ಅಧಿವೇಶನದಲ್ಲಿ ವಿವಿಧ ಬೇಡಿಕೆ ಚರ್ಚಿಸಲು ಸಂಸದರಿಗೆ ಮನವಿ

ಲಿಂಗಸುಗೂರು.ಜು.೧೨- ಅಂಗನವಾಡಿ ನೌಕರರಿಗೆ ಗ್ರಾಚ್ಚುಟಿ, ಮುಷ್ಕರದ ಹಕ್ಕಿಗಾಗಿ, ಐಸಿಡಿಸ್ ಯೋಜನೆಗೆ ಅಗತ್ಯ ಅನುದಾನ ಮತ್ತು ಬಲಿಷ್ಠ ಪಡಿಸಲಿಕ್ಕೆ ಮತ್ತು ಅಂಗನವಾಡಿ ನೌಕರರಿಗೆ ಶಾಸನ ಬದ್ಧ ಸವಲತ್ತುಗಳಿಗಾಗಿ ಒತ್ತಾಯಿಸಿ ಮಳೆಗಾಲದ ಅಧಿವೇಶನದಲ್ಲಿ ಚರ್ಚಿಸಬೇಕೆಂದು ರಾಯಚೂರು ಜಿಲ್ಲಾ ಸಂಸದರ ಗುರುಗುಂಟಾದ ಮನೆ ಮುಂದೆ ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ ಮಾಡಲಾಯಿತು ನಂತರ ಮನವಿ ಸಲ್ಲಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರು ಶಾಲಾ ಪೂರ್ವ ಶಿಕ್ಷಣದೊಂದಿಗೆ ೬ ತಿಂಗಳದಿಂದ ೬ ವರ್ಷದ ಮಕ್ಕಳು ಗರ್ಬಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಆಹಾರ ಭದ್ರತೆ ಒದಗಿಸುವ ಪ್ರಮುಖ ಕೆಲಸಗಳನ್ನು ಅತ್ಯಲ್ಪ ಗೌರವಧನಕ್ಕೆ ವಹಿಸಲಾಗಿದೆ, ಐಸಿಡಿಸ್ ಯೇತರ ಹಾಗೂ ಇಲಾಖೆತರ ಕೆಲಸಗಳನ್ನು ಮಾಡಲಾಗುತ್ತದೆ. ಗ್ರಾಚ್ಯುಟಿ (ಉಪಧನ) ಜಾರಿಗೆ, ೨೫ ಏಪ್ರಿಲ್ ೨೦೨೨ ರಂದು ಮಾನ್ಯ ಸುಪ್ರೀಂಕೋರ್ಟ್ ೧೯೭೨ ರ ಗ್ರಾಚ್ಯುಟಿ ಸೌಲಭ್ಯವನ್ನು ಅಂಗನವಾಡಿ ನೌಕರರ ಅನ್ವಯಿಸಲು ಕೆಳಕಂಡ ಮಾನದಂಡಗಳನ್ನು ಪರಿಗಣಿಸಿದೆ.
ರಾಜ್ಯ ಸರ್ಕಾರಗಳು ಗ್ರಾಚ್ಯುಟಿ ಕಾಯ್ದೆಗೆ ಮಾರ್ಗದರ್ಶಿ ಸೂತ್ರಗಳ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ಸೌಲಭ್ಯವನ್ನು ಅನ್ವಯಿಸಬೇಕು, ಕರ್ನಾಟಕ ಸರ್ಕಾರ ನಿಗದಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು, ಐಸಿಡಿಸ್ ಯೋಜನೆ ಪ್ರಾರಂಭವಾಗಿ ೧೮ ವರ್ಷಗಳಾದರೂ ಅಂಗನವಾಡಿ ನೌಕರರ ಖಾಯಂ ಇಲ್ಲಾ ಕಾನೂನ ಅನ್ವಯಿಸಿಲ್ಲ, ಇಂದಿಗೂ ೩-೪ ತಿಂಗಳಿಗೊಮ್ಮೆ ವೇತನ ಬಿಡುಗಡೆ ಆಗಿಲ್ಲ, ೨೬ ಸಾವಿರ ಕನಿಷ್ಟ ವೇತನ ಮತ್ತು ೧೦ ಸಾವಿರ ನಿವೃತ್ತಿ ವೇತನಕ್ಕಾಗಿ, ಕರೋನಾ ಸಂದರ್ಭದಲ್ಲಿ ತಮ್ಮ ಜೀವನಗಳನ್ನೇ ಮುಡೂಪಾಗಿಟ್ಟು ಈ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ, ಇಂದಿಗೂ ಕೇಂದ್ರ ಸರ್ಕಾರ ಕೇವಲ ೪೫೦೦ ರೂ. ಮಾತ್ರ ಕೊಡುತ್ತಿದೆ.
ವೇತನವನ್ನು ರಾಜ್ಯ ಸರ್ಕಾರದ ಬಳಿ ನಿರಂತರ ಹೋರಾಟದಿಂದ ತೆಗೆದುಕೊಳ್ಳಲು ಸಾಧ್ಯವಾಗಿದೆ, ವೇತನ ಹೆಚ್ಚಳ ಮಾಡಬೇಕು ಹಾಗೂ ಇನ್ನಿತರ ಬೇಡಿಕೆಗಾಗಿ, ಇದೆ ೨೦೨೨ ಜುಲೈ, ೨೬ ರಿಂದ ಅನಿರ್ಧಿಷ್ಟ ಹೋರಾಟವನ್ನು ಪಾರ್ಲಿಮೆಂಟ್ ಎದುರು ನಡೆಸಲಾಗುತ್ತದೆ, ತಾವು ಮಳೆಗಾಲದ ಅಧಿವೇಶನದಲ್ಲಿ ಈ ವಿಚಾರಗಳನ್ನು ಚರ್ಚಿಸಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಿದರು.
ತಾಲೂಕು ಅಧ್ಯಕ್ಷೆ ಸರಸ್ವತಿ ಬಡಿಗೇರ್ ಈಚನಾಳ, ಉಪಾಧ್ಯಕ್ಷೆ ಬಸಮ್ಮ ಬಯ್ಯಪುರ, ಗೌರವಾಧ್ಯಕ್ಷೆ ಲಕ್ಶ್ಮೀ ನಗನೂರು, ಕಾರ್ಯದರ್ಶಿ ಮಹೇಶ್ವರಿ ಹಟ್ಟಿ, ಅಂಗನವಾಡಿ ಕಾರ್ಯಕರ್ತೆಯರು ವಿಜಯಲಕ್ಷ್ಮಿ, ಸುಮಂಗಲಾ, ಚನ್ನಮ್ಮ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.