ಅಧಿಕಾರ ಪದಗ್ರಹಣ ಕಾಂಗ್ರೆಸ್ ಪಕ್ಷದಿಂದ ವಿಜಯೋತ್ಸವ

ಸೈದಾಪುರ:ಮೇ.21:ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾಗಿ ಡಿ.ಕೆ.ಶಿವಕುಮಾರ ಹಾಗೂ ಇತರೆ ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ಹೊಸ ಸರಕಾರ ರಚನೆಯಾಗುತ್ತಿದ್ದಂತೆ ಪಟ್ಟಣದಲ್ಲಿನ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪಟಾಸಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಿಪಾಲರೆಡ್ಡಿ ದುಪ್ಪಲ್ಲಿ ಮಾತನಾಡಿ, ಬಿಜೆಪಿ ಪಕ್ಷದ ಭ್ರಷ್ಟಾಚಾರ ಆಡಳಿತಕ್ಕೆ ಬೆಸತ್ತಾ ಜನತೆ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವುದರ ಮೂಲಕ ಸದೃಢ ಸರಕಾರ ರಚನೆಗೆ ಬೆಂಬಲ್ಲಿಸಿದ್ದಾರೆ. ಇದಕ್ಕೆ ಪೂರಕವಾಗಿ ಇಂದು ನೂತನ ಸರಕಾರ ರಚನೆಯಾಗಿದೆ. ಉತ್ತಮ ಆಡಳಿತ ಅನುಭವ ಹೊಂದಿದ ಹಿರಿಯ ನಾಯಕರು ಸೇರಿದಂತೆ ಎಲ್ಲಾ ವರ್ಗದ ಜನರು ಸರಕಾರ ರಚನೆಯಲ್ಲಿದ್ದಾರೆ. ಇದು ರಾಜ್ಯದ ಅಭಿವೃದ್ದಿಗೆ ನೆರವಾಗಲಿದೆ. ಬಡತನ ಮುಕ್ತಾ ರಾಜ್ಯ ನಮ್ಮದಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶರಣಿಕಕುಮಾರ ದೋಖಾ, ಸಿದ್ದಣ್ಣಗೌಡ ಪಾಟೀಲ ಕಡೇಚೂರು, ಚಂದ್ರಶೇಖರ ವಾರದ, ಬಸವರಾಜಯ್ಯ ಸ್ವಾಮಿ ಬದ್ದೆಪಲ್ಲಿ, ಲಕ್ಷ್ಮಿಕಾಂತರೆಡ್ಡಿ ಪಲ್ಲಾ, ಜಗನಾಥರೆಡ್ಡಿ ಪಲ್ಲಾ, ಸದಾಶಿವರೆಡ್ಡಿ ಪಾಟೀಲ ಕಣೇಕಲ, ಸುರೇಶ ಆನಂಪಲ್ಲಿ, ವಿಜಯಕುಮಾರ ಕಂದಳ್ಳಿ, ಚಂದಪ್ಪ ಕಾವಲಿ, ದೇವಪ್ಪ ರಾಚನಳ್ಳಿ, ವೆಂಕಟೇಶ ಕೂಡಲೂರು, ಖತಾಲ ಮುನಗಾಲ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.