ಅಧಿಕಾರ ಸ್ವೀಕಾರ

ಧಾರವಾಡ,ಜೂ16: ಧಾರವಾಡದಲ್ಲಿ ಕೇಂದ್ರ ಕಚೇರಿ ಹೊಂದಿರುವ ರಾಜ್ಯ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಸಂಗಮೇಶ ಬಬಲೇಶ್ವರ ಅವರು ನಗರದ ಯಾಲಕ್ಕಿಶೆಟ್ಟರ್ ಕಾಲನಿಯಲ್ಲಿನ ಅಕಾಡೆಮಿ ಕೇಂದ್ರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

ಅಧಿಕಾರ ಸ್ವೀಕರಿಸಿದ ನಂತರ ಅವರು ಮಾತನಾಡಿ, ಸರಕಾರ ತಮ್ಮ ಮೇಲೆ ಭರವಸೆಯಿಟ್ಟು ಈ ಜವಾಬ್ದಾರಿ ವಹಿಸಿದೆ. ಅಕಾಡೆಮಿಯ ಸಿಬ್ಬಂದಿಗೆ ವೇತನ ಮತ್ತು ಕಾರ್ಯಚಟುವಟಿಕೆಗಳನ್ನು ನಡೆಸಲು ಅಗತ್ಯ ಅನುದಾನ ಪಡೆಯಲಾಗುವುದು. ಈ ಮೂಲಕ ಅಕಾಡೆಮಿ ನಿರಂತರವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡುವುದಾಗಿ ಅವರು ಹೇಳಿದರು.

ಕೈಗಾರಿಕೆಗಳಿಂದ ಸಿಎಸ್ ಆರ್ ಅನುದಾನ ಪಡೆದು ಇನ್ನೂ ಅಧಿಕ ಕಾರ್ಯಕ್ರಮಗಳನ್ನು ರೂಪಿಸಿ ಅನು?Á್ಠನ ಗೊಳಿಸುವ ಉದ್ದೇಶವಿದೆ. ಈ ದಿಸೆಯಲ್ಲಿ ಅಕಾಡೆಮಿ ಸಿಬ್ಬಂದಿ ಮತ್ತು ಪರಿಣಿತರ ಜೊತೆ ಸಮಾಲೋಚನೆ ನಡೆಸುವುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಅಕಾಡೆಮಿಯ ಯೋಜನಾಧಿಕಾರಿ ಭಾರತಿ ಶೆಟ್ಟರ್ ಹಾಗೂ ಮಲ್ಲನಗೌಡ ಪಾಟೀಲ, ಬಿ.ವೈ.ಪಾಟೀಲ, ದಶರಥರಾವ ದೇಸಾಯಿ, ಬಸವರಾಜ ಮರಿತಮ್ಮನವರ, ಶಿವಶರಣ ಕಲಬಶೆಟ್ಟರ್ ಸೇರಿದಂತೆ ಇತರರು ಇದ್ದರು.

ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದ ಸಂಗಮೇಶ ಅವರು, ತಮ್ಮ ಉನ್ನತ ಶಿಕ್ಷಣವನ್ನು ಧಾರವಾಡದಲ್ಲಿಯೇ ಪೂರೈಸಿದ್ದಾರೆ. ಕರ್ನಾಟಕ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದ ಅವರು, ವಿದ್ಯಾರ್ಥಿ ಜೀವನದಿಂದ ಸಮಾಜಮುಖಿ ಚಿಂತನೆ, ಸಾಮಾಜಿಕ ಕಾರ್ಯ ಮತ್ತು ಸಮುದಾಯ ಅಭಿವೃದ್ಧಿಯ ಕಳಕಳಿ ಹೊಂದಿದ್ದಾರೆ.

ಬಾಲ ವಿಕಾಸ ಅಕಾಡಮಿಯನ್ನು ಕ್ರಿಯಾಶೀಲಗೊಳಿಸುವ ಪಣ ತೊಟ್ಟು, ಅಕಾಡಮಿಯ ನೇತ್ರತ್ವವಹಿಸಿಕೊಂಡಿದ್ದೇನೆ ಎಂದು ಅವರು ತಿಳಿಸಿದರು.