ಅಧ್ಯಾತಿಕತೆ ಶ್ರದ್ದೆಗಳಿಂದ ಮುಕ್ತರಾಗಿ – ಡಾ.ಸುಶೀಲಮ್ಮ

ಕೋಲಾರ,ಜ.೫: ಕಾಯಕವೇ ಕೈಲಾಸ ಎಂಬಂತೆ ವೃತ್ತಿ, ಪ್ರವೃತ್ತಿಗಳನ್ನು ಪ್ರಾಮಾಣಿಕತೆ, ಆಧ್ಯಾತ್ಮಿಕ ಶ್ರದ್ಧೆಗಳಿಂದ ಮುಕ್ತರಾಗಬೇಕೆಂದು ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಧರ್ಮದರ್ಶಿ ಮಾತಾ ಡಾ. ಸುಶೀಲಮ್ಮ ಅಭಿಪ್ರಾಯಪಟ್ಟರು.
ನಗರದ ಕೆ.ಇ.ಬಿ ಸಮುದಾಯ ಭವನದಲ್ಲಿ ಮಾನವ ಅಭಿವೃದ್ಧಿ ಯೋಗ ಟ್ರಸ್ಟ್, ಸ್ವರ್ಣಭೂಮಿ ಫೌಂಡೇಶನ್ ಕರ್ನಾಟಕ, ಅಂಚೆ ನೌಕರರ ಸಾಹಿತ್ಯ ಬಳಗ ಬೆಂಗಳೂರು, ಜಿಲ್ಲಾ ಕನ್ನಡಸಿರಿ ಸಾಹಿತ್ಯ ವೇದಿಕೆ, ಜಿಲ್ಲಾ ಸಿರಿಗನ್ನಡ ವೇದಿಕೆ, ಜಿಲ್ಲಾ ದಾಸ ಸಾಹಿತ್ಯ ಪರಿಷತ್ತು, ಹರಿಕೃಷ್ಣ ಜಾನಪದ ಕಲಾ ಟ್ರಸ್ಟ್ ಸುಗಟೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಕ್ಷರ ವಿಜಯ ಮಾಸ ಪತ್ರಿಕೆ ಬಿಡುಗಡೆ ಪ್ರಯುಕ್ತ ಪ್ರಶಸ್ತಿ ಪ್ರದಾನ, ಜಿಲ್ಲಾ ಸಂಗೀತೋತ್ಸವ, ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ಡಾ.ಪೋಸ್ಟ್ ನಾರಾಯಣಸ್ವಾಮಿ ಅವರ ಸೇವಾ ನಿವೃತ್ತಿ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಡಾ. ಪೋಸ್ಟ್ ನಾರಾಯಣಸ್ವಾಮಿ ಮಾತನಾಡಿ “ಸತ್ ಸಂಕಲ್ಪ ಸದಾ ಸಿದ್ಧಿ” ಎಂಬ ಮಂತ್ರದಂತೆ ಮತ್ತು ಸ್ವಾಮಿ ವಿವೇಕಾನಂದರ ಸರಳ ಜೀವನ ಉನ್ನತ ಚಿಂತನೆ’ ಎಂಬ ನುಡಿಯಂತೆ ನಾವು ವೃತ್ತಿ ಪ್ರವೃತ್ತಿಗಳನ್ನು ನಮ್ಮ ಜೀವನದಲ್ಲಿಸಾಕ್ಷಾತ್ಕರಿಸಿಕೊಳ್ಳಬೇಕೆಂಬುದನ್ನು ಅಂಚೆ ರತ್ನ ಡಾ.ಪೋಸ್ಟ್ ನಾರಾಯಣಸ್ವಾಮಿ ತಮ್ಮ ನಿವೃತ್ತಿ ಏಕೆ ಮತ್ತು ಯಾವುದಕ್ಕೆ ಎಂಬ ಕೃತಿಯಲ್ಲಿ ಅಚ್ಚುಕಟ್ಟಾಗಿ ಬಣ್ಣಿಸಿದ್ದಾರೆ ಎಂದರು.
ನಿಕಟ ಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ನಾಗನಂದಾ ಕೆಂಪರಾಜ್ ಮಾತಾನಾಡಿ, ನಮ್ಮಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ನಿರಂತರ ಕಟ್ಟುವ ಕಾರ್ಯ ನಡೆಯಬೇಕಾಗಿದೆ ಎಂದರು.
ವೃತ್ತಿ ಏಕೆ ಮತ್ತು ನಿವೃತ್ತಿ ಯಾವುದಕ್ಕೆ ಎಂಬ ಸಿದ್ದಾಂತಗಳು ಇರುವುದಿಲ್ಲ. ಅದು ಅವರವರ ಭಾವಕ್ಕೆ ನಿಲುಕುತ್ತದೆ. ಕವಿಯಾದವರುಒಬ್ಬ ಕವಿ ತನ್ನ ಬಾಹ್ಯ ಜಗತ್ತನ್ನು ಗ್ರಹಿಸಿ ತನ್ನ ಬದುಕಿನ ಅನುಭವವನ್ನು ಸಂಚಯಿಸಿ ಆ ಅನುಭವಗಳ ಸ್ಫೂರ್ತಿ ಒದಗಿದಾಗ ಒಂದು ಕಾವ್ಯ ಸ್ವರೂಪದಲ್ಲಿ ಲಯ ಪ್ರಾಸಗಳೊಂದಿಗೆ ಛಂದೋಬದ್ಧವಾಗಿ ಅಭಿವ್ಯಕ್ತಿಗೊಳಿಸಿದಾಗ ಅದು ಕವಿತೆಯಾಗುತ್ತದೆ ಎಂದು ಸರಳವಾಗಿ ಹೇಳಬಹುದು ಎಂದು ಅಭಿಪ್ರಾಯ ಪಟ್ಟರು. .
ಸ್ವರ್ಣಭೂಮಿ ಫೌಂಡೇಶನ್ ಕರ್ನಾಟಕದ ರಾಜ್ಯಾಧ್ಯಕ್ಷ ಬಿ.ಶಿವಕುಮಾರ್ ಮಾತನಾಡಿ ಬೇಂದ್ರೆ ಹಾಡಿನಂತೆ ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಎಂಬ ಸಾಲುಗಳಂತೆ ನಾರಾಯಣಸ್ವಾಮಿ ರವರು ಕೂಡ ಬಡತನದಿಂದ ಬಂದು ಇಂದು ಅನೇಕ ಕೃತಿಗಳನ್ನು ಸಾರಸ್ವತ ಲೋಕದಲ್ಲಿ ಹೆಸರುವಾಸಿಯಾದವರು ಎಂದರು.
ಜಿಲ್ಲಾ ಕನ್ನಡ ಸಿರಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ ಸುಬ್ಬರಾಮಯ್ಯ ಮಾತಾನಾಡಿ, ಅವರ ಕವಿತೆಗಳಲ್ಲಿ ಸಮಾಜದ ಸೂಕ್ಷ್ಮತೆ ಇದೆ.ಸಮುದಾಯದ ಸಹೃದಯತೆ ಅಡಗಿದೆ. ಸೃಜನಶೀಲತೆಯ ಮನಸ್ಸಿದೆ ಹಾಗಾಗಿ ಕೋಲಾರ ಜಿಲ್ಲೆಯಲ್ಲಿ ಹಲವು ಸನ್ನಿವೇಶಗಳಾದ ಕರೋನ, ನಮ್ಮೂರ ಶಾಲೆ, ಅಪ್ಪ, ತಾಯಿ, ಪ್ರಕೃತಿ, ಮಹಿಳೆ, ಗೆಳತಿ, ಇಂತಹ ಅನೇಕ ಕವಿತೆಗಳು ಒಳಪುಟಗಳಲ್ಲಿ ಕಂಡುಕೊಳ್ಳಬಹುದು ಎಂದರು.
ಅಂಚೆ ನೌಕರರ ರಾಜ್ಯಾಧ್ಯಕ್ಷ ಟಿ.ಸುಬ್ರಮಣ್ಯ ಮಾತಾನಾಡಿ, ಪತ್ರಿಕೆಗಳು ಮೂಲ ಸತ್ವವನ್ನು ಕಳೆದುಕೊಂಡಿವೆ ಪ್ರಸ್ತುತ ದಿನಗಳಲ್ಲಿ. ಇಂತಹ ಸಂದರ್ಭಗಳಲ್ಲಿಯೂ ಕೂಡ ಪೋಸ್ಟ್ ನಾರಾಯಣಸ್ವಾಮಿ ರವರು ದಿಟ್ಟತನದಿಂದ ಒಂದು ಹೆಜ್ಜೆ ಮುಂದೆ ಇಟ್ಟು ಇಡೀ ಸಮಾಜಕ್ಕೆ ಕೊಡುಗೆಯಾಗಿ ಪತ್ರಿಕೆಯನ್ನು ಹೊರತಂದಿದ್ದಾರೆ. ಜನಸಮುದಾಯದಕ್ಕೆ ಪ್ರತಿಸ್ಪಂದಿಸಲಿ ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.