ಅನಗತ್ಯವಾಗಿ ಯಾರು ಹೊರಗಡೆ ಬರಬೇಡಿ : ಗಡಂತಿ ಮನವಿ

ಕಾಳಗಿ. ಏ.19 : ಚಿಂಚೋಳಿ ವಿಧಾನ ಸಭಾ ಕ್ಷೇತ್ರದ ಜನತೆಯಲ್ಲಿ ವಿನಂತಿಸಿಕೊಳ್ಳುವದೇನೆಂದರೆ ಕೊರೋನಾ ಮಹಾಮಾರಿ ಎರಡನೆ ಅಲೆ ಎದಿದ್ದು ಜನರಲ್ಲಿ ತುಂಬಾ ಭಯಭೀತಿಯನ್ನು ಉಂಟು ಮಾಡಿದೆ. ಅದರಲ್ಲು ನಗರದಲ್ಲಿ ಕಳೆದ ಒಂದು ತಿಂಗಳಿನಿಂದ ಐದು ಜನ ಕೊರೋನಾಗೆ ಬಲಿಯಾಗಿದ್ದಾರೆ. ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಸಿ, ಮೇಲಿಂದ ಮೇಲೆ ಕೈ ತೊಳೆದುಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಅನಗತ್ಯವಾಗಿ ಮನೆಯಿಂದ ಯಾರು ಹೊರಗಡೆ ಬರಬೇಡಿ ಈಗಾಗಲೇ ನಗರದಲ್ಲಿ ಪುರಸಭೆ ವತಿಯಿಂದ ಸ್ಯಾನಿಟೈಸ್ ಮಾಡಲಾಗಿದೆ. ಕಾಳಗಿ ಹಾಗೂ ಚಿಂಚೋಳಿ ತಾಲೂಕಿನ ಅಧಿಕಾರಿಗಳು, ತಾಲೂಕ ದಂಡಾಧಿಕಾರಿಗಳು, ಕಾರ್ಯ ನಿರ್ವಾಹಕ ಅಧಿಕಾರಿಗಳು ವೈದ್ಯರು, ಪೊಲೀಸ್ ಇಲಾಖೆ, ಪುರಸಭೆ ಅಧಿಕಾರಿಗಳು ಪೌರಕಾರ್ಮಿಕರು ಸೂಕ್ತ ಕ್ರಮ ಕೈಗೊಳ್ಳುವ ತಯ್ಯಾರಿಯಲ್ಲಿದ್ದಾರೆ ಕಾರಣ ತಾಲೂಕಿನ ಸಾರ್ವಜನಿಕರು ಸರಕಾರದ ಕ್ರಮವನ್ನು ಪಾಲಿಸಿ, ಕೊರೋನಾ ಮಹಾಮಾರಿ ರೋಗವನ್ನು ತಡೆಯೋಣ ಎಂದು ಚಿಂಚೋಳಿ ಮಂಡಲ ಅಧ್ಯಕ್ಷ ಸಂತೋಷ ಗಡಂತಿ ಹೇಳಿದರು.