್ವತ್ಥರಾಂವಿರುದ್ಧ ಚಿತ್ತಾಪುರ ಠಾಣೆಯಲ್ಲಿ ಡಿ.ಜೆ. ಬಳಕೆ ನೆಪದಲ್ಲಿ ದೂರು ದಾಖಲಾಗಿದೆ.
ಮತ್ತೊಂದೆಡೆ, ಚುನಾವಣೆ ಮುಗಿದ ಬಳಿಕ ಮೇ 16ರಂದು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಮ್ಮ ವಿರುದ್ಧ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯ ಪ್ರಕರಣ ದಾಖಲಿಸಿದೆ. ಹೀಗೆ ಒಂದಾದ ಮೇಲೆ ಒಂದರಂತೆ ಮೇಲಿಂದ ಮೇಲೆ ದೂರುಗಳನ್ನು ದಾಖಲಿಸುತ್ತಾ ತಮ್ಮನ್ನುಹೆದರಿಸುವ ಕೆಲಸವನ್ನು ಸಚಿವ ಪ್ರಿಯಾಂಕ್ ಮಾಡುತ್ತಿದ್ದಾರೆ. ಸಚಿವರ ಇಂತಹಯಾವುದೇ ಬೆದರಿಕೆಗಳಿಗೆ ತಾವು ಬಗ್ಗುವುದಿಲ್ಲ ಎಂದು ರಾಠೋಡ್ ಸವಾಲು ಹಾಕಿದರು.
ಬಿಜೆಪಿ ಕಾರ್ಯಕರ್ತರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು
ಮಾಡುತ್ತಾ ಅವರ ವಿರುದ್ಧ ಇದೇರೀತಿ ದೂರುಗಳನ್ನು ದಾಖಲಿಸುತ್ತಾ
ಹೋದರೆ ಪೊಲೀಸ್ ಅಧಿಕಾರಿಗಳು ಮತ್ತು ಸಚಿವ ಪ್ರಿಯಾಂಕ್ ವಿರುದ್ಧ
ಕೋರ್ಟ್‍ನಲ್ಲಿ ಖಾಸಗಿ ದೂರು ದಾಖಲಿಸಿ, ಅವರನ್ನು ಕಟಕಟೆಗೆ
ಎಳೆಯುವುದಾಗಿ ಮಣಿಕಂಠ ಎಚ್ಚರಿಕೆ ನೀಡಿದರು.
ಅಶ್ವತ್ಥರಾಂ ರಾಠೋಡ್, ಬಿಜೆಪಿ ಎಸ್ಸಿ ಮೋರ್ಚಾ ಚಿತ್ತಾಪುರ ತಾಲೂಕು ಪ್ರಧಾನಕಾರ್ಯದರ್ಶಿ ಗುಂಡು ಮತ್ತಿಮೂಡ ಮತ್ತು ವಿಜಯಕುಮಾರ್
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


ಬ್ಯಾಟಿಂಗ್‍ಗೆ ನಾನು ರೆಡಿ
ರಾಜ್ಯ ವಿಧಾನಸಭೆ ಚುನಾವಣೆಯ ವೇಳೆ ಮಲ್ಲಿಕಾರ್ಜುನ ಖರ್ಗೆಯವರ ಇಡೀ ಫ್ಯಾಮಿಲಿಯನ್ನೇ ಸಾಫ್ ಮಾಡುವುದಾಗಿ ತಾವು ಮಾತನಾಡಿರುವುದು ಎಂದುಹೇಳಲಾಗುವ ಆಡಿಯೋ ರಿಲೀಸ್ ಮಾಡಿದ್ದ ಕಾಂಗ್ರೆಸ್ ಮುಖಂಡರು ತಮ್ಮವಿರುದ್ಧ ದೇಶದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ.
ಇಂತಹ ಎಷ್ಟೇ ದೂರುಗಳನ್ನು ದಾಖಲಿಸಿದರೂ ನಾನು ಹೆದರುವುದಿಲ್ಲ.
ಇಷ್ಟಕ್ಕೂ ಬ್ಯಾಟಿಂಗ್ ಮಾಡಲು ನಾನು ಸಿದ್ಧನಿದ್ದು, ಸ್ಪೀಡ್ ಬಾಲ್, ಸ್ಪಿನ್ ಬಾಲ್‍ಸೇರಿದಂತೆ ಎಂಥದ್ದೇ ಬಾಲ್ ಬಂದರೂ ಎದುರಿಸಲು ತಾವು ರೆಡಿ ಎಂದು ಮಣಿಕಂಠರಾಠೋಡ್ ಕ್ರಿಕೆಟ್ ಭಾಷೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಎದಿರೇಟು ನೀಡಿದರು.
‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಗೆ ಬಿಜೆಪಿ ಟಿಕೆಟ್ ನೀಡುವ ಕುರಿತು ಗುಲ್ಲೆದ್ದಿದೆ’ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಠೋಡ್, ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ ಎಂದರು.