ಅಧ್ಯಕ್ಷ ಪಟ್ಟಕ್ಕಾಗಿ ಬಿಡೆನ್ -ಟ್ರಂಪ್ ಕಸರತ್ತು


ವಾಷಿಂಗ್ಟನ್, ನ.೧- ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಹೀಗಾಗಿ ಶ್ವೇತಭವನದ ಮೇಲೆ ಮತ್ತೊಮ್ಮೆ ಕಣ್ಣಿಟ್ಟಿರುವ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಕಣ್ಣಿಟ್ಟಿದ್ದು ಶತಾಯಗತಾಯ ಅಧ್ಯಕ್ಷರಾಗಲು ಹರಸಾಹಸ ಇಬ್ಬರೂ ನಡೆಸಿದ್ದಾರೆ.
ಚುನಾವಣೆಗೆ ಮುನ್ನವೇ ಅಮೆರಿಕದಲ್ಲಿ ೯ ಕೋಟಿ ಅಧಿಕ ಜನರು ಈಗಾಗಲೇ ಮತ ಚಲಾಯಿಸಿದ್ದಾರೆ. ೨೦೧೬ರ ಅಧ್ಯಕ್ಷೀಯ ಚುನಾವಣೆಗೂ ಮುನ್ನ ನಡೆದ ಮತದಾನ ಕ್ಕಿಂತ ಅತಿಹೆಚ್ಚಿನ ಮತದಾನ ಇದಾಗಿದೆ.
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೀಡೆನ್ ಪರವಾಗಿ ಮತ ಚಲಾವಣೆ ಆಗಿದೆ
ಒಟ್ಟಾರೆ ೯ ಕೋಟಿಗೂ ಅಧಿಕ ಜನರು ಮತ ಚಲಾಯಿಸಿದ್ದು ಚಲಾವಣೆಯಾದ ಮತಗಳಲ್ಲಿ ಬಹುತೇಕ ಮತಗಳು ಜೋ ಬಿಡೆನ್ ಪರ ಬಿದ್ದಿವೆ. ಎನ್ನಲಾಗಿದ್ದು ಇದು ಡೊನಾಲ್ಡ್ ಟ್ರಂಪ್ ಅವರ ನಿದ್ದೆಗೆಡಿಸಿದೆ.
ಈ ಬಾರಿ ಕೊರೊನಾ ಸೋಂಕು ಇರುವ ಅಮೆರಿಕದ ಮತದಾರರು ಇ-ಮೇಲ್, ಮತ ಪತ್ರದ ಮೂಲಕ ಮತ ಚಲಾವಣೆ ಮಾಡಿದ್ದಾರೆ. ಅಮೆರಿಕದಲ್ಲಿ ಚುನಾವಣೆಗೂ ಮುನ್ನವೇ ಮತದಾರರು ಮತ ಚಲಾಯಿಸುವ ಅವಕಾಶ ನೀಡಿರುವುದರಿಂದ ಈ ಬಾರಿ ಅದನ್ನು ಜನರು ಹೆಚ್ಚಾಗಿ ಬಳಸಿಕೊಂಡಿದ್ದಾರೆ.
ಟ್ರಂಪ್ ಆಸೆಗೆ ತಣ್ಣೀರು ಸಾದ್ಯತೆ!
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರು ಕೊರೊನಾ ಸೋಂಕು ನಿರ್ವಹಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎನ್ನುವ ಆರೋಪ ಜನರಲ್ಲಿ ಮನೆ ಮಾಡಿರುವ ಹಿನ್ನೆಲೆಯಲ್ಲಿ ಈ ಬಾರಿ ಅವರಿಗೆ ಅಧ್ಯಕ್ಷ ಸ್ಥಾನ ಕಷ್ಟಸಾಧ್ಯ ಎಂದು ವಿಶ್ಲೇಷಿಸಲಾಗಿದೆ.
ಎರಡನೇ ಬಾರಿಗೆ ಅಧ್ಯಕ್ಷರಾಗುವ ಡೊನಾಲ್ಡ್ ಟ್ರಂಪ್ ಅವರ ಆಸೆ ಕೈಕೊಡುವುದು ಕಷ್ಟಸಾಧ್ಯ ಎನ್ನುವ ಮಾತುಗಳು ಕೇಳಿ ಬಂದಿದ್ದು ನವಂಬರ್ ೩ ರಂದು ನಡೆಯಲಿರುವ ಮತದಾನದ ಆಧಾರದ ಮೇಲೆ ಅಮೆರಿಕದ ಅಧ್ಯಕ್ಷರು ಯಾರಾಗಲಿದ್ದಾರೆ ಎನ್ನುವುದು ನಿರ್ಧಾರವಾಗುವ ಸಾಧ್ಯತೆಗಳು ಹೆಚ್ಚಿದೆ.
ಜೋ ಬಿಡೆನ್‌ಗೆ ಬಹುತೇಕ ಅವಕಾಶ
ಸದ್ಯ ಚಲಾವಣೆ ಯಾಗಿರುವ ಮತಗಳು ಮತ್ತು ಅಮೆರಿಕ ಜನರ ಅಭಿಪ್ರಾಯವನ್ನು ನೋಡಿದರೆ ಜೋ ಬೀಡೆನ್ ಅವರು ಈ ಬಾರಿ ಅಮೆರಿಕ ಅಧ್ಯಕ್ಷೀಯ ಗಾದಿ ಹಿಡಿಯುವುದು ಬಹುತೇಕ ನಿಶ್ಚಿತ ಎನ್ನುವ ಮಾತುಗಳು ಕೇಳಿಬಂದಿವೆ.
ಅಮೆರಿಕದ ಪೆನ್ಸಿಲ್ವೇನಿಯಾ,ವಿಸ್ಕೋನ್ ಸಿನ್ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಇಮೇಲ್ ಮತ್ತು ಮತ ಪತ್ರದ ಮೂಲಕ ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತದಾರರು ಮತ ಚಲಾಯಿಸಿದ್ದಾರೆ.
ಮುಂದುವರಿದ ಆರೋಪ ಪತ್ಯಾರೋಪ:
ಚುನಾವಣೆಗೆ ಇನ್ನೂ ಎರಡು ದಿನಗಳು ಬಾಕಿ ಉಳಿದಿರುವಂತೆ ಡೊನಾಲ್ಡ್ ಟ್ರಂಪ್ ಮತ್ತು ಜೋ ಬೀಡೆನ್ ನಡುವೆ ಆರೋಪ-ಪ್ರತ್ಯಾರೋಪ ನಡೆದಿದೆ.ಅಮೆರಿಕದಲ್ಲಿ ಸೋಂಕು ನಿರ್ವಹಣೆ ಮಾಡುವಲ್ಲಿ ಡೊನಾಲ್ಡ್ ಟ್ರಂಪ್ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಜೋ ಬಿಡೆನ್ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಡೊನಾಲ್ಡ್ ಟ್ರಂಪ್ ಅವರು ಮಾಸ್ಕ್ ಧರಿಸುತ್ತಿಲ್ಲ ಈ ಮೂಲಕ ನಿಯಮಗಳನ್ನು ಅವರೇ ಧಿಕ್ಕರಿಸುತ್ತಿದ್ದಾರೆ. ಅಕ್ಟೋಬರ್ ಅಂತ್ಯದಲ್ಲಿ ಲಸಿಕೆ ಬಿಡುಗಡೆ ಮಾಡುವುದಾಗಿ ಹೇಳಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಡೆನ್ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗಾಗಿ ಸೋಂಕಿನ ಪ್ರಮಾಣ ಮತ್ತು ಸಾವಿನ ಪ್ರಮಾಣ ಹೆಚ್ಚಾಗುವುದು ಕಡಿಮೆಯಾಗಿದೆ ಎಂದು ಹೇಳಿದ್ದಾರೆ
ಅಮೆರಿಕದಲ್ಲಿ ಇದುವರೆಗೂ ೨.೨೯ ಲಕ್ಷ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ೮೦ ಲಕ್ಷಕ್ಕೂ ಅಧಿಕ ಜನರು ಬಾಧಿತರಾಗಿದ್ದಾರೆ