ಅಧ್ಯಕ್ಷೆ ಮಹಾದೇವಿ ರಾಜೀನಾಮೆಗೆ ಪುರಸಭೆ ಸದಸ್ಯರಿಂದ ಆಗ್ರಹ

ಕೆ.ಆರ್.ಪೇಟೆ.ಜ.13:- ಸ್ವಪಕ್ಷದ ಪುರಸಭೆ ಅಧ್ಯಕ್ಷೆ ಮಹಾದೇವಿ ವಿರುದ್ಧ ಪುರಸಭೆಯ ಆಡಳಿತ ಪಕ್ಷದ ಸದಸ್ಯರಿಂದಲೇ ರಾಜೀನಾಮೆಗೆ ಆಗ್ರಹ.
ರಾಜೀನಾಮೆ ನೀಡದಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಿ ಅಧಿಕಾರದಿಂದ ಕೆಳಕ್ಕಿಳಿಸುವುದಾಗಿ ಎಚ್ಚರಿಕೆ ನೀಡಿದ ಸದಸ್ಯರು. ಈ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸದಸ್ಯರುಗಳು ಪಟ್ಟಣದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿ ಭ್ರಷ್ಟಾಚಾರವನ್ನು ಪೆÇ್ರೀತ್ಸಾಹಿಸಿ ಅವ್ಯವಹಾರ ಮಾಡುತ್ತಾ ಕಮಿಷನ್ ದಂಧೆ ನಡೆಸುತ್ತಿರುವ ಅಧ್ಯಕ್ಷೆ ಮಹಾದೇವಿ ಅವರು ಲಂಚದ ಹಣ ನೀಡದಿದ್ದರೆ ಯಾವುದೇ ಕಡತಗಳಿಗೆ ಸಹಿ ಮಾಡುವುದಿಲ್ಲ.
ಖಾತೆ ಬದಲಾವಣೆ, ಈ-ಸ್ವತ್ತು, ಕಟ್ಟಡ ಪರವಾನಗಿ, ಟ್ರೇಡ್ ಲೈಸೆನ್ಸ್ ಹಾಗೂ ಕಂದಾಯ ಕಟ್ಟಿಸಿಕೊಳ್ಳಲೂ ಲಂಚದ ಹಣಕ್ಕಾಗಿ ಶ್ರೀ ಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದಾರೆ
ಅಧ್ಯಕ್ಷರ ಆಯ್ಕೆ ಮಾಡುವ ಸಂದರ್ಭದಲ್ಲಿ ವರಿಷ್ಠರು ಪರಿಶಿಷ್ಠ ಪಂಗಡಕ್ಕೆ ಸೇರಿದ್ದ ಮಹಾದೇವಿ ಮತ್ತು ನಟರಾಜು ಇಬ್ಬರಿಗೂ ಸಮನಾಗಿ 15 ತಿಂಗಳ ಅವಧಿ ನಿಗಧಿಪಡಿಸಿ ಮಹಾದೇವಿ ಅವರನ್ನು ಮೊದಲ ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು ಅಧ್ಯಕ್ಷೆಯಾಗಿ ಆಯ್ಕೆಯಾಗುತ್ತಿದ್ದಂತೆ ತಮ್ಮನ್ನು ಅಧ್ಯಕ್ಷ ಗಾಧಿಗೆ ಕೂರಿಸಿದ ಸದಸ್ಯರನ್ನೇ ಕಡೆಗಣಿಸಿ ಸರ್ವಾಧಿಕಾರ ನಡೆಸಿದ ಮಹಾದೇವಿ 21 ತಿಂಗಳು ಕಳೆಯುತ್ತಿದ್ದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆ, ಸ್ವಾರ್ಥ ಸಾಧನೆ ಮಾಡುತ್ತಾ, ಭ್ರಷ್ಟಾಚಾರವನ್ನು ಪೆÇೀಷಿಸುತ್ತ ಅಧ್ಯಕ್ಷ ಹುದ್ದೆಗೆ ಕಳಂಕ ತಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಪಟ್ಟಣದ ಸಮಗ್ರವಾದ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅನುಧಾನವನ್ನು ಸಚಿವ ನಾರಾಯಣಗೌಡ ಅವರು ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿ ತಂದಿದ್ದರೂ ಕಾಮಗಾರಿ ನಡೆಸಲು ಟೆಂಡರ್ ಪ್ರಕ್ರಿಯೆ ನಡೆಸಿ ಜರೂರಾಗಿ ಅಭಿವೃದ್ಧಿ ಕೆಲಸಗಳನ್ನು ನಡೆಸದೇ ಸಚಿವರಿಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಪುರಸಭೆ ಆಡಳಿತ ಮಂಡಳಿಯು ಅಸ್ತಿತ್ವಕ್ಕೆ ಬಂದು 21 ತಿಂಗಳು ಕಳೆಯುತ್ತಿದ್ದರೂ ಸ್ಥಾಯಿಸಮಿತಿ ಅಧ್ಯಕ್ಷರನ್ನು ಆಯ್ಕೆ ಮಾಡಿ ಆಡಳಿತದ ವೇಗವನ್ನು ಚುರುಕುಗೊಳಿಸುತ್ತಿಲ್ಲ.ಆಡಳಿತ ಮಂಡಳಿಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಧಾರ ಕೈಗೊಂಡು ಸರ್ವಾಧಿಕಾರಿ ಆಡಳಿತ ನಡೆಸಿ, ಪಟ್ಟಣದ ಜನರ ಹಿತವನ್ನು ಬಲಿಕೊಡುತ್ತಿರುವ ಅಧ್ಯಕ್ಷೆ ಮಹಾದೇವಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳು ಕೆ.ಆರ್.ಪೇಟೆ ಪುರಸಭಾ ಕಾರ್ಯಾಲಯದಲ್ಲಿ ಕಂದಾಯ, ಆಸ್ತಿತೆರಿಗೆ ಸೇರಿದಂತೆ ವಿವಿಧ ಶುಲ್ಕವನ್ನು ಕಟ್ಟಿಸಿಕೊಳ್ಳಲು ಕೌಂಟರ್ ತೆರೆಯಲು ಮುಂದೆಬಂದರೂ ಹೆಚ್.ಡಿ.ಎಫ್.ಸಿ ಖಾಸಗಿ ಬ್ಯಾಂಕಿಗೆ ಅನುಮತಿ ನೀಡಿ ಸದಸ್ಯರ ಗಮನಕ್ಕೆ ತರದೇ ತರಾತುರಿಯಲ್ಲಿ ಬ್ಯಾಂಕಿಂಗ್ ಕೌಂಟರ್ ತೆರೆಯಲು ಮುಂದಾಗಿರುವ ನಿಮ್ಮ ನಡೆಯು ಹಲವು ಅನುಮಾನಗಳಿಗೆ ಎಡೆಮಾಡಿದೆ. ಆದ್ದರಿಂದ ರಾಷ್ಟ್ರೀಕೃತ ಬ್ಯಾಂಕ್ ಕೌಂಟರ್ ತೆರೆಯಲು ಅವಕಾಶ ನೀಡಿ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಸದಸ್ಯ ಶಾಮಿಯಾನ ತಿಮ್ಮೇಗೌಡ ಆಗ್ರಹಿಸಿದರು.
ಹೊಸಹೊಳಲು ಭಾಗದ ಮಹಿಳಾ ಸದಸ್ಯೆ ಕಲ್ಪನಾದೇವರಾಜು ಮಾತನಾಡಿ ಮಹಾದೇವಿ ಅವರು ಮಹಿಳಾ ಪ್ರತಿನಿಧಿಯಾಗಿದ್ದರೂ ಮಹಿಳಾ ಸದಸ್ಯೆಯರಿಗೆ ಕನಿಷ್ಠ ಗೌರವ ನೀಡುವುದನ್ನು ಕಲಿತಿಲ್ಲ. ಸರ್ವಾಧಿಕಾರಿ ಧೋರಣೆಯನ್ನು ಹೊಂದಿರುವ ಮಹಾದೇವಿ ನಿಗಧಿತವಾಗಿ ಸಾಮಾನ್ಯ ಸಭೆ ನಡೆಸಿ ಪಟ್ಟಣದ ಅಭಿವೃದ್ಧಿಗೆ ಸಮಾಲೋಚನೆ ಮಾಡದೇ ಕೇವಲ ಹಬ್ಬ ಹರಿದಿನಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಪುರಸಭೆಯಲ್ಲಿ ಕೇವಲ ಮೂವರ ಮಾತುಗಳು ನಡೆಯುತ್ತಿವೆ. ಪುರಸಭೆಯ ಸದಸ್ಯರೇ ಅಲ್ಲದ ಗಿರೀಶ್ ಅವರ ದಬ್ಬಾಳಿಕೆ ದೌರ್ಜನ್ಯ ಎಲ್ಲೆ ಮೀರಿದೆ. ಪುರಸಭೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಇವರು ಎಲ್ಲಾ ಸದಸ್ಯರನ್ನು ಗೌರವದಿಂದ ಕಾಣುವುದನ್ನು ಕಲಿಯಬೇಕು ಎಂದು ಕಲ್ಪನಾ ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷೆ ಮಹಾದೇವಿ ಅವರು ಕೊಟ್ಟ ಮಾತಿನಂತೆ ನಡೆದುಕೊಂಡು ತಮ್ಮ ಸ್ಥಾನಕ್ಕೆ ಗೌರವಯುತವಾಗಿ ರಾಜೀನಾಮೆ ನೀಡಿ ನಟರಾಜ್ ಅವರು ಅಧ್ಯಕ್ಷರಾಗಿ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಮಹಾದೇವಿ ಕೂಡಲೇ ರಾಜೀನಾಮೆ ನೀಡಲಿ.
ತಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಬೇಕು. ಸಚಿವ ನಾರಾಯಣಗೌಡ ಅವರು ತೀರ್ಮಾನ ಮಾಡಿರುವಂತೆ ನಟರಾಜ್ ಅವರು ಅಧ್ಯಕ್ಷರಾಗಲು ಸಹಕರಿಸಬೇಕು. ಪುರಸಭಾ ಸಿಬ್ಬಂಧಿ ಹಾಗೂ ನೌಕರರನ್ನು ಹಿಡಿತದಲ್ಲಿಟ್ಟುಕೊಂಡು ಹಳ್ಳಹಿಡಿದು ದಿಕ್ಕುತಪ್ಪಿರುವ ಆಡಳಿತವನ್ನು ಸರಿದಾರಿಗೆ ತರಬೇಕು ಎಂದು ಆಗ್ರಹಿಸಿದ ಲೋಕೇಶ್ ಶ್ರಮಪಡದೇ ಸಿಕ್ಕ ಅಧಿಕಾರವನ್ನು ಜನಸೇವೆಗೆ ಹಾಗೂ ಪಟ್ಟಣದ ಅಭಿವೃದ್ಧಿಗೆ ಬಳಸದೇ ಸ್ವಾರ್ಥ ಸಾಧನೆ ಮಾಡಿ, ಭ್ರಷ್ಟಾಚಾರವನ್ನು ಬೆಂಬಲಿಸಿ ಕೆಟ್ಟ ಹೆಸರು ಗಳಿಸಿರುವ ಅಧ್ಯಕ್ಷರು ಗೌರವಯುತವಾಗಿ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷರ ಭಾರೀ ಭ್ರಷ್ಟಾಚಾರ:
ಬಟ್ಟೆ ಬ್ಯಾಗು, ಕಸ ಸಂಗ್ರಹಣೆಯ ಬಕೆಟ್ ಗಳು ಹಾಗೂ ಎಲ್.ಇ.ಡಿ ಬೀದಿ ದೀಪಗಳ ಖರೀದಿ, ವಿವಿಧ ಬಡಾವಣೆಗಳಿಗೆ ನಾಮಫಲಕ ಅಳವಡಿಸುವುದು, ಹಳೇ ಕಿಕ್ಕೇರಿ ರಸ್ತೆ ಹಾಗೂ ಹೊಸಕಿಕ್ಕೇರಿ ರಸ್ತೆಯಲ್ಲಿ ಗುಂಡಿ ಮುಚ್ಚಿಸುವುದು ಸೇರಿದಂತೆ ಎಲ್ಲಾ ಕೆಲಸವನ್ನು ತಾವೇ ನಡೆಸಿ ಭಾರೀ ಭ್ರಷ್ಠಾಚಾರ ನಡೆಸಿರುವ ಅಧ್ಯಕ್ಷರು ದಳ್ಳಾಳಿಗಳು ಹಾಗೂ ಮಧ್ಯವರ್ತಿಗಳ ಮೂಲಕ ಕಮಿಷನ್ ದಂಧೆ ನಡೆಸುತ್ತಿದ್ದಾರೆ. ಈ ಎಲ್ಲಾ ಹಗರಣ ನಡೆಸಿರುವ ಅಧ್ಯಕ್ಷರ ಸದಸ್ಯತ್ವ ರದ್ದತಿ ಹಾಗೂ ಭ್ರಷ್ಢಾಚಾರ ಕುರಿತು ಲೋಕಾಯುಕ್ತರಿಗೆ ದೂರು ನೀಡುತ್ತೇವೆ ಎಂದು ಸದಸ್ಯ ಲೋಕೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭೆಯ ಆಡಳಿತ ಪಕ್ಷದ ಸದಸ್ಯರಾದ ನಟರಾಜು, ಲೋಕೇಶ್, ಶಾಮಿಯಾನ ತಿಮ್ಮೇಗೌಡ, ಕಲ್ಪನಾ ದೇವರಾಜು, ಪದ್ಮರಾಜು, ಗಿರೀಶ್, ಅಂಬೇಡ್ಕರ್ ನಗರ ಮಹೇಶ್, ತೇಜಸ್ವಿನಿ, ಕೆ.ಎಸ್.ರಾಜೇಶ್ ಮತ್ತು ಕೆ.ಆರ್.ನೀಲಕಂಠ ಬಿಜೆಪಿ ನಗರ ಘಟಕದ ಅಧ್ಯಕ್ಷ ಹೊಸಹೊಳಲು ಮಂಜುನಾಥ್, ಬಿಜೆಪಿ ಮುಖಂಡ ಹೆಚ್.ಬಿ.ಮಂಜುನಾಥ್ ಹಾಜರಿದ್ದರು.