ಗದಗ, ಜು. 7 : ಪ್ರತಿಭೆ ಯಾರ ಸ್ವತ್ತೂ ಅಲ್ಲ, ಪ್ರತಿಭೆಗೆ ಜಾತಿ, ಧರ್ಮ, ಬಡವ ಶ್ರೀಮಂತ ಎಂಬುವದು ಇಲ್ಲ. ಪರಿಶ್ರಮದ ಅಧ್ಯಯನಶೀಲತೆಯಿಂದ ಪ್ರತಿಭೆಯನ್ನು ಸಂಪಾದಿಸಬಹುದು ಅಂತಹ ಸಂಪಾದನೆ ನಿಮ್ಮದಾಗಲಿ ಎಂದು ಗದುಗಿನ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಕಾರ್ಯದರ್ಶಿ ಶಿವಾನಂದ ಕೆ. ಕಟ್ಟಿ ಅಭಿಪ್ರಾಯಪಟ್ಟರು.
ಅವರು ಗದಗ ತಾಲೂಕಿನ ಕಣವಿ, ಮುಳಗುಂದದ ಸರಕಾರಿ ಪ್ರೌಢ ಶಾಲೆಯಲ್ಲಿ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಐವರು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಪ್ರತಿಷ್ಠಾನದ ಸದಸ್ಯರಾದ ಬಸವರಾಜ ಬಿಂಗಿ ಹಾಗೂ ರವಿ ದಂಡಿನ ಮಾತನಾಡಿ ಗದಗ ಪರಿಸರದ ಶಿಕ್ಷಣ ಕ್ಷೇತ್ರಕ್ಕೆ ಬಿ.ಜಿ.ಅಣ್ಣಿಗೇರಿ ಗುರುಗಳ ಸೇವೆ ಬಹು ದೊಡ್ಡದು. ನಿಸ್ವಾರ್ಥದಿಂದ ವಿದ್ಯಾರ್ಥಿಗಳಿಗೆ ತಮ್ಮ ಗುರುಕುಲ ಆಶ್ರಮದ ಮೂಲಕ ಉಚಿತ ಪಾಠ ಮಾಡಿದ ಮಹಾತ್ಮರು. ಅವರ ಶಿಷ್ಯಂದಿರು ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದರೆ ಫಲ ನಿಶ್ಚಿತ ಹಾಗೆಯೇ ನೀವೂ ಕಷ್ಟಪಟ್ಟು ಓದಿ ಎಂದು ಮಕ್ಕಳಿಗೆ ಹಿತೋಪದೇಶ ನೀಡಿದರು.
ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಅವರು ಮಾತನಾಡಿ ಪ್ರತಿಭಾನ್ವಿತ ಮಕ್ಕಳಿಗೆ ಅಣ್ಣಿಗೇರಿ ಗುರುಗಳು ಪುರಸ್ಕರಿಸಿ ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸುತ್ತಿದ್ದರು. ಗುರುಗಳು ಹಾಕಿಕೊಟ್ಟ ಪರಂಪರೆಯನ್ನು ಪ್ರತಿಷ್ಠಾನವು ಮುಂದುವರೆಸಿದೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆಯಬೇಕೆಂದರು.
ಸಮಾರಂಭದಲ್ಲಿ ಪ್ರತಿಷ್ಠಾನದ ಶ್ರೀಮತಿ ನೇಹಾ ಖಟವಟೆ, ಶ್ರೀಮತಿ ಜಿ.ನಿರ್ಮಲಾ, ಸಿದ್ದು ಕವಲೂರ, ಜಿ.ಎಂ.ಫಿರಂಗಿ, ಉಮೇಶ ಬೆಂತೂರ, ಮಲ್ಲಪ್ಪ ದೋನ್, ಎಸ್.ಜಿ.ಅಣ್ಣಿಗೇರಿ, ಕಳಕಪ್ಪ ಕುರ್ತಕೋಟಿ ಮುಂತಾದವರಿದ್ದರು.
ಕಣವಿಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಿಪ್ಪಣ್ಣ ಮುಳಗುಂದ, ಪ್ರಕಾಶ ಅರಗಂಜಿ, ಯಲ್ಲಪ್ಪ ಕಲಕೇರಿ, ಶರಣಪ್ಪ ಕೋರಿ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಮಂಜುನಾಥ ಕೋರಿ ವಹಿಸಿದ್ದರು.
ನಾಗನಗೌಡ ಮೇಟಿ, ಮಂಜುಳಾ ಬೆಳ್ಳಕ್ಕನವರ, ಸ್ವಾತಿ ಬೊಮ್ಮನಗೌಡ, ಪವಿತ್ರಾ ಅರಗಂಜಿ, ಮಣಿಕಂಠ ಪೂಜಾರ, ಆಕಾಶ ಬೆಂತೂರ ಸೇರಿದಂತೆ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು, ಪಾಲಕ ಪೋಷಕರು ಪಾಲ್ಗೋಂಡಿದ್ದರು.
ಮುಳಗುಂದದ ಮುರಾರ್ಜಿ ವಸತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಎಚ್.ಆರ್.ಸಕ್ರೀ ವಹಿಸಿದ್ದರು. ಅನನ್ಯ ದಾಸರ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಮುತ್ತು ಕೆಳಗಿನಮನಿ ಸ್ವಾಗತಿಸಿ ನಿರೂಪಿಸಿದರು ಕೊನೆಗೆ ಎಂ.ಎಂ.ನಿಂಬನಾಯಕರ್ ವಂದಿಸಿದರು. ಶಿಕ್ಷಕರು, ಪಾಲಕ ಪೋಷಕರು ಪಾಲ್ಗೋಂಡಿದ್ದರು.
ಮುಳಗುಂದದ ಸರಕಾರಿ ಪ್ರೌಢ ಶಾಲೆಯಲ್ಲಿ ರವಿ ಡಂಬಳ ಅಧ್ಯಕ್ಷತೆ ವಹಿಸಿದ್ದರು, ಎಂ.ಎಂ.ನಿಂಬನಾಯ್ಕರ್ ನಿರೂಪಿಸಿದರು ಕೊನೆಗೆ ಎಲ್.ಡಿ.ರಾಠೋಡ್ ವಂದಿಸಿದರು.