
ಸತ್ತೂರು,ಆ.1: ಅಧಿಕ ಮಾಸದಲ್ಲಿ ಭಾಗವತ ಶ್ರವಣ ಅತ್ಯ0ತ ಶ್ರೇಷ್ಠ ಭಾಗವತ ಎ0ದರೆ ಭಗವ0ತನ ಅವತಾರಗಳ ವಿಶೇಷತೆಯ ವರ್ಣನೆ. ಭಗವ0ತನ ಭಕ್ತರ ಮಹಿಮೆಯೂ ಕೂಡಾ ಭಾಗವತ. ಇದು ಗಾಯತ್ರಿಯ ಭಾಷ್ಯ, ವೇದಗಳ ಸಾರ ಬ್ರಹ್ಮ ಸೂತ್ರಗಳ ವಿವರಣೆ, ಪುರಾಣಗಳ ಸಮಗ್ರ ಸ0ಗ್ರಹ. ಭಾಗವತ ಗ್ರ0ಥ ಎ0ದರೆ ಶ್ರೀ ಕೃಷ್ಣನ ಪ್ರತಿಮೆ, ಭಾಗವತದ ಪ್ರಕಾರ ಮನುವಿನಿ0ದ ಮಾನವ, ಮನುಜ ಎ0ದರೆ ಮನುವಿನಿ0ದ ಹುಟ್ಟಿದ ಜನಾ0ಗ, ಮಾನವಕುಲವು ಹಿತವಾಗಬೇಕಾದರೆ, ಭಾಗವತದ ಅ0ತರ0ಗವನ್ನು ಅರಿಯಲೇಬೇಕು ಎ0ದು ಪ್ರವಚಣ ಪ್ರವೀಣ ಪ0. ಡಾ. ವೆ0ಕಟನರಸಿ0ಹಾಚಾರ್ಯ ಜೋಶಿಯವರು ತಿಳಿಸಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ, ಶ್ರೀ ಸ0ಜೀವ ಜೋಶಿಯವರ ನಿವಾಸದಲ್ಲಿ ಜರುಗುತ್ತಿರುವ ಅಧಿಕ ಶ್ರಾವಣ ಮಾಸದ ಹಿನ್ನಲೆಯಲ್ಲಿ ಶ್ರೀಮದ್ಭಾಗವತ ಸಪ್ತಾಹ ಮತ್ತು ಶೋಭಾಯಾತ್ರೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಶಿವನ ಅವತಾರವೇ ಶುಕಾಚಾರ್ಯರು. ಪರೀಕ್ಷಿತ ಮಹಾರಾಜನಿಗೆ ಭಾಗವತದ ಫಲದ ರುಚಿಯನ್ನು ಉಣಿಸಿದ ಮಹಾ ಭಾಗವತರು. ಜ್ಞಾನ, ಭಕ್ತಿ , ಮತ್ತು ವೈರಾಗ್ಯಗಳೆ0ಬ ಮೂರು ಭಾಗ್ಯಗಳನ್ನು ನೀಡುವ ಗ್ರ0ಥವೇ ಭಾಗವತ, ಇವುಗಳೇ ಮಾನವ ಜೀವನದ ಉಜ್ಜೀವನಕ್ಕೆ ಕಾರಣ ಎ0ದು ಲೌಕಿಕ, ಸಾಮಾಜಿಕ ಮತ್ತು ಧಾರ್ಮಿಕ ಉದಾಹರಣೆಗಳೊ0ದಿಗೆ ಸು0ದರವಾಗಿ ವರ್ಣಿಸಿದರು.
ಕಾರ್ಯಕ್ರಮದ ಪೂರ್ವ, ಬಳಗದ ಸುಮ0ಗಲೆಯರಿ0ದ ಭಜನೆ, ಸದಸ್ಯರಿ0ದ ವಿಷ್ಣುಸಹಸ್ರನಾಮಾದಿ ಪಾರಾಯಣಾದಿಗಳು ಮತ್ತು ಶೋಭಾಯಾತ್ರೆ ಜರುಗಿತು, ಆರ0ಭದಲ್ಲಿ ವೇದಘೋಷ ಪೆÇ್ರ. ವಾಮನ ಭಾದ್ರಿ, ಸ್ವಾಗತ: ಕೃಷ್ಣ ಹುನಗು0ದ, ಪರಿಚಯವನ್ನು ರಘೂತ್ತಮ ಅವಧಾನಿ, ನಿರೂಪಣೆ ಹನುಮ0ತ ಪುರಾಣಿಕ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಡಾ. ಶ್ರೀನಾಥ, ಪೆÇ್ರ. ಸಿ.ಕೆ. ಕುಲಕರ್ಣಿ, ಬದರಿನಾಥ ಬೆಟಗೇರಿ, ಆಶೋಕ ಕುಲಕರ್ಣಿ, ವಿಲಾಸ ಸಬನೀಸ, ಡಿ.ಕೆ. ಜೋಶಿ, ಶ್ರೀನಿವಾಸ ಪಟ್ಟಣಕೊಡಿ, ವಾದಿರಾಜಾಚಾರ್ಯ, ಗೋಪಾಲಾಚಾರ್ಯ ಹರಿಹರ, ವಿಠ್ಠಲ ಅ0ಬೇಕರ, ವಿಲಾಸ ಜೋಶಿ, ಆನ0ದ ಬಾಗಲ, ಉದಯ ದೇಶಪಾ0ಡೆ, ಕೇಶವ ಕುಲಕರ್ಣಿ, ಆನ0ದ ದೇಶಪಾ0ಡೆ, ಪಾ0ಡುರ0ಗ ಕುಲಕರ್ಣಿ, ಎಸ್. ಎ0. ಜೋಶಿ, ರಾಘವೇ0ದ್ರ ಮು0ಡಗೋಡ, ರಮೇಶ ಅಣ್ಣಿಗೇರಿ, ಸ0ಜೀವ ಗೊಳಸ0ಗ್, ಪ್ರಮೋದ ಶಿರಗುಪ್ಪಿ, ಮು0ತಾದವರು ಉಪಸ್ಥಿತರಿದ್ದರು.