ಅನಂತಕುಮಾರರಿಂದ ಸಂಸ್ಕøತಿ ಬಯಸೋಕೆ ಆಗುತ್ತಾ:ಸಿಎಂ

ಕೂಡಲ ಸಂಗಮ,ಜ 14: ಸಂಸದ ಅನಂತಕುಮಾರ್ ಹೆಗಡೆ ಅವರಿಂದ ನಾವು ಸಂಸ್ಕøತಿ ಬಯಸೋಕೆ ಆಗುತ್ತಾ.? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಂತಕುಮಾರ ಹೆಗಡೆಗೆ ತಿರುಗೇಟು ನೀಡಿದರು.
ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮುಖ್ಯಮಂತ್ರಿ ಮಾತನಾಡಿದರು.
ಸಿಎಂ ಸಿದ್ಧರಾಮಯ್ಯ ವಿರುದ್ಧ ಏಕವಚನದಲ್ಲೇ ಸಂಸದ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿ, ನೀನು ಬಂದ್ರೆ ಬಾ,ಬಿಟ್ಟರೆ ಬಿಡು ರಾಮಮಂದಿರ ಉದ್ಘಾಟನೆ ಏನೂ ನಿಲ್ಲೋದಿಲ್ಲ ಅಂತ ತಿಳಿಸಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದರು.
ಮಂತ್ರಿಯಾಗಿ ಸಂವಿಧಾನ ಬದಲಿಸ್ತೀವಿ ಅಂದರು.ಅವರಿಂದ ನಾವು ಸಂಸ್ಕøತಿ ಬಯಸೋಕೆ ಆಗುತ್ತಾ.? ಅವರ ಸುಸಂಸ್ಕøತಿ ಅವರ ಹೇಳಿಕೆಯಲ್ಲೇ ತೋರಿಸುತ್ತದೆ ಎಂದು ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.