ಅಧ್ಯಕ್ಷರಾಗಿ ಪೂರ್ಣಿಮಾ ಆಯ್ಕೆ

ಬಾಗಲಕೋಟೆ,ನ.11 : ಅಖಿಲ ಭಾರತ ಯಾದವ ಮಹಾಸಭಾದ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿಯವರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರಿಗೆ ಕರ್ನಾಟಕ ರಾಜ್ಯ ಹಿಂದುಳಿದ ಸಣ್ಣ ಹಾಗೂ ಅತೀ ಸಣ್ಣ ಸಮುದಾಯಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಅಮರೇಶ ಕೊಳ್ಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.
ಅವರು ಹಿಂದುಳಿದ ವರ್ಗದಲ್ಲಿ ಬರುವ ಯಾದವ ಸಮಾಜದ ಸಮಾಜ ಸೇವೆ ಹಾಗೂ ಹಿಂದುಳಿದ ವರ್ಗಗಳ ಸಂಘಟನೆಯಲ್ಲಿ ತೊಡಗುವ ಪ್ರತಿ ಕಾರ್ಯಕ್ಕೂ ನಮ್ಮ ಸಂಘಟನೆಯಿಂದ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಬಾಗೇವಾಡಿ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಶ್ರೀಮತಿ ಕಮಲಾ ಜೇಡರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಹಡಪದ, ಜಿಲ್ಲಾ ಉಪಾಧ್ಯಕ್ಷರಾದ ಬನಪ್ಪ ಮಡಿವಾಳರ, ಹನಮಂತ ಮಡಿವಾಳರ, ಸುರೇಶ ಮಡಿವಾಳರ, ಮಹಾಂತೇಶ ಈಳಗೇರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಡಿ. ಗೌಡರ, ಕಾರ್ಯದರ್ಶಿ ಶ್ರೀಮತಿ ಗಂಗೂಬಾಯಿ ರಜಪೂತ, ತನುಜಾ ಅಗಸರ, ಯಾದವ ಸಮಾಜದ ಪ್ರಮುಖರಾದ ಎಂ.ಎಂ. ಬಿಂಗೇರಿ, ಬಸವರಾಜ ತಳವಾರ, ಯಲ್ಲಪ್ಪ ಹನಮರ, ಹನಮಂತ ಬಿ. ಯಾದವ, ಬಲವಂತ ಯಾದವ, ಲಂಕೇಶ ಮಾವಿನಗಿಡದ, ರಮೇಶ ಬಿದರಿ, ಹನಮಂತ ಗೊನ್ನಾಯ್ಕರ, ಹನಮಂತಗೌಡ ಪಾಟೀಲ, ಪ್ರಕಾಶ ಗೂರನ್ನವರ, ಬಸವರಾಜ ಗೊರಕೊಪ್ಪ, ಪಾಂಡುರಂಗ ಮುಂದೇಲಿ ಹಾಗೂ ನಗರ ಅಧ್ಯಕ್ಷರಾದ ಬಸವರಾಜ ಅಂಬಿಗೇರ, ಕಾರ್ಯಾಧ್ಯಕ್ಷರಾದ ಸಂತೋಷ ಜೋಷಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹನಮಂತ ಹೊದ್ಲೂರ, ಮಾಧ್ಯಮ ಪ್ರಮುಖರಾದ ಸಂಜೀವ ಅಂಬೋರೆ, ತಾಲೂಕಾ ಅಧ್ಯಕ್ಷರಾದ ಸದಾಶಿವ ಕುಂಬಾರ ಉಪಾಧ್ಯಕ್ಷರಾದ ಕಿರಣ ಕಂಕಾಳೆ, ಕಾರ್ಯದರ್ಶಿಗಳಾದ ಮಂಜುನಾಥ ಕಟ್ಟಿಮನಿ, ವಿಜಯ ದಫಡೆ, ಭೀಮು ಕೆ. ಅಂಬಿಗೇರ, ಶ್ರೀನಿವಾಸ ಗಾಡದ, ಸೇರಿದಂತೆ ಅನೇಕರು ಶುಭ ಕೋರಿದ್ದಾರೆ.