ಅಧ್ಯಕ್ಷೀಯ ಚುನಾವಣೆ ಮೇಲೆ ಟ್ರಂಪ್ ಕಣ್ಣು

ಪಾಮ್ ಬೀಚ್, ಫ್ಲಾ.ನ. ೧೬-ಕಳೆದ ಭಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ೨೦೨೪ರ ಅಧ್ಯಕ್ಷೀಯ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಎರಡು ವರ್ಷದ ಮುಂಚೆಯೇ ತಮ್ಮ ಉಮೇದುವಾರಿಕೆ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಮುಂದಿನ ಬಾರಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ನಡೆಸಲು ಈಗಿನಿಂದಲೇ ತಯಾರಿ ನಡೆಸಿದ್ದಾರೆ. ರಿಪಬ್ಲಿಕನ್ ಪಕ್ಷದಿಂದ ೨೦೨೪ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆನ್ನುವ ನಿರ್ಧಾರದಿಂದ ತಮ್ಮ ಪಕ್ಷದ ಹಲವು ಆಕಾಂಕ್ಷಿಗಳಿಗೆ ಟ್ರಂಪ್ ನಿರ್ಧಾರ ನಿರಾಸೆ ಉಂಟು ಮಾಡಿದೆ.

ಡೆಮಾಕ್ರಟಿಕ್ ಪಕ್ಷದಿಂದ ಆಯ್ಕೆಯಾಗಿರುವ ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ೨೦೨೪ರಲ್ಲಿ ಮತ್ತೊಮ್ಮೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಮುಖಾಮುಖಿಯಾಗುವ ನಿರೀಕ್ಷೆ ಹೆಚ್ಚಾಗಿದೆ.

ಮತ್ತೊಮ್ಮೆ ಚುನಾವಣೆಗೆ ಸ್ಪರ್ಧೆ ಮಾಡಲು ಒಲವು ಹೊಂದಿರುವ ಡೊನಾಲ್ಡ್ ಟ್ರಂಪ್ ಮಧ್ಯಂತರ ಚುನಾವಣೆಯ ಒಂದು ವಾರದ ನಂತರ ಪ್ಲೋರಿಡಾದ ಮಾರ್-ಎ-ಲಾಗೊ ಎಸ್ಟೇಟ್‌ನಲ್ಲಿ ರಿಪಬ್ಲಿಕನ್ನರು ನಿರೀಕ್ಷಿಸಿದಷ್ಟು ಸ್ಥಾನಗಳನ್ನು ಗೆಲ್ಲಲು ವಿಫಲರಾಗಿದ್ದಾರೆ.

ಈ ವೇಳೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠವನ್ನಾಗಿ ಮಾಡಲು, ಅಮೇರಿಕಾ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಘೋಷಿಸುತ್ತಿದ್ದೇನೆ, ”ಎಂದು ಟ್ರಂಪ್ ಹೇಳುತ್ತಿದ್ದಂತೆ ಅಭಿಮಾನಿಗಳು ಬೆಂಬಲಿಗರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಇದೇ ವೇಳೆ ಹಾಲಿ ಅಧ್ಯಕ್ಷ ಜೋ ಬಿಡೆನ್ ಆಡಳಿತದ ನೀತಿ ನಿರ್ಧಾರಗಳನ್ನು ಡೊನಾಲ್ಡ್ ಟ್ರಂಪ್ ಪ್ರಬಲವಾಗಿ ವಿರೋದಿಸಿದರು.ಎರಡು ವರ್ಷಗಳ ಹಿಂದೆ ಮಹಾನ್ ರಾಷ್ಟ್ರವಾಗಿದ್ದವು. ಮತ್ತು ಶೀಘ್ರದಲ್ಲೇ ಮತ್ತೆ ಶ್ರೇಷ್ಠ ರಾಷ್ಟ್ರವಾಗುತ್ತೇವೆ ಎನ್ನುವ ವಿಶ್ವಾಸವನ್ನೂ ಅವರು ಹೊರ ಹಾಕಿದ್ದಾರೆ.

೨೦೨೪ರ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ನಾಮಿನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಔಪಚಾರಿಕ ಪಕ್ರಿಯೆಗಳು ಆಯ್ಕೆಯಾಗಿವೆ.