ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಜೂ, 19: ರಾಜ್ಯ ಚುನಾವಣಾ ಆಯೋಗದ ಅಧಿ ನೆಮದಂತೆ ರಾಜ್ಯದಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿನ ಅಧ್ಯಕ್ಷ, ಉಪಾಧ್ಯಕ್ಷರ ಎರಡನೇ ಅವಧಿಗೆ ಮೀಸಲಾತಿ ಮಾರ್ಗ ಸೂಚಿಯನ್ನು ನಾವು ಅನುಸರಿಸಬೇಕೆಂದು ಚಿತ್ರದುರ್ಗ ಜಿಲ್ಲಾಧಿಕಾರಿಗಳಾದ ಜಿ. ಆರ್. ಜೆ. ದಿವ್ಯ ಪ್ರಭಾರವರು ತಿಳಿಸಿದರು.
ಅವರು ಇಂದು ಪಟ್ಟಣದ ಗುರು ಭವನದಲ್ಲಿ ನಡೆದ ತಾಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಾ, ಜಿಲ್ಲೆಯ ಆರು ತಾಲೂಕುಗಳ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಎರಡನೇ ಅವಧಿಯ ಪಟ್ಟಿಯಲ್ಲಿ ಯಾವ ಅಧಿಕಾರಿಗಳ, ರಾಜಕಾರಣಿಗಳು ಹಸ್ತಕ್ಷೇಪವೂ ಇರುವುದಿಲ್ಲ. ನಮಗೂ ಕೂಡ ಯಾವ ಗ್ರಾಮ ಪಂಚಾಯಿತಿಗೆ ಯಾವೂದು ಆಯ್ಕೆ ಯಾಗಿದೆ ಎಂದು ತಿಳಿಯುವುದಿಲ್ಲ. ರಾಜ್ಯದ 31 ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿಯ ಆಯ್ಕೆ ಯನ್ನು ಎನ್. ಐ. ಸಿ. ಮಾಡಿರುತ್ತದೆ ಜನಸಂಖ್ಯೆ ಆದಾರದ ಮೇಲೆ ಎನ್. ಐ. ಸಿ. ನೋಟಿಫಿಕೇಶನ್ ಕೋಟಾ ವನ್ನು ಆಯ್ಕೆ ಮಾಡಿರುತ್ತದೆ, ಅದು ಮಾಡದೆ ಇರುವ ಉಪಾಧ್ಯಕ್ಷ ರ ಸ್ಥಾನಗಳನ್ನು ನಾವು ಲಾಟರಿ ಮೂಲಕ ಆಯ್ಕೆ ಮಾಡುತ್ತೇವೆ ಅದರಂತೆ ಮೊಳಕಾಲ್ಮೂರು ತಾಲೂಕಿನ ಹದಿನಾರು ಪಂಚಾಯಿತಿಗಳ ಅಧ್ಯಕ್ಷ ರ ಉಪಾಧ್ಯಕ್ಷ ರ ಆಯ್ಕೆ ಈ ರೀತಿ ಯಾಗಿದೆ ಎಂದು ತಿಳಿಸಿದರು.
1 , ಸಂತೇಗುಡ್ಡ ಅಧ್ಯಕ್ಷ ಎಸ್. ಟಿ. ಮಹಿಳೆ, 2,ತಮ್ಮೇನಹಳ್ಳಿ ಅಧ್ಯಕ್ಷ ಎಸ್. ಟಿ. ಮಹಿಳೆ. 3,ಜಾಗಿೀರ್, ಬುಡ್ಡೇನಹಳ್ಳಿ ಅಧ್ಯಕ್ಷ ಎಸ್ ಸಿ ಸಾಮಾನ್ಯ.4, ರಾಂಪುರ ಎಸ್. ಟಿ. ಮಹಿಳೆ. 5,ದೇವಸಮುದ್ರ, ಎಸ್ ಸಿ ಮಹಿಳೆ, 6,ಸಿದ್ದಪುರ ಎಸ್. ಟಿ ಸಾಮನ್ಯ. 7,ಚಿಕ್ಕೇರಹಳ್ಳಿ ಎಸ್. ಸಿ. ಮಹಿಳೆ. 8,ಹಿರೇಕೆರಹಳ್ಳಿ ಸಾಮನ್ಯ, 9ನಾಗಸಮುದ್ರ, ಸಾಮಾನ್ಯ ಮಹಿಳೆ, 10, ಹಾನಗಲ್ ಸಾಮಾನ್ಯ. 11,ರಾಯಾಪುರ, ಎಸ್ ಟಿ ಮಹಿಳೆ, 12,ನೆರ್ಲಹಳ್ಳಿ ಎಸ್ ಟಿ. ಸಾಮನ್ಯ 13,ತುಮಕೂರ್ಲಹಳ್ಳಿ ಎಸ್. ಟಿ. ಸಾಮಾನ್ಯ. 14,ಕೋನಸಾಗರ ಎಸ್. ಟಿ. ಸಾಮಾನ್ಯ. 15,ಕೊಂಡ್ಲಹಳ್ಳಿ ಜನರಲ್ ಮಹಿಳೆ, 16, ಬಿಜಿ ಕೆರೆ ಎಸ್. ಸಿ. ಸಾಮನ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿ. ಟಿ. ಓ. ಶಾಸ್ತ್ರೀ. ತಹಶೀಲ್ದಾರ್, ಎಂ. ವಿ. ರೂಪ, ಇಓ ಕೆ ಜಾನಕೀ ರಾಮ್, ಎನ್. ಟಿ. ಸಿ. ಸಂತೋಷ್, ಮೇ ನಂದೀಶ್, ಮತ್ತು ಪಿ. ಎಸ್. ಐ. ಪಾಂಡುರಂಗಪ್ಪ, ಎಲ್ಲಾ ಗ್ರಾಮ ಪಂಚಾಯಿತಿಯ ಪಿಡಿಓಗಳು , ಸದಸ್ಯರು ಮತ್ತು ಸಿಬ್ಬಂದಿ ಗಳು ಉಪಸ್ಥಿತರಿದ್ದರು.