ಅಧ್ಯಕ್ಷರಾಗಿ ಶಿಲ್ಪಾ ಗುತ್ತಲ ಆಯ್ಕೆ

(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಫೆ2 : ಸ್ಥಳೀಯ ಶಿಕ್ಷಕರ ಭವನದಲ್ಲಿ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಯಲ್ಲಿ ನೂತನ ಅಧ್ಯಕ್ಷರಾಗಿ ಶಿಲ್ಪಾ ಗುತ್ತಲ, ಉಪಾಧ್ಯಕ್ಷರಾಗಿ ಸಿ.ಬಿ.ಕಾಕೋಳ ಆಯ್ಕೆಯಾಗಿದ್ದಾರೆ.
ವಿಜಯಿಶಾಲಿಯಾದ ಅಧ್ಯಕ್ಷ-ಉಪಾಧ್ಯಕ್ಷರಿಗೆ ಎಲ್ಲ ನಿರ್ದೇಶಕರು ಅಭಿನಂದನೆ ಸಲ್ಲಿಸಿದರು, ಈ ವೇಳೆ ನಿರ್ದೇಶಕರಾದ ಎಸ್.ಎಂ.ಕಿಚಡಿ, ಆರ್.ಎಚ್.ಬಾಲಮ್ಮನವರ, ಎಸ್.ಎಂ.ಮಾಸಣಗಿ, ಯಮನಪ್ಪ ಹರಿಜನ, ಡಿ.ಎನ್.ಅಲ್ಲಾಪುರ, ಮಲ್ಲಪ್ಪ ಕರೇಣ್ಣನವರ, ಮಂಗಳ ಗೊರವರ, ಎಸ್.ಎಸ್.ಅಜಗೊಂಡ್ರ, ಎಸ್.ಎಸ್.ಬನ್ನಿಮಟ್ಟಿ, ಬಿ.ಸಿ.ಮಾಕಳ್ಳಿ ಎಂ.ವೈ.ಸಾಳುಂಕೆ ಉಪಸ್ಥಿತರಿದ್ದರು.