ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು, ಆ.5: ತಾಲೂಕಿನ ರಾಯಾಪುರ ಗ್ರಾಮ ಪಂಚಾಯಿತಿಯಲ್ಲಿ ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಪಕ್ರಿಯೆ ಶುರುವಾಗಿದ್ದು.
ಸಾಮಾನ್ಯ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದು, ಜಿ.ಬಿ.ಪಾಪಣ್ಣ ಮತ್ತು ಬಸಮ್ಮ ಎಂಬುವವರು ನಾಮಪತ್ರ ಸಲ್ಲಿಸಿರುತ್ತಾರೆ.
  ಈ ಪಂಚಾಯಿತಿಯಲ್ಲಿ ಒಟ್ಟು 19 ಸದಸ್ಯರಿದ್ದು, ಅದರಲ್ಲಿ 10 ಜನ ಮಹಿಳೆಯರು,9 ಜನ ಪುರುಷರು ಇರುತ್ತಾರೆ,
  ಈ ಚುನಾವಣೆಯಲ್ಲಿ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಮತ್ತು ದಂಡಾಧಿಕಾರಿಗಳಾದ ಟಿ. ಸುರೇಶ್ ಕುಮಾರ್, ಆರ್. ಐ. ಪ್ರಾಣೇಶ್, ಎಪ್. ಡಿ. ಎ. ತಿಪ್ಪೇಸ್ವಾಮಿ, ಪಿಡಿಓ ಮಾರಣ್ಣ ಮತ್ತು ಪಿಎಸ್ಐ ಪಾಂಡುರಂಗ ಮತ್ತು ಸಿಬ್ಬಂದಿ ಮತ್ತು ಸದಸ್ಯರು ಉಪಸ್ಥಿತರಿದ್ದರು.