ಅಧ್ಯಕ್ಷ , ಬಿ.ಕುಮಾರಸ್ವಾಮಿ ನಿಧನ

ಸಂಡೂರು:ನ ಅ: 11: ತಾಲೂಕಿನ ಸುಶೀಲಾನಗರ ಗ್ರಾಮ ನಿವಾಸಿಯಾದ ಬಿ.ಕುಮಾರಸ್ವಾಮಿ(64) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ, 1 ಪುತ್ರಿ, 2 ಪುತ್ರರು, ಸಹೋದರರು, ಮೊಮ್ಮಕ್ಕಳು, ಅಪಾರ ಬಂಧುಗಳನ್ನು ಅಗಲಿದ್ದಾರೆ. ಇವರು ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕು ಘಟಕದ ಅಧ್ಯಕ್ಷರಾಗಿ, ಸಮಾಜದ ಗಣ್ಯರಾಗಿ, ನ್ಯಾಯಬೆಲೆ ಅಂಗಡಿ ಮಾಲೀಕರಾಗಿ, ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಸಲ್ಲಿಸಿದ್ದಾರೆ.
ಮೃತ ಅಂತ್ಯೆ ಕ್ರಿಯೆ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯೆಕ್ರಿಯೆ ನೆರವೇರಿತು. ಈ ಸಂದರ್ಭದಲ್ಲಿ ರಾಜ್ಯ ವೀರಶೈವ ಲಿಂಗಾಯ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಬಿ.ನಾಗನಗೌಡ, ಬಿ.ಕೆ. ಬಸವರಾಜ, ಬಿ.ರುದ್ರಗೌಡ, ಕತ್ತಿ ಕುಟುಂಬದವರು, ಇತರ ಹಲವಾರು ಗಣ್ಯರು ಅಂತ್ಯೆ ಕ್ರಿಯೆಯಲ್ಲಿ ಭಾಗವಹಿಸಿ ಸಂತಾಪ ಸೂಚಿಸಿದರು.