ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆ

ಬ್ಯಾಡಗಿ, ನ 22- ಪಟ್ಟಣದ ಅಮೃತನಿಧಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ 2020-21 ರಿಂದ 2024-25 ನೇ ಸಾಲಿನ ಅವಧಿಯವರೆಗೆ ನೂತನ ಅಧ್ಯಕ್ಷರಾಗಿ ಪೆÇಲೀಸ್ ಇಲಾಖೆಯ ನಿವೃತ್ತ ಎಎಓ ಮಲ್ಲಪ್ಪ ರಾಮಪ್ಪ ಬಾಗೋಜಿ ಹಾಗೂ ಉಪಾಧ್ಯಕ್ಷರಾಗಿ ಗಂಗಾಧರ ಮಲ್ಲಪ್ಪ ಶೀಗಿಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ಬಿ. ಕಾಳೆ ತಿಳಿಸಿದ್ದಾರೆ.

ಇನ್ನುಳಿದಂತೆ ಸಂಘದ ನಿರ್ದೇಶಕರುಗಳಾಗಿ ಸಾಮಾನ್ಯ ಕ್ಷೇತ್ರದಿಂದ ಬಸನಗೌಡ ವೀರಭದ್ರಗೌಡ ಹೊಟ್ಟಿಗೌಡ್ರ, ಪ್ರಕಾಶ ಯಲ್ಲಪ್ಪ ಬಾಗೋಜಿ, ಬಸವರಾಜ ನಾಗಪ್ಪ ಬೆಣ್ನಿ, ಈರಪ್ಪ ಪಂಚಪ್ಪ ಕಟ್ಟಿ, ಕರಬಸಪ್ಪ ರಾಚಪ್ಪ ಯಾದವಾಡ, ಲಿಂಗರಾಜ ಶಿವಮೂರ್ತೆಪ್ಪ ಬೆಳಕೇರಿ, ಮಡಿವಾಳೇಶ ಚಿನ್ನಿಕಟ್ಟಿ, ಮಹಿಳಾ ಕ್ಷೇತ್ರದಿಂದ ಶೋಭಾ ಎಂ ಅಂಗಡಿ, ಸುನೀತಾ ಎಂ ಇಂಡಿಮಠ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಗುತ್ತೆವ್ವ ಗುಡ್ಡಪ್ಪ ಜಾಲಮ್ಮನವರ,
ಪರಿಶಿಷ್ಟ ಪಂಗಡದ ಕ್ಷೇತ್ರದಿಂದ ಶೇಖಪ್ಪ ಹುಚ್ಚಪ್ಪ ಬರದನಹಳ್ಳಿ, ಹಿಂದುಳಿದ ವರ್ಗದ ಕ್ಷೇತ್ರದಿಂದ ವಾಸಿಂಅಹ್ಮದ್ ಅಮಾನುಲ್ಲಾ ಮಕಾನದಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.