ಅಧಿಕಾರ ಸ್ವೀಕಾರ

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಜು 20: ಬೈಲಹೊಂಗಲ ಮತ್ತು ಕಿತ್ತೂರ ಈ ಎರಡು ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ನೂತನ ಅಧಿಕಾರಿಯಾಗಿ ಅರುಣಕುಮಾರ ಎಸ್.ಬಿ ಅವರು (ಎಂಎಸ್‍ಡಬ್ಲೂ) ಅಧಿಕಾರ ಸ್ವೀಕರಿಸಿದರು.
ಅವರು ಈ ಹಿಂದೆ ಅರಸಿಕೆರಿಯಲ್ಲಿ ಪಿಡಿಓ ನಂತರ ತುಮೂಕೂರಿನಲ್ಲಿ ಸಿಡಿಪಿಓ ಆಗಿ ಕಾರ್ಯನಿರ್ವಹಿಸಿರುತ್ತಾರೆ.
ಅಧಿಕಾರ ಸ್ವೀಕರಿಸಿ ಅವರು ಮಾತನಾಡಿ ಐತಿಹಾಸಿಕ ಈ ನಾಡಿನಲ್ಲಿ ಪ್ರಾಮಾಣಿಕ ದಕ್ಷ ಆಡಳಿತಗಾರನಾಗಿ ಜನಪರ ಕೆಲಸ ಮಾಡುತ್ತೇನೆಂದರು.
ಈ ವೇಳೆ ಕಛೇರಿಯ ಸಿಬ್ಬಂದಿಯವರು ಹೂಗುಚ್ಛ ನೀಡಿ ಬರಮಾಡಿಕೊಂಡರು. ಸಿಬ್ಬಂದಿ ಸೇರಿದಂತೆ ಹಲವರಿದ್ದರು.