ಅಧ್ಯಕ್ಷರಾಗಿ ರಾಜಶೇಖರ ನೇಮಕ

ಹುಬ್ಬಳ್ಳಿ,ಸೆ15; ಯುವ ಮುಖಂಡ, ಸಾಮಾಜಿಕ ಹೋರಾಟಗಾರ ರಾಜಶೇಖರ ಮೆಣಸಿನಕಾಯಿ ಅವರನ್ನು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಕೂಡಲಸಂಗಮದ ಶ್ರೀಪೀಠದಲ್ಲಿ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು ಈ ಪಂಚಮಸಾಲಿ ಪೀಠದ ಪೀಠಾರೋಹಣ ಶ್ರೀ ಜಯಮೃತ್ಯುಂಜಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಶಾಸಕ ಡಾ. ವಿಜಯಾನಂದ ಕಾಶಪ್ಪನವರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಬ್ಯಾಂಕ್ ನಿರ್ದೇಶಕರಾದ ರಾಮನಗೌಡ ಬಸನಗೌಡ ಪಾಟೀಲ, ಸಿದ್ದೇಶ್ವರ ಬ್ಯಾಂಕ್ ಆದ್ಯಕ್ಣ ಹರ್ಷ ಗೌಡ ಪಾಟೀಲ ಹಾಗೂ ರಾಜುಗೌಡ ಪಾಟೀಲ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು, ಇದೇ ವೇಳೆ ನಿಕಟಪೂರ್ವ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಡಾ. ವಿಜಯಾನಂದ ಕಾಶಪ್ಪನವರ, ನೂತನ ಅಧ್ಯಕ್ಷ ರಾಜಶೇಖರ ಮೆಣಸಿನಕಾಯಿ ಅವರಿಗೆ ಸಮಾಜದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಈ ಸಮಾಜದಲ್ಲಿ ಸಮಾಜದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.