ಅಧ್ಯಯನಕ್ಕಾಗಿ ಯೋಗ

ವಿಜಯಪುರ,ಮಾ.23:ನಗರದ ನವಭಾರತ ಫೌಂಡೇಶನ್ ವತಿಯಿಂದ ಸ್ಥಳೀಯ ಶ್ರೀ ಸಿದ್ಧಲಿಂಗೇಶ್ವರ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ “ಅಧ್ಯಯನಕ್ಕಾಗಿ ಯೋಗ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಯೋಗ ಶಿಕ್ಷಕರಾದ ಎಮ್.ಪಿ. ದೊಡಮನಿ ಅವರು ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಯುವಕರು ಯೋಗದ ಮಹತ್ವ, ಅಧ್ಯಯನಶೀಲತೆ ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಲಹೆ ನೀಡಿದರು. 100 ಕ್ಕೂ ಹೆಚ್ಚು ಯುವ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು,
ನವಭಾರತ ಫೌಂಡೇಶನ್ ಕಾರ್ಯಾಧ್ಯಕ್ಷ ರಾಜಶೇಖರ ಜಂಬಗಿ ಅವರು ಕಾರ್ಯಕ್ರವನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಗ್ರಂಥಾಲಯ ಸಂಸ್ಥಾಪಕ ಶ್ರೀ ರೇವಣಸಿದ್ಧ ಬ್ಯಾಳಿ ಅವರಿಗೆ ನವಭಾರತ ಫೌಂಡೇಶನ್ ವತಿಯಿಂದ “ಯೋಗ ಪೆÇೀಷಣಾ ಮಿತ್ರ” ಪ್ರಶಸ್ತಿ ನೀಡಿ ಗೌರವಿಸಲಾಯಿತು,
ಬಸವರಾಜ ಹಡಪದ, ವೀರೇಶ ಸಿ ಬಿರಾದಾರ , ಪ್ರಶಾಂತ ವರ್ಧನ, ಶ್ರೀಕಾಂತ ಮಂಗಾನವರ ಅತಿಥಿಗಳಾಗಿ ಭಾಗವಹಿಸಿದ್ದರು.
ಮಲ್ಲಿಕಾರ್ಜುನ ದಳವಾಯಿ ಸ್ವಾಗತಿಸಿದರು. ರಾಕೇಶ ಚವ್ಹಾಣ ವಂದಿಸಿದರು.