ಅಧ್ಯಾತ್ಮವಿಲ್ಲದಿರೆ ಬಾಳೇ ಕತ್ತಲು: ಕಾವೇರಿ ಮಾತಾ

ಕಲಬುರಗಿ:ಮೇ.3: ಅಧ್ಯಾತ್ಮ ಶಕ್ತಿಯು ಪ್ರತಿಯೊಬ್ಬರ ಬಾಳಿಗೆ ಬೆಳಕಾಗಿದ್ದು ಅಧ್ಯಾತ್ಮ ಇಲ್ಲದಿದ್ದರೆ ಮಾನವರ ಬಾಳು ಬರಿ ಭ್ರಮೆಯ ಕತ್ತಲೆಯಲ್ಲಿರುತ್ತದೆ ಕಾರಣ ಪ್ರತಿಯೊಬ್ಬರು ಅಧ್ಯಾತ್ಮವನ್ನು ಜೀವನಕ್ಕೆ ಹೆಮ್ಮರದ ನೆರಳು ಮಾಡಿಕೊಂಡು ಆ ನೆರಳಲ್ಲಿ ಸಾಗಿದರೆ ಜೀವನ ಪಾವನವಾಗುತ್ತದೆ ಎಂದು ಶಿವಶರಣೆ ಕಾವೇರಿ ಮಾತಾ ಹೇಳಿದರು.

ಅವರು ಚಿತ್ತಾಪೂರ ತಾಲೂಕಿನ ದಂಡೋತಿಯ ಭೃಂಗಿಮಠದ ಪೂಜ್ಯರಾಗಿದ್ದ ಲಿಂಗೈಕ್ಯ ಗದಿಗಯ್ಯ ಮಹ ಸ್ವಾಮಿಗಳ 15ನೇ ಪುಣ್ಯಾರಾಧನೆ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಜೀವನದಲ್ಲಿ ಕಷ್ಟ ಸುಖ ಎರಡೂ ಕ್ಷಣಿಕವಾಗಿವೆ ಬದುಕಿನ ನಿಜವಾದ ಅರ್ಥ ಅರಿಯಬೇಕಾದರೆ ಶಿವಯೋಗಿಗಳ ವಿಚಾರ ಅವರ ಜೀವನ ಮಾರ್ಗದ ಸಾಧನೆಗಳನ್ನು ಅನುಕರಣೀಯವಾಗಿಸಿಕೊಂಡು ಯಶಸ್ವೀ ಬದುಕು ಸಾಗಿಸಬೇಕೆಂದು ಕರೆಕೊಟ್ಟರು.

ಅಧ್ಯಕ್ಷತೆವಹಿಸಿದ್ದ ಭೃಂಗಿಮಠದ ಪೀಠಾಧ್ಯಕ್ಷರಾದ ಮಲ್ಲಿಕಾರ್ಜುನ ಭೃಂಗಿಮಠ ಅವರು ಮಾತನಾಡಿ ಪ್ರತಿಯೊಬ್ಬರ ಬದುಕಲ್ಲಿ ಏರಿಳಿತಗಳು ಇರುತ್ತವೆ ಏರಿದಾಗ ಬಹಳ ಖುಷಿಯಾಗಿ ಗರ್ವಿಗಳಾಗದೇ ಇಳಿದಾಗ ಕುಗ್ಗದೇ ಅಧ್ಯಾತ್ಮ ಎಂಬ ಕವಚವನ್ನು ಜೀವನಕ್ಕೆ ಚೌಕಟ್ಟನ್ನಾಗಿ ಮಾಡಿಕೊಂಡು ಸುಂದರ ಜೀವನ ಸಾಗಿಸಬೇಕೆಂದು ಕರೆಕೊಟ್ಟರು.
ನಾನು ಎನ್ನದೇ ನಾವು ಎನ್ನಬೇಕು ಎಲ್ಲರೊಳಗೊಂದಾಗಿ ಸಮಾಜದ ವಿವಿಧ ಸ್ಥರಗಳಲ್ಲಿ ಸತ್ಯ,ನ್ಯಾಯ,ನೀತಿ ಕಾಪಾಡಲು ಸಹಕಾರಿಯಾಗಬೇಕು ಅಂದಾಗ ಮಾನವ ಕಲ್ಯಾಣ ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.

ಸಾನಿಧ್ಯವಹಿಸಿದ್ದ ಬಾಲಯೋಗಿನಿ ಜಯಶ್ರೀ ಮಾತಾಜಿ ಶ್ರೀ ಬಲಭೀಮೇಶ್ವರ ಆಶ್ರಮ ದಂಡೋತಿ ಇವರು ಮಾತನಾಡಿ ಗದಿಗಯ್ಯ ಸ್ಬಾಮೀಜಿಯವರು ಕೇವಲ ವ್ಯಕ್ತಿಯಾಗಿರಲಿಲ್ಲ ಅವರೊಬ್ಬ ಅಧ್ಯಾತ್ಮ ಶಕ್ತಿಯಾಗಿದ್ದರು,ಸರ್ವ ಜನರೊಡನೆ ಭಾವೈಖ್ಯತೆಯಿಂದ ಇರುತ್ತಲೇ ಅಧ್ಯತ್ಮ ಜ್ಞಾನದ ಮೇರುಶಿಖರ ಏರಿದರು,ಸದಾ ಮಹಿಳೇಯರು, ಪುರಿಷರು ಎಂದು ಭೇಧ ಮಾಡದೇ ಲಿಂಗಸಮಾನತೆಯ ಅರಿವನ್ನು ಭೋದಿಸುತ್ತಿದ್ದರು,ಭಕ್ತರೆ ಅವರಿಗೆ ಆಸ್ತಿಯಾಗಿದ್ದರು,ಎಂದೂ ಯಾರ ಮನಸ್ಸನ್ನೂ ನೋಯಿಸದೇ ಕಾಯಕ ಮಾಡಿ ಕೈಲಾಸ ಕಾಣುತ್ತಲೇ ಅಧ್ಯಾತ್ಮ ಅಳವಡಿಸಿಕೊಳ್ಳಲು ಭಕ್ತರಿಗೆ ಪ್ರೇರಣೆಯಾಗಿದ್ದರು ಎಂದು ತಿಳಿಸಿದರು.
ಬೆಳಿಗ್ಗೆಯಿಂದ ಪೂಜ್ಯರ ಕತ್ರ್ರು ಗದ್ದುಗೆಗೆ ಪೂಜೆ ಸಲ್ಲಿಸಲಾಯಿತು.
ಅಕ್ಕಮಹಾದೇವಿ ಅವರು ಪ್ರಸ್ತಾವಿಕ ಮಾತುಗಳನ್ನಾಡಿದರು,
ಶ್ರೀಮತಿ ಬಸಲಿಂಗಮ್ಮ ಭೃಂಗಿಮಠ, ಹಿರಿಯ ಗುರುಗಳಾದ ಜಗಧೀಶ್ವರಯ್ಯ ಕೊಂಡಂಪಳ್ಳಿ ಅವರು ಶಿವಯೋಗ ಚಿಂತನೆ ಭೋಧಿಸಿದರು,
ಕುರನಳ್ಳಿಯ ವಿಜಯಲಕ್ಷ್ಮಿ ಪಾಟೀಲ
ಪದ್ಮಾವತಿ ತೋಟದ,ಮಹಾನಂದಮ್ಮ ಕಾಳಗಿ,ನಾಗಮ್ಮ ಹಣಮಗೊಂಡ,ಸುಭದ್ರಮ್ಮ ಮಠಪತಿ,ಸುಸಿಲಾಬಾಯಿ ದಾಯಿ, ಲಕ್ಷ್ಮಿದಾಯಿ, ಮಲ್ಲಿಕಾರ್ಜುನ ಶಹಬಾದಿ, ನಾಗಮ್ಮ ಮೂಕ,ಸುಸಿಲಾಬಾಯಿ ಯಾದಗಿರಿ,ಪೂಜ್ಯರಾದ ನೀಲಕಂಠಯ್ಯ ಸ್ವಾಮಿ,ಮುಂತಾದವರು ಪಾಲ್ಗೊಂಡಿದ್ದರು
ಉಪನ್ಯಾಸಕಿ ಪವಿತ್ರ ಸ್ವಾಗತಿಸಿದರು, ಸಂಗೀತಾ ವಂದಿಸಿದರು.