ಅಧ್ಯಾತ್ಮವನ್ನು ಅದ್ಭುತವಾಗಿಸಿದ ಬಿ.ಕೆ ಪ್ರತಿಮಾ ಬಹೆನ್‌ಜಿ

ಅಧ್ಯಾತ್ಮ ಎಂದಾಕ್ಷಣ ಎಲ್ಲರಿಗೂ ಸಹಜವಾಗಿ ಅರ್ಥವಾಗುವುದು ಕಷ್ಟಸಾಧ್ಯ. ಹಾಗಂತ ಇದನ್ನು ಅರಿತವರಿಲ್ಲ ಎಂಬುದು ಮಿಥ್ಯ. ಆದರೆ ಅಧ್ಯಾತ್ಮವನ್ನು ಆರಾಧಿಸಲು ಜ್ಞಾನಾರ್ಜನೆ ಅಗತ್ಯವಿದ್ದು ಧನಾತ್ಮಕ ಚಿಂತನೆ, ಸಕಾರಾತ್ಮಕ ಮನೋಭಾವ, ಸಹೋದರತ್ವ, ಸಹನೆ ಹಾಗೂ ಚಿಂತನಶೀಲತೆಯಿಂದ ಮನುಷ್ಯನಲ್ಲಿ ಅಂತಶಕ್ತಿ ಜಾಗೃತವಾಗಿ, ಪವಿತ್ರ ಆತ್ಮವು ಪರಮಾತ್ಮನ ಪ್ರೀತಿಗೆ ಪಾತ್ರವಾಗಲು ಎಲ್ಲಕ್ಕಿಂತ ರಾಜಯೋಗ ಶಿಬಿರ ಅವಶ್ಯಕವಾಗಿದ್ದು, ಇದನ್ನು ಸಂಬೋಧಿಸುವ ಕಾರ್ಯ ಜಾಗತಿಕವಾಗಿ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮಾಡುತ್ತಿದೆ.
ಈಶ್ವರೀಯ ಸೇವೆಯನ್ನು ವಿಶ್ವದ ೧೪೨ ದೇಶಗಳು ಆರಾಧಿಸುತ್ತಿದ್ದು, ರಾಜಸ್ಥಾನದ ಮೌಂಟ್ ಅಬು ಪರ್ವತದಲ್ಲಿ ಬ್ರಹ್ಮಕುಮಾರಿ ಪ್ರಧಾನ ಕೇಂದ್ರ ಕಾರ್ಯಗತವಾಗಿದೆ. ಕರ್ನಾಟಕದಲ್ಲೂ ಸಹ ಸುಮಾರು ನೂರಕ್ಕೂ ಅಧಿಕ ಪ್ರಜಾಪಿತಾ ಈಶ್ವರೀಯ ಸೇವಾ ಕೇಂದ್ರಗಳು ಅಧ್ಯಾತ್ಮವನ್ನು ಉಣಬಡಿಸುತ್ತಿದ್ದು, ನಾಡಿನ ಮೂಕುಟಪ್ರಾಯ ಬೀದರ್‌ನಲ್ಲೂ ಈಶ್ವರೀಯ ಸೇವೆ ನಿರಂತರವಾಗಿ ಸಾಗಿದೆ. ಈ ಸೇವಾ ಕೈಂಕರ್ಯದ ಹೊಣೆ ಹೊತ್ತಿರುವವರು ಬ್ರಹ್ಮಾಕುಮಾರಿ ರಾಜಯೋಗ ಕೇಂದ್ರ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್‌ಜಿ ಅವರು.
ಪ್ರತಿಮಾ ಬಹೆನ್ ಅವರು ಮೂಲತಃ ಗುಜರಾತ ರಾಜ್ಯದ ವಡೋದರಾ ಮಹಾನಗರದಲ್ಲಿ ಜನೆವರಿ ೨೦ ೧೯೬೦ರಂದು ಶಾಂತಾ ಬೆಹೆನ್ ಹಾಗೂ ಮಣಿಲಾಲ ಸೇಠ ಅವರ ಉದರದಲ್ಲಿ ಜನಿಸಿದರು. ಇಬ್ಬರು ಸಹೋದರ ಹಾಗೂ ಓರ್ವ ಸಹೋದರಿ ಜೊತೆ ಅನ್ಯುನ್ಯವಾಗಿ ಬೆಳೆಯಲಾರಮಭಿಸಿದರು.


ತಾಯಿ ಶಾಂತಾ ಬೆಹೆನ್ ಅವರಿಗೆ ಶಿವಬಾಬಾ ಪ್ರತ್ಯಕ್ಷರಾಗಿ ಅಧ್ಯಾತ್ಮ ಮಾರ್ಗ ತೋರಿಸಿ, ಈಶ್ವರೀಯ ಸೇವೆಯಲ್ಲಿ ತೊಡಗುವಂತೆ ಪ್ರಚೋದಿಸಿದ್ದರು. ೯ ವರ್ಷದ ಬಾಲೆ ಪ್ರತಿಮಾ ಬಹೆನ್ ಅವರು ತಾಯಿಯೊಂದಿಗೆ ಸೇರಿಕೊಂಡು ವಡೋದರಾದಲ್ಲಿ ಬ್ರಹ್ಮಾಕುಮಾರಿ ಕೇಂದ್ರ ಶೋಧಿಸಿ ನಿತ್ಯ ರಾಜಯೋಗ ಶಿಬಿರದಲ್ಲಿ ಸಕ್ರಿಯವಾಗಿ ತೊಡಗಿದರು. ಅಧ್ಯಾತ್ಮದ ಜೊತೆ ಜೊತೆಗೆ ಸ್ಥಳಿಯ ಮಹಾರಾಣಿ ಕನ್ಯಾ ವಿದ್ಯಾಲಯದಲ್ಲಿ ಪಿ.ಯು.ಸಿ ಪಾಸಾದರು. ನಂತರ ೧೯೭೬ರಲ್ಲಿ ಈಶ್ವರೀಯ ಸೇವೆಗೆ ಸಂಪೂರ್ಣ ಸಮರ್ಪಿತರಾದರು. ಗುಜರಾತ ಸೌರಾಷ್ಟ್ರದ ಭಾವನಗರದಲ್ಲಿ ೧೯೭೬-೭೭ರಲ್ಲಿ, ೧೯೭೭-೭೮ರಲ್ಲಿ ಮಹಾರಾಷ್ಟ್ರ ರಾಜ್ಯಧಾನಿ ಮುಂಬೈ ನಗರದ ಮುಲುಂದ ಸೇವಾ ಕೇಂದ್ರದಲ್ಲಿ, ೧೯೭೯ರಿಂದ ೧೯೮೧ರ ವರೆಗೆ ಮೌಂಟ್ ಅಬೂದ ಸ್ಪ್ರಿಚ್ವಲ್ ಮ್ಯುಜಿಯಮ್‌ನಲ್ಲಿ ಈಶ್ವರೀಯ ಸೇವೆ ಮುಗಿಸಿ, ನವೆಂಬರ್ ೧೯೮೧ರಲ್ಲಿ ಬೀದರ್‌ಗೆ ಆಗಮಿಸಿ ಇಲ್ಲಿ ತಮ್ಮ ಸೇವೆ ಶುರು ಮಾಡಿದರು.
ಮೊದಲು ಓಲ್ಡ್ ಸೀಟಿಯಲ್ಲಿರುವ ಚೌಬಾರಾ ಹತ್ತಿರದ ಕುಲಸೂಮ್ ಗಲ್ಲಿಯಲ್ಲಿ ತಮ್ಮ ಸೇವೆ ಆರಂಭಿಸಿದರು. ಇಲ್ಲಿಯ ಜನರಿಗೆ ಹಿಂದಿ ಭಾಷೆ ಬರುವುದರಿಂದ ಮುಲತಃ ಗುಜರಾತಿನವರಾಗಿದ್ದ ಪ್ರತಿಮಾ ಬಹೆನ್‌ಜಿ ಅವರಿಗೆ ಇಲ್ಲಿ ಅಧ್ಯಾತ್ಮದ ಉಪದೇಶ ಮಾಡಲು ಕಷ್ಟವಾಗಲಿಲ್ಲ. ನಂತರ ಕರ್ನಾಟಕ ಹೌಸಿಂಗ್ ಬೋರ್ಡ್‌ನ ಎಲ್.ಐ.ಜಿ-೪೭ರಲ್ಲಿ ಬಾಡಿಗೆ ಸೇವಾ ಕೇಂದ್ರದಲ್ಲಿ, ನಂತರ ಎಮ್..ಆಯ್.ಜಿ-೨೭ನಲ್ಲಿ ಈಶ್ವರೀಯ ಸೇವೆ ನಡೆಸಿ, ೧೯೯೬ರಲ್ಲಿ ಜನವಾಡ ರಸ್ತೆಯಲ್ಲಿರುವ ಜೆ.ಪಿ ನಗರದ ಈಗಿನ ಪಾವನಧಾಮ ಅವರಣದಲ್ಲಿ ರಾಜಯೋಗ ಶಿಕ್ಷಣ ಆರಂಭಿಇಸಿದರು.
ಬಿ.ಕೆ ಪ್ರತಿಮಾ ಬಹೆನ್‌ಜಿ ಅವರು ಜಿಲ್ಲೆಯ ಸುಮಾರು ೫೦೦ಕ್ಕೂ ಅಧಿಕ ಹಳ್ಳಿಗಳಲ್ಲಿ ಸಂಚರಿಸಿ ಅಧ್ಯಾತ್ಮದ ಜ್ಞಾನ ಬಿತ್ತರಿಸಿದರು. ನೆರೆಯ ತೆಲಂಗಾಣಾದ ಜಹಿರಾಬಾದ್, ಜಿಲ್ಲೆಯ ಬೀದರ್ ನಗರದ ನೌಬಾದ್, ರಾಮನಗರ, ಹುಮನಾಬಾದ್, ಭಾಲ್ಕಿ, ಮನ್ನಾಯಿಖೆಳ್ಳಿ, ಮನ್ನಳ್ಳಿ, ಹಳ್ಳಿಖೇಡ್(ಬಿ), ಜನವಾಡ ಸೇರಿದಂತೆ ಸುಮಾರು ೧೬ ಕಡೆಗಳಲ್ಲಿ ಬ್ರಹ್ಮಾಕುಮಾರಿ ಕೇಂದ್ರಗಳನ್ನು ಪ್ರಾರಂಭಿಸಿದರು. ಈಶ್ವರೀಯ ಸೇವೆಗಾಗಿ ಸುಮಾರು ೫೦ ಸಹೋದರಿಯರು ಪ್ರತಿಮಾ ಬಹೆನ್‌ಜಿ ಅವರ ನೇತೃತ್ವದಲ್ಲಿ ಸಮರ್ಪಿತರಾದರು.
ಜಿಲ್ಲೆಯಲ್ಲಿ ಅಧ್ಯಾತ್ಮವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಸಾಮಾಜಿಕ, ಊದ್ಯೋಗಿಕ, ಕೈಗಾರಿಕೆ, ಶೈಕ್ಷಣಿಕ, ವೈದ್ಯಕೀಯ, ನ್ಯಾಯಾಂಗ, ಮಹಿಳಾ ಸಶಕ್ತಿಕರಣ, ಮಕ್ಕಳ ಬೇಸಗೆ ಶಿಬಿರ, ವ್ಯಸನಮುಕ್ತಿ ಶಿಬಿರ, ಸೇರಿದಂತೆ ವಿವಿಧ ವಿಭಾಗಗಗಳಲ್ಲಿ ಅನೇಕ ರಚನಾತ್ಮಕ ಉಚಿತ ಆರೋಗ್ಯ ಚಟುವಟಿಕೆಗಳಿಗೆ ಮುಂದಾದರು. ಜಿಲ್ಲೆಯ ಐನೂರಕ್ಕೂ ಅಧಿಕ ಗ್ರಾಮಗಳಲ್ಲಿ ಮೂರು ದಿವಸಗಳ ವರೆಗೆ ರಾಜಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ.
೨೦೧೨ರಲ್ಲಿ ವಿದ್ಯಾಲಯದ ೭೫ನೇ ವರ್ಷಾಚರಣೆ ನಿಮಿತ್ಯ ಸಾಯಿ ಸ್ಕೂಲ್ ಮೈದಾನದಲ್ಲಿ ೧೨ ಜ್ಯೋತಿರ್ಲಿಂಗಗಳ ಪ್ರದರ್ಶನ, ಪ್ರವಚನ ಮಾಲಿಕೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕೈಗೊಂಡರು. ಪ್ರತಿ ವರ್ಷ ಮಹಾಶಿವರಾತ್ರಿ ನಿಮಿತ್ಯ ಜ್ಯೋತಿರ್ಲಿಂಗಗಗಳ ಪ್ರದರ್ಶನ ನಿರಂತರವಾಗಿ ನಡೆಯುತ್ತಿದೆ. ಕೇಂದ್ರದ ಇತರೆ ಶಾಖೆಗಳಲ್ಲಿ ಮಹಾಶಿವರಾತ್ರಿ ಕಾರ್ಯಕ್ರಮಗಳು ಪ್ರತಿ ವರ್ಷ ನಡೆಯುತ್ತಿವೆ. ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ರಕ್ಷಾ ಬಂಧನ ಹಬ್ಬದ ನಿಮಿತ್ಯ ಸ್ನೇಹ ಮಿಲನ ಕಾರ್ಯಕ್ರಮ, ವಿಜಯದಶಮಿ ನಿಮಿತ್ಯ ದೇವಿಯ ಸ್ಥಾಪನೆ ಹಾಗೂ ಪೂಜನ ಕಾರ್ಯಕ್ರಮ, ದೀಪಾವಳಿ ನಿಮಿತ್ಯ ಲಕ್ಷ್ಮೀ ಅವ್ಹಾನ ಕಾರ್ಯಕ್ರಮ, ಮಕರ ಸಂಕ್ರಾಂತಿ ನಿಮಿತ್ಯ ಅರಿಶಿಣ-ಕುಂಕುಮ ಕಾರ್ಯಕ್ರಮ, ಮಹಾಶಿವರಾತ್ರಿ ಅಂಗವಾಗಿ ಶಿವಧ್ವಜಾರೋಹಣ ಮತ್ತು ೧೨ ಜ್ಯೋತಿರ್ಲಿಂಗಗಳ ಪ್ರದರ್ಶನ, ಮಹಿಳಾ ದಿನಾಚರಣೆ ನಿಮಿತ್ಯ ಮಹಿಳಾ ಸಶಕ್ತಿಕರಣ ಕಾರ್ಯಕ್ರಮ ಇತ್ಯಾದಿ ಆಚರಣೆಗಳು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದ್ದಾರೆ.
ಜೂನ್ ೨೧ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಯೋಗಾಭ್ಯಾಸ ಹಾಗೂ ರಾಜಯೋಗ ಶಿಬಿರದ ಮಹತ್ವ ಬಗ್ಗೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಜುಲೈ ೧ರಂದು ಪತ್ರಿಕಾ ದಿನಾಚರಣೆ ನಿಮಿತ್ಯ ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ಪತ್ರಕರ್ತರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಆಯೋಜಿಸುತ್ತಿರುವರು.
೨೦೧೭ರಲ್ಲಿ ಯುವ ವಿಭಾಗದಿಂದ ದೇಶಾದ್ಯಂತ ಜರುಗಿದ ರಥಯಾತ್ರೆಯು ಬೀದರ್‌ಗೂ ಬರಮಾಡಿಕೊಂಡು ಸಾರ್ವಜನಿಕರಿಗೆ ಯಾತ್ರೆಯ ಮಹತ್ವ ಅರಿಯಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಅವಕಾಶ ಮಾಡಿಕೊಟ್ಟರು. ಬೀದರ್‌ನಲ್ಲಿ ಈಶ್ವರೀಯ ಸೇವೆ ಆರಂಭವಾಗಿ ೫೦ ವಸಂತಗಳು ಪುರೈಸಿದ ಸವಿನೆನಪಿಗಾಗಿ ನಗರದೆಲ್ಲೆಡೆ ಅಭೂತಪೂರ್ವ ನಗರ ಪ್ರದಕ್ಷಣೆ ಹಾಗೂ ಐತಿಹಾಸಿಕ ಕಾರ್ಯಕ್ರಮ ಆಯೋಜಿಸಿ ೫೦ ಜನ ಅಧ್ಯಾತ್ಮ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
೧೦೩ ವರ್ಷಗಳು ಗತಿಸಿ ಇತ್ತಿಚೀಗೆ ದೇಹ ತ್ಯಾಗ ಮಾಡಿದ ದಾದಿ ಜಾನಕಿ ಅವರನ್ನು ಬೀದರ್‌ಗೆ ಬರಮಡಿಕೊಂಡು ಭಕ್ತಾದಿಗಳಿಗೆ ದಾದಿಯ ದಿವ್ಯ ದರುಶನ ಪಡೆಯಲು ಅವಕಾಶ ನೀಡಿದರು.
ಹೀಗೆ ತಮ್ಮ ಮೂರು ದಶಕಗಳ ಅದ್ಯಾತ್ಮಿಕ ಬದುಕಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ರಾಜಕಾರಣಿಗಳು, ವೈದ್ಯರು, ನ್ಯಾಯವಾದಿಗಳು, ಅಧಿಕಾರಿಗಳು, ಶಿಕ್ಷಕರು, ಯುವಜನರು ಹಾಗೂ ಪತ್ರಕರ್ತರನ್ನು ರಾಜದ್ಥಾನದಲ್ಲಿರುವ ಮೌಂಟ್ ಅಬು ಪರ್ವತದಲ್ಲಿನ ಬ್ರಹ್ಮಾಕುಮಾರಿ ಪ್ರಧಾನ ಕೇಂದ್ರಕ್ಕೆ ಕರೆದೊಯ್ಯುವ ಮೂಲಕ ಈಶ್ವರೀಯ ಜ್ಞಾನ ಹಂಚಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ಜೊತೆಗೆ ಸೌರಾಷ್ಟ್ರ ಸೋಮನಥ, ಉದಯಪೂರ ಹತ್ತಿರದ ಶ್ರೀನಿವಾಸ ಮಂದಿರ, ಹಲ್ದಿ ಘಾಟಿ ಪ್ರದೇಶದಲ್ಲಿನ ಮಹಾರಾಣಾ ಪ್ರತಾಪ ಅರಮನೆ, ಉದಯಪೂರ ಸೀಟಿ ಪ್ಯಾಲೆಸ್, ಗುಜರಾತಿನಲ್ಲಿನ ಅಂಬಾಜಿ ಭವಾನಿ ಮಂದಿರ ದರುಶನಕ್ಕೂ ಅವಕಾಶ ಮಾಡಿಕೊಟ್ಟಿದ್ದಾರೆ. ಮೌಂಟ್ ಅಬು ಪರ್ವತದ ಬುಡದಲ್ಲಿನ ಶಾಂತಿವನದಲ್ಲಿನ ಭೋಲೆನಾಥನ ಭಂಡಾರ, ಸಂಪೂರ್ಣ ಸೋಲಾರಯುಕ್ತ ಅತ್ಯಾಧುನಿಕ ಅಡಿಗೆ ಮನೆ, ಪ್ರಕಾಶಮಣಿ ಸ್ತಂಭ, ಸ್ಪ್ರಿಚ್ವಲ್ ಮ್ಯುಜಿಯಮ್, ಒಟ್ಟಿಗೆ ೫೦ ಸಾವಿರ ಅಧ್ಯಾತ್ಮ ಜೀವಿಗಳು ಕುಳಿತುಕೊಳ್ಳಲು ನಿರ್ಮಿಸಿದ ಡೈಮಂಡ್ ಹಾಲ್, ಮೆಡಿಟೇಶನ್ ಹಾಲ್, ಒಟ್ಟು ೨೪ ಭಾಷೆಗಳಲ್ಲಿ ಕ್ಷಣಾರ್ಧದಲ್ಲಿ ತರ್ಜುಮೆಗೊಂಡು ಬಿತ್ತರವಾಗುವ ಸುಸಜ್ಜಿತ ವಿ.ವಿ.ಐ.ಪಿ ತರಬೇತಿ ಭವನ, ಆನಂದ ಸರೋವರ, ಗೋಶಾಲೆ, ಏಷ್ಯಾ ಖಂಡದ ಅತತ ದೊಡ್ಡದಾದ ಸೋಲಾರ್ ಪ್ರಾಜೆಕ್ಟ್, ವಿಶ್ವದ ಶ್ರೇಷ್ಠ ವೃದ್ಧಾಶ್ರಮಗಳಲ್ಲೊಂದಾದ ಹಿರಿಯರ ಆಶ್ರಮ, ತಪೋವನ, ಮೌಂಟ್ ಅಬು ಪರ್ವತದಲ್ಲಿರುವ ಪೀಸ್ ಪಾರ್ಕ್, ಗುರುಶಿಖರ, ಲಕ್ಕಿಲೇಹ, ಧಿಲವಾಡಾ ಜೈನ ಮಂದಿರ, ಮೌಂಟ್ ಮ್ಯುಜಿಯಮ್, ಅಚಲಘಡ, ಪಾಂಡವ ವನ ಸೇರಿದಂತೆ ಇನ್ನು ಅನೇಕ ಧಾರ್ಮಿಕ ಮತ್ತು ಅಧ್ಯಾತ್ಮ ತಾಣಗಳ ದರುಶನಕ್ಕೆ ಅವಕಾಶ ನೀಡುತ್ತಿರುವರು.
ಪ್ರತಿ ದಿನ ಬೆಳಿಗ್ಗೆ ೭.೦೦ ಗಂಟೆಯಿಂದ ೮.೩೦ ಗಂಟೆ ವರೆಗೆ ಮುರ್ಲಿ ಹಾಗೂ ಅಧ್ಯಾತ್ಮ ತರಗತಿ ನಡೆಸಸುವರು. ದಿನಂಪ್ರತಿ ಈಶ್ವರೀಯ ಸೇವಾನುಭವ ಹಾಗೂ ರಾಜಯೋಗ ಶಿಬಿರದ ಮಹತ್ವ ವಿವರಿಸುತ್ತಾರೆ. ಸಂಜೆ ಸಹ ರಾಜಯೋಗ ಶಿಬಿರ ಜರುಗುತ್ತದೆ. ಪ್ರತಿ ತಿಂಗಳ ಮೂರನೇ ರವಿವಾರದಂದು ವಿಶ್ವ ಶಾಂತಿ ದಿನಾಚರಣೆ ನಿಮಿತ್ಯ ಅಂದು ಸಂಪೂರ್ಣ ಮೌನ ಆಚರಣೆ ನಡೆಯುತ್ತದೆ. ಜೂನ್ ತಿಂಗಳಲ್ಲಿ ಹಾಗೂ ಜನೆವರಿ ತಿಂಗಳಲ್ಲಿ ಪ್ರತಿಮಾ ಬಹೆನ್‌ಜಿ ಅವರ ನೇತೃತ್ವದಲ್ಲಿ ಭಟ್ಟಿ ಕಾರ್ಯಕ್ರಮ ಹಾಗೂ ಜನೆವರಿ ೧೮ರಂದು ಬ್ರಹ್ಮಾಬಾಬಾ ಅವರ ಸ್ಮೃತಿ ದಿವಸದ ನಿಮಿತ್ಯ ಅವ್ಯಕ್ತ ದಿನಾಚರಣೆ, ಜೂನ್ ೨೪ರಂದು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಥಮ ಅಡಳಿತಾಧಿಕಾರಿಣಿ ಬಿ.ಕೆ ಜಗದಂಬಾ ಸರಸ್ವತಿ ಅವರ ಸ್ಮೃತಿ ದಿನದಂದು ’ಮಮ್ಮಾ ದಿನ’ ಆಚರಿಸಲಾಗುತ್ತಿದೆ. ಸಂಸ್ಥೆಯ ದ್ವಿತೀಯ ಅಡಳಿತಾಧಿಕಾರಿಣಿ ಡಾ.ಪ್ರಕಾಶಮಣಿ ದಾದಿಜಿ ಅವರ ಸ್ಮೃತಿ ದಿವಸವನ್ನು ’ವಿಶ್ವ ಬಂಧತ್ವ ದಿನ’ ಎಂದು ಆಚರಿಸಲಾಗುತ್ತಿದೆ. ಅದೇ ರೀತಿ ವಿಶ್ವ ಆರೋಗ್ಯ ದಿನ, ವಿಶ್ವ ಕ್ಷಯರೋಗ ದಿನ, ವೈದ್ಯಕೀಯ ದಿನಾಚರಣೆ, ವಿಶ್ವ ಕ್ಯಾನ್ಸರ್ ದಿನ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ವಿವಿಧ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲಾಗುತ್ತದೆ.
ಪ್ರತಿ ದಿನ ನಸುಕಿನ ೩.೦೦ ಗಂಟೆಗೆ ಬ್ರಾಹ್ಮಿ ಮಹೂರ್ತದಲ್ಲಿ ಎದ್ದು ಬೆಳಿಗ್ಗೆ ಹಾಗೂ ಸಾಯಂಕಾಲ ತರಗತಿ ನಡೆಸುವರು. ಬಿ.ಕೆ ಗುರುದೆವಿ, ಬಿ.ಕೆ ಪ್ರಭಾಕರ್, ಬಿ.ಕೆ ಮಂಗಲಾ, ಬಿ.ಕೆ ಜಗದೀಶ, ಬಿ.ಕೆ ಶಿಲ್ಪಾ, ಬಿ.ಕೆ ರೇಣುಕಾ, ಬಿ.ಕೆ ಮರೂತಿ ಸೇರಿದಂತೆ ಹಲವಾರು ಸಹೋದರ, ಸಹೋದರಿಯರು ಪ್ರತಿಮಾ ಬಹೆನ್‌ಜಿ ಅವರ ಕಾರ್ಯಕ್ಕೆ ಸಾಥ ನೀಡುತ್ತಿರುವರು.
ಹೀಗೆ ಬಹೆನ್‌ಜಿ ಅವರು ತನ್ನ ೬೦ನೇ ವಯಸ್ಸಿನಲ್ಲೂ ಕ್ರಿಯಾಶೀಲರಾಗಿ ಆಶ್ರಮಕ್ಕೆ ಬರುವ ಅಧ್ಯಾತ್ಮ ಜೀವಿಗಳಿಗೆ ಜ್ಞಾನದಾಹ ಉಣಬಡಿಸಿ, ಮನ ತೃಪ್ತಿಪಡಿಸುತ್ತಿರುವರು. ಜಿಲ್ಲೆಯಲ್ಲಿ ಒಂದು ವಿಶಾಲ ಅಧ್ಯಾತ್ಮ ತರಬೇತಿ ಧಾಮ ನಿರ್ಮಿಸುವ ಮಹತ್ವಕಾಂಕ್ಷಿ ಉಳ್ಳುವರಾಗಿರುವ ಇವರು ತನ್ನ ಆರೋಗ್ಯಕ್ಕಿಂತ ಕೇಂದ್ರದ ಪ್ರವರ್ತಕರ ಹಾಗೂ ಸೇವಾಧಾರಿಗಳ ಹಿತ ಬಯಸುವ ಅಪರೂಪದ ವ್ಯಕ್ತಿತ್ವ ಅವರದು. ಅವರು ಸದಾ ಕೊಡುವ ಕೊಡುಗೈ ದಾನಿಯಾಗಿದ್ದು ಯಾವ ಫಲಾಪೇಕ್ಷೆಯಿಲ್ಲದೇ ೧೨ನೇ ಶತಮಾನದಲ್ಲಿ ಶರಣರ ವಾಣಿಯಂತೆ ನುಡಿದಂತೆ ನಡೆದು ತೋರಿಸಿ, ನೈತಿಕತೆ ಪ್ರದರ್ಶಿಸಿದ್ದಾರೆ. ಅವರ ತ್ಯಾಗ ಹಾಗೂ ಸೇವಾ ಮನೋಭಾವ ಇತರೆ ಸಾಧು ಸಂತರಿಗೆ ಮಾದರಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.:-
ಶಿವಕುಮಾರ ಸ್ವಾಮಿ, ಅಜೀವ ಸದಸ್ಯರು, ಮಾಧ್ಯಮ ವಿಭಾಗ, ಬ್ರಹ್ಮಾಕುಮಾರಿ ರಾಜಯೋಗ ಕೇಂದ್ರ, ಮೌಂಟ್ ಅಬು, ರಾಜಸ್ಥಾನ.