ಅಧಿಕ ಅಷಾಡದ ಅಂಗವಾಗಿ ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ


ಸಂಜೆವಾಣಿ ವಾರ್ತೆ
ಸಂಡೂರು: ಜು: 22- ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಆಷಾಡಾ ದ ವಿಶೇಷದ ಅಂಗವಾಗಿ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆಯನ್ನು ಭಕ್ತರು ಹಾಗೂ ಅರ್ಚಕರು ನೆರವೇರಿಸಿದರು.
ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಮಳೆ ಬರಲಿ ಎಂದು ಪುರಷ ಭಕ್ತರು ಅಹೋರಾತ್ರಿ ಅಖಂಡ ಭಜನೆಯನ್ನು ನೆರವೇರಿಸುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿ ಮಳೆಗಾಗಿ ಪ್ರಾರ್ಥಿಸಿದರೆ, ಮಹಿಳೆಯರು ಶ್ರೀ ವೀರಭದ್ರೇರ್ಶವರ ಸ್ವಾಮಿಗೆ ವಿಶೇಷವಾದ ಅಲಂಕಾರಕ್ಕೆ ಅರ್ಚಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿ ವಿಶೇಷ ಅಲಂಕಾರ ಪೂಜೆಯ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುವ ಮೂಲ ಅವರೂ ಸಹ ಅಷಾಡದಲ್ಲಿ ವಿಶೇಷ ಪೂಜೆಯಿಂದ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.