ಅಧ್ಯಯನ ಮತ್ತು ಸತತ ಪರಿಶ್ರಮದ ಫಲವೇ ಡಾಕ್ಟರೇಟ್ ಪದವಿ:ಪ್ರೊ. ಸ.ಚಿ.ರಮೇಶ

ಬೀದರ: ನ.16:ಸತತ ಅಧ್ಯಯನ, ಕಠಿಣ ಪರಿಶ್ರಮದ ಫಲವೇ ಡಾಕ್ಟರೇಟ್ ಪದವಿಯಾಗಿದೆ. ವಿಷಯಾಧಾರಿತ ಅಧ್ಯಯನ, ವಸ್ತುವಿಷಯಗಳ ಸಂಗ್ರಹ, ನಿರಂತರ ಬರೆಯುವಿಕೆ, ಪರಿಶೀಲಿಸುವಿಕೆಯಿಂದ ಸಂಶೋಧನಾ ವಿದ್ಯಾರ್ಥಿಗಳ ಅವಿರತ ಶ್ರಮದಿಂದ ಒಬ್ಬ ನಿಜವಾದ ಡಾಕ್ಟರೇಟ್ ಪದವೀಧರರಾಗಿ ಹೊರಬರಲು ಸಾಧ್ಯ. ಇಂತಹ ಹಲವಾರು ಸಂಶೋಧನೆಗಳು ಕಾಲೇಜಿನ ವತಿಯಿಂದ ನಡೆಯಲಿ. ವರ್ಷಕ್ಕೆ ಹತ್ತಾರು ಸಂಶೋಧನಾ ವಿದ್ಯಾರ್ಥಿಗಳು ಡಾಕ್ಟರೇಟ್ ಪಡೆಯಲಿ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸ.ಚಿ.ರಮೇಶ ನುಡಿದರು.

ಕರ್ನಾಟಕ ಕಾಲೇಜು, ಹೈದರಾಬಾದ ಕರ್ನಾಟಕ ಸಂಶೋಧನಾ ಕೇಂದ್ರದ ವತಿಯಿಂದ ಪಿಎಚ್.ಡಿ. (ಡಾಕ್ಟರೇಟ್) ಪದವಿ ಪುರಸ್ಕøತರಿಗೆ ಗೌರವ ಸನ್ಮಾನ ಹಾಗೂ ಔತಣಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬೀದರ ಜಿಲ್ಲೆ ಇದೊಂದು ಪವಿತ್ರ ಶರಣರ ನಾಡು. ಇಲ್ಲಿಯ ವಾತಾವರಣ, ಶಿಕ್ಷಣ, ಕೊಡುವ ಪ್ರೀತಿ, ನಡೆದುಕೊಳ್ಳುವ ರೀತಿ, ಐತಿಹಾಸಿಕ ಸ್ಥಳಗಳು ಎಲ್ಲವೂ ಸ್ನೇಹಮಯವಾಗಿದೆ. ಕನ್ನಡಕ್ಕೆ ಭಾಲ್ಕಿ ಮಠದ ಕೊಡುಗೆ ಅಪಾರವಾಗಿದೆ. ಇಂತಹ ನಾಡಿನಲ್ಲಿ ಡಾಕ್ಟರೇಟ್ ಪದವಿ ಪುರಸ್ಕøತರ ಸಂಖ್ಯೆ ಉತ್ತರೋತ್ತರವಾಗಿ ಬೆಚ್ಚಾಗಲಿ ಎಂದು ನುಡಿದರು.

ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿ ಸಂಶೋಧಕರಾದ ಡಾ. ಅಶೋಕ ಕೋರೆ, ಡಾ. ಸಂಜೀವಕುಮಾರ ಜುಮ್ಮಾ, ಡಾ. ದತ್ತಾತ್ರೆಯ ಹಡಪದ ಹಾಗೂ ಡಾ. ಸಿದ್ಧರಾಮ ಭೀಮಣ್ಣ ಅವರು ನಮ್ಮ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪಿಎಚ್.ಡಿ. ಮುಗಿಸಿದ್ದು ನಮಗೆ ಹಾಗೂ ಕಾಲೇಜಿಗೆ ಹೆಮ್ಮೆ ತರುವ ವಿಷಯವಾಗಿದೆ. ಪ್ರಶ್ನೆಗಳ ಸುರಿಮಳೆಯಿಂದ, ಮಾಹಿತಿ ಸಂಗ್ರಹಿಸುವುದರಿಂದ ಮಾತ್ರ ಸಮಾಜಕ್ಕೆ ಉತ್ತಮ ಸಂದೇಶ ನೀಡಿ, ಡಾಕ್ಟರೇಟ್ ಪಡೆದುಕೊಳ್ಳಬಹುದು. ಇದರ ಹಿಂದೆ ತಂದೆ-ತಾಯಿ, ಗುರು-ಹಿರಿಯರ ಸಹಕಾರ ಮತ್ತು ವಿದ್ಯಾರ್ಥಿಯ ಸತತ ಪರಿಶ್ರಮವಿರುತ್ತದೆ. ಇಂದು ಯಶಸ್ವಿಯಾಗಿ ಪಿಎಚ್.ಡಿ. ಮುಗಿಸಿ ಡಾಕ್ಟರೇಟ್ ಪದವಿ ಪಡೆದಿರುವ ತಮ್ಮೆಲ್ಲರ ಭವಿಷ್ಯದ ಜೀವನ ಉಜ್ವಲವಾಗಲಿ. ನಿಮ್ಮಿಂದ ಕಾಲೇಜಿನ ಕೀರ್ತಿ ಹರಡಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಕರಾಶಿ ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ.ಶೆಟಕಾರ ಮಾತನಾಡಿ “ಸಂಶೋಧನಾ ಕೇಂದ್ರ ಆರಂಭಿಸಿ, ಪ್ರತೀ ವರ್ಷ ಹಲವಾರು ವಿದ್ಯಾರ್ಥಿಗಳಿಗೆ ಪಿಎಚ್.ಡಿ, ಮಾಡುವಂತೆ ಪ್ರೋತ್ಸಾಹಿಸಿ ಅವರನ್ನು ಸನ್ಮಾರ್ಗದ ಕಡೆಗೆ ಕೊಂಡೊಯ್ಯುತ್ತಿರುವ ಡಾ. ಜಗನ್ನಾಥ ಹೆಬ್ಬಾಳೆಯವರ ಕಾರ್ಯ ಶ್ಲಾಘನೀಯ. ತಮ್ಮ ಸೇವೆ ಇದೇ ರೀತಿ ಸಾಗಲಿ. ನಮ್ಮ ಸಹಕಾರ ಸದಾ ಇರುತ್ತದೆ ಎಂದು ಭರವಸೆ ನೀಡಿದರು.

ವೇದಿಕೆ ಮೇಲೆ ಕರಾಶಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ, ಕುಲಪತಿಗಳಾದ ಪ್ರೊ. ಸ.ಚಿ.ರಮೇಶ ಅವರ ಧರ್ಮಪತ್ನಿ ಶ್ರೀಮತಿ ಚೈತ್ರಾ ರಮೇಶ, ಹಿರಿಯ ಸಾಹಿತಿ ಡಾ. ಸೋಮನಾಥ ಯಾಳವಾರ ಉಪಸ್ಥಿತರಿದ್ದರು.

ಪ್ರಾಚಾರ್ಯ ಡಾ.ಎಂ.ಎಸ್.ಚೆಲ್ವಾ ಸ್ವಾಗತಿಸಿದರು. ಎಂ.ಎ. ಕನ್ನಡ ವಿದ್ಯಾರ್ಥಿ ಮಹಾರುದ್ರ ಡಾಕುಳಗೆ ನಿರೂಪಿಸಿದರು. ಡಾ. ಮಹಾನಂದ ಮಡಕಿ ವಂದಿಸಿದರು. ಕೊನೆಯಲ್ಲಿ ಪಿಎಚ್.ಡಿ. (ಡಾಕ್ಟರೇಟ್) ಪದವಿ ಪುರಸ್ಕøತರಾದ ಡಾ. ಸಂಜೀವಕುಮಾರ ಜುಮ್ಮಾ, ಡಾ. ಅಶೋಕ ಕೋರೆ, ಡಾ. ದತ್ತಾತ್ರೆಯ ಹಡಪದ ಹಾಗೂ ಡಾ. ಸಿದ್ಧರಾಮ ಭೀಮಣ್ಣ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ವೀರಭದ್ರಪ್ಪ ಬುಯ್ಯಾ, ಚಂದ್ರಕಾಂತ ಶೆಟಕಾರ, ಡಾ. ರಾಜಕುಮಾರ ಹೆಬ್ಬಾಳೆ, ಎಸ್.ಬಿ.ಕುಚಬಾಳ, ಡಾ. ಸುನಿತಾ ಕೂಡ್ಲಿಕರ್, ಡಾ, ಸಾವಿತ್ರಿಬಾಯಿ ಹೆಬ್ಬಾಳೆ ಹಾಗೂ ವಿದ್ಯಾರ್ಥಿಗಳು, ಪದವಿ ಪುರಸ್ಕøತರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.