ಅನಗತ್ಯೆ ವಾಹನ ಸವಾರರಿಗೆ ದಂಡ !! ಕೋವಿಡ ನಿಯಮ ಉಲ್ಲಂಘನೆ ಬೈಕ್ ಸವಾರರು

ಲಿಂಗಸೂಗೂರು.ಜ.೧೫- ಪಟ್ಟಣದಲ್ಲಿ ವಿಕೇಂಡ್ ಲಾಕ್‌ಡೌನ್ ಘೋಷಣೆ ಮಾಡಿರುವ ಸರ್ಕಾರ ೨ನೇ ವಾರದ ಲಾಕ್‌ಡೌನ್ ಇದ್ದು ಇಂದು ಬೆಳಿಗ್ಗೆ ೬ ರಿಂದ ಲಿಂಗಸೂಗೂರು ಪಟ್ಟಣದ ಪ್ರಮುಖ ಸರ್ಕಲ್‌ಗಳಲ್ಲಿ ಬಸಸ್ಟ್ಯಾಂಡ್ ಸರ್ಕಲ್, ಬಸವಸಾಗರ ಸರ್ಕಲ್, ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಅನಗತ್ಯೆ ವಾಹನ ಸವಾರ ಮಾಡುವ ವಾಹನ ಸವಾರರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದರು ಅನಗತ್ಯೆ ವಾಹನ ಸವಾರ ಮಾಡುವ ಸವಾರರಿಗೆ ೨೦೦.ರೊ, ೫೦೦.ರೊ, ೧೦೦೦.ರೂ, ದಂಡ ಹಾಕುತ್ತಿದ್ದರು ಬಗ್ಗದ ಜಗ್ಗದ ವಾಹನ ಸವಾರರು ಇದ್ದರಿಂದಾಗಿ ಪೊಲೀಸ್ ಇಲಾಖೆಗೆ ತೆಲೆ ನೋವುವಾಗಿದೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
೧೦೦ ಕ್ಕಿಂತ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿದರು. ಪೊಲೀಸ್ ಇಲಾಖೆಯ ಸಿ.ಪಿ.ಐ. ಮಹಾಂತೇಶ ಸಜ್ಜನ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಲಿಂಗಸೂಗೂರು ಪಿ.ಎಸ್.ಐ.ಪ್ರಕಾಶ್ ಡಂಬಳ, ಸಿಬ್ಬಂದಿ ವರ್ಗದವರಾದ ನಾಗರಾಜ್, ಪೊಲೀಸ್ ಇನ್ನಿತರರು ಉಪಸ್ಥಿತರಿದ್ದರು.