ಅಧಿಕಾರ ಶಾಶ್ವತವಲ್ಲ

ಮುಂಡಗೋಡ,ನ15: ನಾವು ಎಷ್ಟು ಕಾಲ ಅಧಿಕಾರದಲ್ಲಿ ಇರುತ್ತೆವೋ ಮುಖ್ಯವಲ್ಲ ಅಧಿಕಾರದಲ್ಲಿದ್ದಾಗ ಉತ್ತಮ ಕಾರ್ಯ ಹಾಗೂ ಸಮಾಜಕ್ಕೆ ಏನು ಕೊಡುಗೆ ನೀಡತ್ತೇವೆ ಎನ್ನುವುದು ಮುಖ್ಯವಾಗಿದೆ ಅಧಿಕಾರ ಶಾಶ್ವತವಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ತಾಲೂಕಿನ ಹನುಮಾಪುರ ಗ್ರಾಮದಲ್ಲಿ ಸೋಮವಾರ ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ ಮತ್ತು ನಾಗನೂರ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಮುಂಡಗೋಡ ತಾಲೂಕಿನ ಅಭಿವೃದ್ದಿಗಾಗಿ ವಿಶೇಷ ಕಾಳಜಿವಹಸಿದ್ದೇನೆ. ಈ ಕ್ಷೇತ್ರದ ಶಾಸಕರಾಗಿ, ಹಣಕಾಸು ಸಚಿವರಾಗಿದ್ದಾಗ ತಾಲೂಕಿನ ಜನತೆಗೆ ಬದುಕಿಗೆ ರೂಪ ನೀಡಿದಂತಹ ಪುಣ್ಯ ರಾಮಕೃಷ್ಣ ಹೆಗಡೆ ಅವರಿಗೆ ಸಲ್ಲುತ್ತದೆ. ಅವರು ಕೆರೆಗಳನ್ನು ನಿರ್ಮಾಣ ಮಾಡಿರುವುದರಿಂದ ಕೆರೆ ತುಂಬಿಸುವ ಭಾಗ್ಯ ನಿಮ್ಮೇಲ್ಲರ ಅರ್ಶೀವಾದದಿಂದ ದೊರಕಿದೆ. ಇನ್ನು ಎರಡರಿಂದ ನಾಲ್ಕು ತಿಂಗಳ ಒಳಗಾಗಿ ಕರೆ ತುಂಬುವ ಯೋಜನೆಗೆ ಚಾಲನೆ ನೀಡುವುದಾಗಿ ಹೇಳಿದರು.
ಮಾಜಿ ಶಾಸಕ ವಿ.ಎಸ್.ಪಾಟೀಲ ಮಾತನಾಡಿ, ಪ್ರತಿ ಪಂಚಾಯತಿಯಲ್ಲಿ ಗ್ರಾಮೀಣ ಭಾಗವನ್ನು ಅಭಿವೃದ್ದಿಪಡಿಸಲು ಎನ್ ಆರ್‍ಜಿ ಯೋಜನೆ ಅಡಿಯಲ್ಲಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ದಿವಾಗಲು ಸಾಧ್ಯವಾಗುವುದು.ಎಲ್ಲರೂ ಸೇರಿ ಅಭಿವೃದ್ದಿ ಕೆಲಸಗಳನ್ನು ಮಾಡಬೇಕು. ಜನರು ಸಹಕಾರ ನೀಡಿದರೆ ಮಾತ್ರ ಅಭಿವೃದ್ದಿ ಮಾಡಲು ಸಾಧ್ಯವಾಗುವುದಾಗಿ ಹೇಳಿದರು.
ಮಾಜಿ ಜಿ.ಪಂ.ಸದಸ್ಯ ಎಲ್.ಟಿ. ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಹನುಮಾಪುರ ಗ್ರಾಮದಲ್ಲಿ ನೂತನ ಗ್ರಾ.ಪಂ. ಕಟ್ಟಡವನ್ನು ನಿರ್ಮಾಣ ಮಾಡಲು ಭೂಮಿಯನ್ನು ದಾನ ಮಾಡಿದ ಲಕ್ಷ್ಮವ್ವ ಕಾಮನಳ್ಳಿ ಅವರನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸನ್ಮಾನಿಸಿದರು.
ನಾಗನೂರ ಗ್ರಾ.ಪಂ ಅಧ್ಯಕ್ಷರಾದ ಸುನೀಲ ಸಳಕೆ, ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಕೃಷ್ಣ ಹಿರೇಹಳ್ಳಿ, ಪ್ರಮುಖರಾದ ದೇವು ಪಾಟೀಲ, ವಾಯ್.ಪಿ. ಪಾಟೀಲ, ನಾಗನೂರ ಗ್ರಾ.ಪಂ.ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.