ಅಧ್ಯಕ್ಷರಾಗಿ ತುಕಾರಾಮ ಅವಿರೋಧ ಆಯ್ಕೆ


ಅಳ್ನಾವರ,ನ.26: ಸಮೀಪದ ಬೆಣಚಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ತುಕರಾಮ ಬೀಮರಾಯಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ರುಕ್ಕವ್ವಾ ಮಡಿವಾಳಿ ದುಬ್ಬದಮರಡಿ ಅವಿರೋಧವಾಗಿ ಆಯ್ಕೆಯಾದರು.
ಆಡಳಿತ ಮಂಡಳಿ ನಿರ್ದೇಶಕರಾಗಿ ರಘುಗೌಡ. ಎಂ. ಪಾಟೀಲ, ಸುರೇಶ .ಎಸ್. ಕಂಚನೋಳಕರ, ಮಹಾದೇವ ಎಫ್. ಗೋದಗೇರಿಕರ, ಪರಶುರಾಮ ಬಿ. ರೇಡೇಕರ, ಬಸವರಾಜ ಎನ್ ಶಿಂದೆ, ಪಾರಿಸ್ ಡಿ, ಬಾವಿ, ಸುಧಾಮ ಎ. ಕರ್ಜಗಿ, ಸ್ಮೀತಾ .ಎಂ. ಜವಳಿ, ಶಾಂತಾ ಎಸ್. ವಾರದ. ನಾರಾಯಣ ಕೆ. ಹರಿಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟನೆ ತಿಳಿಸಿದೆ.
ಈ ಅವಿರೋಧ ಆಯ್ಕೆಗೆ ಹಿರಿಯರ ಸಮಿತಿಯ ಶಂಕ್ರಪ್ಪ ನಾಯ್ಕರ್, ಮಲ್ಲನಗೌಡ ಪಾಟೀಲ, ಗ್ರಾ.ಪಂ. ಅಧ್ಯಕ್ಷ ಸಂದೀಪ ಪಾಟೀಲ, ಮಂಜುನಾಥ ಜವಳಿ, ಶ್ರೀಕಾಂತ ವಾರದ, ಶಿವಾಜಿ ಮಾದಪ್ಪನವರ, ಚೆನ್ನಬಸ್ಸು ಕುಬಸದ ಶ್ರಮಿಸಿದರು.