ಅಧಿಕಾರ ಸ್ವೀಕಾರ

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರು,ಅ17: ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಣಾಧಿಕಾರಿ ಆರ್.ಟಿ.ಬಳಿಗಾರ ಅವರ ತೆರವಾದ ಸ್ಥಾನಕ್ಕೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಆರ್.ಪಿ. ಜುಟ್ಟನವರ ಅಧಿಕಾರ ಸ್ವೀಕರಿಸಿದರು.
ಪ್ರಾಥಮಿಕ ಹಾಗೂ ಪ್ರೌಡಶಾಲಾ ಶಿಕ್ಷಕರು, ಕಛೇರಿ ಸಿಬ್ಬಂದಿಯವರು ಸನ್ಮಾನಿಸಿ, ಸ್ವಾಗತಿಸಿದರು.
ಅವರು ಈ ಮೊದಲು ಬೆಳಗಾವಿ ಜಿಲ್ಲೆ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಹಿರಿಯ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಧಿಕಾರ ಸ್ವೀಕರಿಸಿ ಮಾತನಾಡಿದವರು. ಐತಿಹಾಸಿಕ ಚನ್ನಮ್ಮನ ಮತ್ತು ಶೂರ ಸಂಗೋಳ್ಳಿ ರಾಯಣ್ಣ ನಾಡಿನಲ್ಲಿ ಕಾರ್ಯನಿರ್ವಹಿಸಲು ಸರ್ಕಾರ ನನ್ನನ್ನು ನಿಯೋಜನಗೊಳಿಸಿದ್ದು ನನ್ನ ಭಾಗ್ಯ. ನಾನು ಸರ್ಕಾರದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ ಪ್ರಾಮಾಣಿಕ, ದಕ್ಷ ಆಡಳಿತಗಾರನಾಗಿ ಜನಪರ ಸೇವೆ ಮಾಡುವುದರೊಂದಿಗೆ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸುತ್ತೇನೆಂದರು.
ಈ ವೇಳೆ ಬೆಳಗಾವಿ ಗ್ರಾಮೀಣ ಶಿಕ್ಷಣಾಧಿಕಾರಿ ರವಿ ಭಜಂತ್ರಿ, ಶಿಕ್ಷಣ ಸಮನ್ವಯಾಧಿಕಾರಿ ಗಾಯತ್ರಿ ಅಜ್ಜನ್ನವರ, ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷ ಜಯಕುಮಾರ ಹೇಬಳಿ, ಡೈಯಟ್ ಉಪನ್ಯಾಸಕ ಸುಣಕುಪ್ಪಿ, ರಾಜೇಂದ್ರ ಭಂಡಾರಿ, ಮಹೇಶ ಚನ್ನಂಗಿ, ಮಹೇಶ ಹೆಗಡೆ, ತಾಲೂಕಾ ಅಧ್ಯಕ್ಷ ಈಶ್ವರ ಉಪರಿ, ಗಜಾನಂದ ಸೊಗಲನ್ನವರ, ವೀರುಪಾಕ್ಷ ಬರಗಾಲಿ ಮಂಜುನಾಥ ಶೆಟ್ಟೆನ್ನವರ, ಎಮ್.ಎಸ್ ಕಲ್ಮಠ, ಬಸವರಾಜ ಗಡೆನ್ನವರ, ಸಂಜು ಹುಬ್ಬಳ್ಳಿ, ವಿನೋದ ಪಾಟೀಲ, ಅಶೋಕ ಸಾಳಸ್ಕರ, ಶಂಕರ ಹಂಬರ, ಚಂದ್ರು ಮುರಗೋಡ, ಸಿಬ್ಬಂದಿ ಸೇರಿದಂತೆ ಹಲವರಿದ್ದರು.