ಬೀದರ: ಜು.12:ಹಿಂದೆ ಯಾವುದೇ ವಿಶ್ವವಿದ್ಯಾಲಯಗಳಿರಲಿಲ್ಲ. ಆದರೂ ಅನಕ್ಷರಸ್ಥ ಹಿರಿಯರಿಂದ ಮೂಡಿ ಬಂದ ಶ್ರೀಮಂತ ಸಾಹಿತ್ಯವೇ ಜನಪದವಾಗಿದೆ. ಓದಲು ಬಾರದಿದ್ದರೂ ಜನಪದರು ಹೃದಯಕ್ಕೆ ತಟ್ಟುವ, ಮನಸ್ಸಿಗೆ ಮುಟ್ಟುವ ಸಾಹಿತ್ಯವನ್ನು ಈ ಲೋಕಕ್ಕೆ ನೀಡಿ ಹೋಗಿದ್ದಾರೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್.ಬಿರಾದಾರ ತಿಳಿಸಿದರು.
ಸಂಸ್ಕøತಿ ಮಂತ್ರಾಲಯ ನವದೆಹಲಿ, ಕರ್ನಾಟಕ ಜಾನಪದ ಪರಿಷತ್ತು ಬೀದರ, ಕರ್ನಾಟಕ ಸಾಹಿತ್ಯ ಸಂಘ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು, ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ತಂಜಾವೂರು ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕøತಿಕ ಭವನದಲ್ಲಿ ನಡೆದ ಮೂರು ದಿನಗಳ ರಾಷ್ಟ್ರೀಯ ಜನಪದ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದೆ ತಾಯಂದಿರು ತಾವು ಮಾಡುವ ಕೆಲಸದಲ್ಲಿ ದಣಿವು ಆಯಾಸ ಮರೆಯಲು ಸ್ವತಃ ತಾವೇ ಕಟ್ಟಿ ಹಾಡಿದ ಹಾಡುಗಳೇ ಜನಪದ ಹಾಡುಗಳಾಗಿ ಇಂದು ಲಭ್ಯವಾಗಿವೆ. ಈ ಜನಪದ ಹಾಡುಗಳಲ್ಲಿ ಪ್ರೀತಿ ನಂಬಿಕೆ ಪರಸ್ಪರ ಬಾಂಧವ್ಯ ಅಡಗಿದೆ. ಮನೆ ಹಸನಾಗಿರಲು ಮನಸ್ಸು ಹಸಿರಾಗಿರಬೇಕು. ತನ್ನ ಮನಸ್ಸಿನ ಸಮಾಧಾನದ ಜೊತೆಗೆ ಇತರರ ಹೃದಯವನ್ನು ನಿರ್ಲಿಪ್ತತೆಯಿಂದ ಇಡಲು ಜನಪದ ಸಹಕಾರಿಯಾಗಿದೆ. ಹಾಲಹಳ್ಳಿಯ ಹೊರವಲಯದಲ್ಲಿ 360 ಎಕರೆ ಪ್ರದೇಶದಲ್ಲಿ ನೂತನವಾಗಿ ಬೀದರ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ವಿ.ವಿ.ಯ ವಿದ್ಯಾರ್ಥಿಗಳಿಗೆ ಜನಪದ ಸಾಹಿತ್ಯ ಮತ್ತು ಸಂಸ್ಕøತಿ ಬಗ್ಗೆ ಪರಿಚಯಿಸಲು ಡಾ. ಜಗನ್ನಾಥ ಹೆಬ್ಬಾಳೆಯವರ ಸಹಕಾರ ಅತ್ಯಗತ್ಯ. ಹೀಗೆ ಜನಪದದ ಸೌಗಂಧ ಎಲ್ಲೆಡೆ ಪಸರಿಸಲಿ. ಜಗತ್ತು ಜನಪದಮಯವಾಗಲಿ ಎಂದು ಪ್ರತಿಪಾದಿಸಿದರು.
ಶಾಹಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ ಮಾತನಾಡಿ ನನಗೆ ಕನ್ನಡವೇ ಬರುತ್ತಿರಲಿಲ್ಲ. ಅಲ್ಪಸ್ವಲ್ಪ ಇಂದು ಮಾತನಾಡುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ಡಾ. ಜಗನ್ನಾಥ ಹೆಬ್ಬಾಳೆ. ಮೂರು ದಿವಸಗಳ ಜಾನಪದ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಗಡಿಭಾಗದಲ್ಲಿ ಜನಪದದ ಪಾಂಚಜನ್ಯ ಮೊಳಗಿಸುತ್ತಿರುವ ಡಾ. ಹೆಬ್ಬಾಳೆದ್ವಯರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಸಂಘದ ಟ್ರಸ್ಟ್ ಅಧ್ಯಕ್ಷ ಶಂಕರರಾವ ಹೊನ್ನಾ, ನಿಜಲಿಂಗಪ್ಪ ತಗಾರೆ, ಕೆ.ಸತ್ಯಮೂರ್ತಿ, ಶಂಭುಲಿಂಗ ವಾಲ್ದೊಡ್ಡಿ, ಬಸವರಾಜ ಮೂಲಗೆ, ಡಾ. ಜಗನ್ನಾಥ ಹೆಬ್ಬಾಳೆ, ಡಾ. ರಾಜಕುಮಾರ ಹೆಬ್ಬಾಳೆ, ಪ್ರೊ.ಎಸ್.ಬಿ.ಬಿರಾದಾರ ಉಪಸ್ಥಿತರಿದ್ದರು.
ಸಾಂಸ್ಕøತಿಕ ಕಾರ್ಯಕ್ರಮಗಳು: ಬೆಂಗಳೂರಿನ ಖ್ಯಾತ ಕಲಾವಿದರಾದ ಸಿ.ಎಂ. ನರಸಿಂಹಮೂರ್ತಿ, ಶಂಕರ ಭಾರತಿಪುರ, ದೇವಾನಂದ ವರಪ್ರಸಾದ, ಕೀಲಾರ ಕೃಷ್ಣೇಗೌಡ ಮತ್ತು ಸಂಗಡಿಗರು ಜಾನಪದ ಝೇಂಕಾರ ಸಾಂಸ್ಕøತಿಕ ಕಾರ್ಯಕ್ರಮವನ್ನು ಸುಮಾರು ಎರಡು ಗಂಟೆಗಳ ಕಾಲ ಅದ್ಭುತವಾಗಿ ನಡೆಸಿಕೊಟ್ಟರು. ಪ್ರೇಕ್ಷಕರು ತಲೆದೂಗುವಂತೆ ಜಾನಪದ ಹಾಡುಗಳನ್ನು ಮನಮುಟ್ಟುವಂತೆ ಹಾಡಿದರು. ಅದೇ ರೀತಿ ಕೋಲಾಟವನ್ನು ಸರಸ್ವತಿ ಹುಲಸೂರೆ ಸಂಗಡಿಗರು, ಚಕ್ರಿ ಭಜನೆಯನ್ನು ಮಲ್ಲಿಕಾರ್ಜುನ ಕಲಾತಂಡ, ಭಜನೆ ಹಾಡುಗಳನ್ನು ಅಕ್ಕಮಹಾದೇವಿ ಮಹಿಳಾ ತಂಡ, ಹಲಗೆ ಕುಣಿತವನ್ನು ಅಬ್ರಾಹಂ ಮತ್ತು ತಂಡದವರು ನಡೆಸಿಕೊಟ್ಟರು. ವೈಜಿನಾಥ ಪಾಟೀಲ ನಿರೂಪಿಸಿದರು. ಡಾ. ಬಿರಾದಾರ ರಾಜೇಂದ್ರ ಸ್ವಾಗತಿಸಿದರು. ಶ್ರೀಕಾಂತ ಸ್ವಾಮಿ ವಂದಿಸಿದರು.
ಪ್ರೊ. ಚಂದ್ರಶೇಖರ ಕಂಬಾರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರೊ. ಚಂದ್ರಶೇಖರ ಕಂಬಾರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಲ್ಲಿಕಾರ್ಜುನ ಪಾಟೀಲ, ಡಾ. ದಯಾನಂದ ಕಾರಬಾರಿ, ಶಿವಾನಂದ ಗುಂದಗಿ, ಶಿವರಾಜ ಖೆಲೆ, ಸಂತೋಷ ಹಡಪದ, ಗಣಪತಿ ದೇಶಪಾಂಡೆ, ಕಮಳಮ್ಮ ಸಂತಪೂರೆ, ಮಹಾದೇವಿ ಅಷ್ಟೂರೆ, ವೀರಂತರೆಡ್ಡಿ ಜಂಪಾ, ಪಂಡಿತ ಬಾಳೂರೆ, ಗಂಗಮ್ಮ ಫುಲೆ, ದೇವೇಂದ್ರ ಭೂಪಾಳೆ, ಗುರುನಾಥ ಹಲಿಂಗೆ, ಹಾವಗಿರಾವ ಕಳಸೆ, ಡಾ. ಶಶಿಕಾಂತ ಪಾಟೀಲ ಈ ಹದಿನಾರು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.