ಅಧ್ಯಕ್ಷರಿಗೆ ಅಭಿನಂದನೆಗಳು‌

ಬಳ್ಳಾರಿ, ಮೇ.01: ನಗರದ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಇಂದು ಪಕ್ಷದ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ರಫೀಕ್ ಅವರ ಮನೆಗೆ ತೆರಳಿ‌ ಅವರನ್ನು ಅಭಿನಂದಿಸಿದರು.
39 ನೇ ವಾರ್ಡಿನಿಂದ ಆಯ್ಕೆಯಾದ ಶಶಿಕಳಾ ಪಿ.ಜಗನ್ನಾಥ, 20 ನೇ ವಾರ್ಡಿನಿಂದ ಆಯ್ಕೆಯಾದ ಪ್ಯಾರಂ ವಿವೇಕ್ (ವಿಕ್ಕಿ), 38 ನೇ ವಾರ್ಡಿನಿಂದ ಆಯ್ಕೆಯಾದ ವಿ.ಕುಬೇರ ಮದಕಾದವರು ತೆರಳಿ ಸನ್ಮಾನಿಸಿದರು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪಜ್ಷದ ಅಧ್ಯಕ್ಷರು ಸಹ ಈ ಸಂದರ್ಭದಲ್ಲಿ ಸನ್ಮಾನಿಸಿ‌ ಗೌರವಿಸಿದರು.