ಅಧಿಕಾರ ಹಂಚಿಕೆಯಲ್ಲಿ ಮುಸ್ಲೀಂ ಸಮುದಾಯ ಕಡೆಗಣನೆ ಖಂಡನೀಯ

ಇಂಡಿ:ಮೇ.17: ಮುಸ್ಲಿಂ ಸಮುದಾಯ ಪ್ರತಿಯೊಂದು ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಾ ಬಂದಿದೆ. ಚುನಾವಣೆಗಳಲ್ಲಿ ಮಾತ್ರ ಮುಸ್ಲಿಂ ಸಮುದಾಯವನ್ನು ಬಳಕೆ ಮಾಡಿಕೊಂಡು ಅಧಿಕಾರ ಹಂಚಿಕೆಯಲ್ಲಿ ಕಡೆಗಣಿಸುತ್ತಿರುವುದು ವಿಷಾದನೀಯ ಸಂಗತಿ ಎಂದು ಅಂಜುಮನ್ ಇಸ್ಲಾಂ ಕಮಿಟಿಯ ಇಂಡಿಯ ಮಾಜಿ ಕಾರ್ಯದರ್ಶಿ ಹಾಗೂ ಹಾಲಿ ಅಂಜುಮನ್ ಕಮಿಟಿ ನಿರ್ದೇಶಕ ಅಕೀಲ ಹವಾಲ್ದಾರ ಹೇಳಿದರು.
ವಿಜಯಪೂರ ಜಿಲ್ಲೆಯ ಆಯ್ಕೆಯಾದ ಶಾಸಕರುಗಳಿಗೆ ಇಸ್ಲಾಂ ಸಮುದಾಯದ ವತಿಯಿಂದ 90ಶೇ ರಷ್ಟು ಮತಧಾನ ಮಾಡಲಾಗಿದೆ.ವಿಜಯಪೂರ ಜಿಲ್ಲೆಯ ಮುಸ್ಲಿಂ ಕಾಂಗ್ರೇಸ್ ಅಭ್ಯರ್ಥಿ ಅಬ್ದುಲ ಹಮೀದ್ ಮುಶ್ರಫ್ ಇವರ ಪರವಾಗಿ ಉಳಿದ ಕಾಂಗ್ರೆಸ್
ಅಭ್ಯರ್ಥಿಗಳುಕಾಯ ವಾಚಾ ಮನಸ್ಸಿನಿಂದ ಸರಿಯಾಗಿ ಕೆಲಸ ಮಾಡಿದರೆ ಗೆಲ್ಲುತ್ತಿದ್ದರು. ಸರಿಯಾಗಿ ಒಗ್ಗಟಿನ ಮಂತ್ರ ಇಲ್ಲದೆ ಇರುವುದೆ ಸೋಲಿಗೆ ಕಾರಣ . ಓಟಿಗಾಗಿಯೇ ಮುಸ್ಲಿಂ ಬಳಕೆ ಮಾಡಿಕೊಳ್ಳದೆ ಬರುವ ದಿನಗಳಲ್ಲಿ ಹಮ್ಮೀದ ಮುಶ್ರಫ್ ಇವರಿಗೆ ಎಂ.ಎಲ್,ಸಿ ಸ್ಥಾನ ನೀಡಿದರೆ ಮುಸ್ಲಿಂ ಸಮುದಾಯಕ್ಕೆ ಗೌರವಿಸಿದಂತಾಗುತ್ತದೆ.ಇಂಡಿ ಮತಕ್ಷೇತ್ರದ ಹ್ಯಾಟ್ರಿಕ ವಿಜಯ ಸಾಧಿಸಿದ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು. ಶಾಸಕ ಪಾಟೀಲ ಸರ್ವಸಮುದಾಯದ ನಾಯಕ ಅಭಿವೃದ್ದಿಯ ಹರಿಕಾರರಾಗಿದ್ದು ಜಿಲ್ಲೆ ಮಾಡುವ ಕನಸು ಹೊತ್ತಿರುವುದುರಿಂದ ಸಚಿವ ಸ್ಥಾನ ನೀಡಿ ಗೌರವಿಸಬೇಕುಎಂದು ಪತ್ರಿಕೆಗೆ ತಿಳಿಸಿದರು.