ಅಧ್ಯಕ್ಷರಾಗಿ ನೇಮಕ

ಬಾಗಲಕೋಟ,ಏ.18 : ತಾಲ್ಲೂಕಿನ ಅಂಡಮುರನಾಳ ಗ್ರಾಮದ ಆರ್ ಸಿ ಕೇಂದ್ರದಲ್ಲಿ ನಡೆದ ವಿಶ್ವರತ್ನ.ಭಾರತರತ್ನ. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 130 ನೇ ಜಯಂತೋತ್ಸವ ಹಾಗೂ ಹಸಿರು ಕ್ರಾಂತಿಯ ಹರಿಕಾರ ಧೀಮಂತ ನಾಯಕರಾದ ಡಾ. ಬಾಬು ಜಗಜೀವನರಾಮ್ ರವರ 114ನೇ ಜಯಂತೋತ್ಸವ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಬಾಗಲಕೋಟ ಜಿಲ್ಲೆಯ ಮಾದಿಗ ಸಮಾಜದ ಹಿರಿಯ ಮುಖಂಡರಾದ ಹಾಗೂ ಸಮಾಜದ ಹಿರಿಯ ಹೋರಾಟಗಾರರಾದ ವಾಯ್ ವಾಯ್ ತಿಮ್ಮಾಪುರ.ಹಾಗೂ ಇನ್ನೋರ್ವ ಮುಖಂಡರಾದ. ಮುತ್ತಪ್ಪ ಮಾದರ ಸಾ.ಚವಡಾಪುರ. ಇವರ ನೇತೃತ್ವದಲ್ಲಿ ಮತ್ತು ಅಖಿಲ ಕರ್ನಾಟಕ ಮಾದಿಗರ ಯುವಸೇನೆಯ ರಾಜ್ಯಾಧ್ಯಕ್ಷ ಜನಕಪ್ಪ ಮಾದರ ಹಾಗೂ ಜಿಲ್ಲಾಧ್ಯಕ್ಷ ಮಂಜುನಾಥ ಆರ್ ಮಾದರ ಇವರ ಆದೇಶದ ಮೇರೆಗೆ ಬಾಗಲಕೋಟ ತಾಲೂಕ ಘಟಕದ ಅಧ್ಯಕ್ಷರಾಗಿ ಸುನಿಲ ಅಚ್ಯತನ್ ಇವರನ್ನು ನೇಮಕ ಮಾಡಲಾಯಿತು.