
ನವದೆಹಲಿ,ಮೇ.೧೪- ಪ್ರಧಾನಿ ನರೇಂದ್ರ ಮೋದಿ ಅವರ ವಿಭಜನೆ ಮತ್ತು ಧ್ರುವೀಕರಣದ ರಾಜಕೀಯ ಸೋಲಿಸಬಹುದು ಎನ್ನುವುದನ್ನು ಕರ್ನಾಟಕ ವಿಧಾನಸಭೆಯ ಚುನಾವಣಾ ಫಲಿತಾಂಶ ಸಾಬೀತುಪಡಿಸಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.’ಮಹಾಭಾರತ’ದಲ್ಲಿ ಯುಧಿಷ್ಠಿರನ ಶಂಖದಂತೆ ’ಅನಂತವಿಜಯಂ’ ಆಗಿರುವ ಶಂಖವನ್ನು ಹೊಂದಿದ್ದೇನೆ ಎಂದು ಪ್ರಧಾನಿ ಭಾವಿಸಿದ್ದರು. ಈ ಚುನಾವಣೆ ಪ್ರಧಾನಿಯನ್ನು ಸೋಲಿಸಬಹುದು ’ಅನಂತವಿಜಯಂ’ ಅಲ್ಲ ಎನ್ನುವುದನ್ನು ಸಾಬೀತು ಪಡಿಸಿದೆ ಎಂದು ಹೇಳಿದ್ದಾರೆ.ಬಿಜೆಪಿ ಆಡಳಿತವಿರುವ ಏಕೈಕ ದಕ್ಷಿಣ ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದ್ದು ಕರ್ನಾಟಕದ ಜನರು ಪ್ರಧಾನಿ ವಿರುದ್ಧ ಸ್ಪಷ್ಟ ಜನಾದೇಶ ನೀಡಿದ್ದಾರೆ ಎಂದು ತಿಳಿಸಿದ್ದಾರೆ.ಈ ಚುನಾವಣೆ ಕಾಂಗ್ರೆಸ್‌ಗೆ ನಿರ್ಣಾಯಕ ಜನಾದೇಶವಾಗಿದೆ ಮತ್ತು ಪ್ರಧಾನ ಮಂತ್ರಿಯ ವಿರುದ್ಧ ಮತದಾನವಾಗಿದೆ ಎಂದು ಹೇಳಿದ ಅವರು ಕರ್ನಾಟಕದಲ್ಲಿ ಕಾಂಗ್ರೆಸ್‌ನ ನಿರ್ಣಾಯಕ ಗೆಲುವು ಪಕ್ಷಕ್ಕೆ ಅಗತ್ಯವಾದ “ಬೂಸ್ಟರ್ ಡೋಸ್” ನೀಡಿದೆ ಎಂದಿದ್ದಾರೆ.ಪ್ರಧಾನ ಮಂತ್ರಿಗಳ ರೋಡ್ ಶೋಗಳು, ಪ್ರಧಾನ ಮಂತ್ರಿಗಳ ಭಾಷಣಗಳು, ಪ್ರಧಾನ ಮಂತ್ರಿಗಳ ವೀಡಿಯೊ ಸಂದೇಶಗಳು. ಕರ್ನಾಟಕದಲ್ಲಿ ಬಿಜೆಪಿ ಪ್ರಚಾರ ಪ್ರಧಾನಿ, ಪ್ರಧಾನಿ ಎಂದು ಅಬ್ಬರಿಸಿತು ಅದನ್ನು ರಾಜ್ಯದ ಜನತೆ ತಿರಸ್ಕರಿಸಿದೆ ಎಂದು ತಿಳಿಸಿದ್ದಾರೆ.ಕರ್ನಾಟಕದಲ್ಲಿ ಬಿಜೆಪಿಯ ಕೋಮು ಧ್ರುವೀಕರಣ ಮತ್ತು ಹಿಂದುತ್ವ ರಾಜಕಾರಣಕ್ಕೆ ಪ್ರಯೋಗಶಾಲೆಯಾಗಿರುವುದರಿಂದ ಬಿಜೆಪಿಯ ಸೋಲು ಬಹಳ ಮಹತ್ವದ್ದಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಬೂಸ್ಟರ್ ಡೋಸ್
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟರ್ ಡೋಸ್ ನೀಡಿದೆ. ನಮ್ಮ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸಿದೆ ಎಂದು ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥರೂ ಆಗಿರು ಜೈರಾಮ್ ರಮೇಶ್ ಹೇಳಿದ್ದಾರೆ.
ಈ ನಿರ್ಣಾಯಕ ಗೆಲುವು ಸಕಾರಾತ್ಮಕ ಅಜೆಂಡಾದೊಂದಿಗೆ, ಕಾರ್ಯತಂತ್ರದೊಂದಿಗೆ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಕಾಂಗ್ರೆಸ್ ಅನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದನ್ನು ಸಾಬೀತು ಮಾಡಿದೆ ಎಂದಿದ್ದಾರೆ.