
ಕಲಬುರಗಿ,ಆ 1: ಅಧ್ಯಾತ್ಮಿಕ ಸಾಧನೆ ಮಾಡಬೇಕಾದರೆ ಅಧಿಷ್ಟಾನ ಅನುಷ್ಟಾನ ಬೇಕು ಎಂದು ದಾಸ ಸಾಹಿತ್ಯ ಚಿಂತಕಿ ಡಾ.ಜಯಲಕ್ಷ್ಮೀ ಮಂಗಳಮೂರ್ತಿ ಅಭಿಮತ ವ್ಯಕ್ತಪಡಿಸಿದರು.
ಜಯತೀರ್ಥ ನಗರದ ಶ್ರೀ ಲಕ್ಷ್ಮೀನಾರಾಯಣ ಮಂದಿರದಲ್ಲಿ ಸೋಮವಾರ ನಡೆದ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಅಧ್ಯಾತ್ಮದ ಸೆಳೆತಕ್ಕೊಳಗಾಗಿ ಧರ್ಮದ ಹಾದಿಯಲ್ಲಿ ಸಾಗಬೇಕು.
ಹರಿದಾಸರು ತತ್ವಜ್ಞಾನ ಎಂಬ ಕಬ್ಬನ್ನು ನೀಡಲಿಲ್ಲ.ಕಬ್ಬಿನ ರಸವನ್ನು ನೀಡಿದ್ದಾರೆ. ಕಠಿಣವಾಗಿದ್ದ ಜ್ಞಾನವನ್ನು ಸರಳೀಕರಣ ಮಾಡಿಕೊಟ್ಟಿದ್ದಾರೆ. ಅಕ್ಷಯವಾಗುವುದೇ ಅಧಿಕ, ಭಗವಂತನ ಅಸ್ತಿತ್ವ ಅಕ್ಷಯವಾಗಬೇಕು. ನಮ್ಮೊಳಗೆ ಅಧ್ಯಾತ್ಮದ ಪ್ರವಾಹದ ಅನ್ವೇಷಣೆ ಮಾಡಿಕೊಳ್ಳಬೇಕು.
ಮನುಷ್ಯ ಪ್ರಯೋಜನಾಕಾಂಕ್ಷಿ. ಭಗವಂತನ ಬಗ್ಗೆ ತಿಳಿದುಕೊಳ್ಳುವ ಆಕಾಂಕ್ಷೆ ಹೊಂದಿರಬೇಕು. ಅಧ್ಯಾತ್ಮದ ಮಾರ್ಗವನ್ನು ದಾಸರು ನಮಗೆ ತೋರಿಸಿಕೊಟ್ಟಿದ್ದಾರೆ. ವೇದಕಾಲದ ಜ್ಞಾನವನ್ನು ಒಂದು ಪದದಲ್ಲಿ ದಾಸರು ತಿಳಿಸಿಕೊಟ್ಟಿದ್ದಾರೆ.ಜೀವ ವಿಕಾಸದ ಪ್ರವಾಹವಾಗುವದಿವ್ಯ ಶಕ್ತಿಯನ್ನು ಹರಿದಾಸರು ತೀರಿಸಿಕೊಟ್ಟಿದ್ದಾರೆ. ನಮ್ಮ ವಿಕಾಸಕ್ಕೆ ಮಾರ್ಗತೋರಿದ್ದಾರೆ.
ತುದಿಯ ಮೊದಲು,ಕೊನೆ ಎರಡಲ್ಲೂ ಸುಖವಿದೆ ತುದಿ ಎಂದರೆ ಜನನ,ಕೊನೆ ಎಂದರೆ ಮೋಕ್ಷ ಎಂಬ ಸಂದೇಶ ಸಾರಿದ್ದಾರೆ. ದಾಸರ ಒಂದೊಂದು ಅಕ್ಷರಗಳ್ಲೂ ಸ್ಪೋಟವಿದೆ. ತತ್ವ ಜ್ಞಾನ ಗಟ್ಟಿಯಾಗಬೇಕು ಎಂದು ಅವರು ಹೇಳಿದರು.ಪ್ರಮುಖರಾದ ಪಂಡಿತ ಪ್ರಸನ್ನ ಆಚಾರ್ಯ ಜೋಶಿ, ರವಿ ಲಾತೂರಕರ, ಹಣಮಂತರರಾವ ಕುಲಕರ್ಣಿ, ಅನೀಲ ಕುಲಕರ್ಣಿ, ಜಯತೀರ್ಥ ಶರ್ಮಾ, ಲಕ್ಷ್ಮೀಕಾಂತ ಮೋಹರೀರ, ಸಂಜೀವ ಮಹಿಮತಿ, ಅರ್ಚಕ ಶ್ರೀನಿವಾಸಾಚಾರ್ಯ, ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ, ಶೇಷಗಿರಿ ಹುಣಸಗಿ, ಶಾಮಸುಂದರ ಕುಲಕರ್ಣಿ, ಸಿಂಧೂಬಾಯಿ ಕುಲಕರ್ಣಿ,ಕವಿತಾ ದಿಕ್ಷಿತ,ಭಾರ್ಗವಿ ಕುಲಕರ್ಣಿ ಪಾಲ್ಗೊಂಡರು.