ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ


ಬ್ಯಾಡಗಿ,ಜು.20: ತಾಲೂಕಿನ ಹಿರೇಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಶಿವನಗೌಡ ವೀರನಗೌಡ್ರ ಮತ್ತು ಉಪಾಧ್ಯಕ್ಷರಾಗಿ ಶಿವರಾಯಪ್ಪ ಕಾಸಂಬಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ ಎಸ್.ಎ.ಪ್ರಸಾದ್ ತಿಳಿಸಿದರು.
ಬುಧವಾರ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ನಡೆದ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಿವನಗೌಡ ವೀರನಗೌಡ್ರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶಿವರಾಯಪ್ಪ ಕಾಸಂಬಿ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಮಲ್ಲನಗೌಡ ಚಿಕ್ಕಳ್ಳಿ, ಶಾಂತವ್ವ ತೋಟದ, ದುರುಗವ್ವ ಹರಿಜನ, ರೇಶ್ಮಭಾನು ರಾಣೆಬೆನ್ನೂರು, ಪುಟ್ಟವ್ವ ಲಕ್ಕಮ್ಮನವರ, ಕೆಂಚಮ್ಮ ಮತ್ತೂರು, ರೇಣುಕಾ ಜಾಡರ, ಹಸನ್ ಫತ್ತೇಗೌಡ್ರ, ಮಲ್ಲಪ್ಪ ಗೊಂದಿ, ನೀಲಪ್ಪ ಹಿರೇಹಳ್ಳಿ, ಮುಖಂಡರಾದ ಗಣೇಶಪ್ಪ ಚಿಕ್ಕಳ್ಳಿ, ಕೊಟ್ರಯ್ಯ ಹಿರೇಮಠ, ಎಂ.ಎಂ.ಪಾಟೀಲ, ಮಲ್ಲೇಶಪ್ಪ ಗೌರಾಪುರ, ಮಹ್ಮದಇಸಾಕ್ ಪಾಟೀಲ, ಹನುಮಂತಪ್ಪ ದೇಸೂರ, ಪಿಡಿಓ ರಾಜೀವ್ ಹಾದಿಮನಿ ಸೇರಿದಂತೆ ಗ್ರಾಪಂ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.