ಅಧ್ಯಕ್ಷ ಸೇರಿ ನಾಲ್ವರು ಗ್ರಾಪಂ ಸದಸ್ಯರು ಅನರ್ಹ

ಚಿಟಗುಪ್ಪಾ .ಮಾ 14:ತಾಲೂಕಿನ ಮಂಗಳಗಿ ಗ್ರಾಮ ಪಂಚಾಯತ್ ನ ಅಧ್ಯಕ್ಷ ಸೇರಿ ನಾಲ್ವರು ಸದಸ್ಯರು ಅನರ್ಹಗೊಂಡಿದ್ದಾರೆ.ಅಧ್ಯಕ್ಷ ಪುಂಡಲಿಕ್ ಅರ್ಕಿ,ಸದಸ್ಯರಾದ ಕಾಶಪ್ಪ ಮಾರುತಿ,ಶ್ರೀಮಂತ ಗುಂಡಪ್ಪ,ಮಹಮ್ಮದ್ ಫತ್ರು ಪಟೇಲ್ ಅನರ್ಹಗೊಂಡವರಾಗಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43ರ(ಎ )(iv)ನ್ನು ಉಲ್ಲಂಘಿಸಿರುವುದರಿಂದ ಹಾಗೂ ಪ್ರಸ್ತುತ ಇವರು ಗ್ರಾಮ ಪಂಚಾಯತ್ ಸದಸ್ಯರಾಗಿರುವುದರಿಂದ ದುರ್ನಡತೆ ಆಧಾರದ ಮೇಲೆ ಸದಸ್ಯತ್ವ ಸ್ಥಾನದಿಂದ ತೆಗೆದುಹಾಕಲಾಗಿದೆ. ಹಾಗೂ ಪ್ರಕರಣ 12(ಎಲ್ ) ರ ಅನ್ವಯ ಮುಂದಿನ ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಸರ್ಕಾರದ ಅಪರ ಮುಖ್ಯ(ಪಂ ರಾ ) ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯವರು ಉಲ್ಲೇಖಿತ ನಡುವಳಿಯಲ್ಲಿ ಆದೇಶಿಸಿದ್ದಾರೆ.