ಅಧಿಕಾರ ದುರುಪಯೋಗ ಹಾಗೂ ದಲಿತರ ಮೇಲೆ ದೌರ್ಜನ್ಯ ಖಂಡನೆ

ವಿಜಯಪುರ : ಎ.4:ತಿಕೋಟಾ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಾದ ಎಸ್.ಎ. ಡಲಾಯತ ಅಧಿಕಾರ ದುರಪಯೋಗ ಹಾಗೂ ದಲಿತರ ಮೇಲೆ ದೌರ್ಜನ್ಯವನ್ನು ಖಂಡಿಸಿ ಇಂದು ತಿಕೋಟಾ ತಾಲೂಕಿನ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳು, ವಿಜಯುಪುರ ಇವರಿಗೆ ಮನವಿ ಸಲ್ಲಿಸಲಾಯಿತು.
ಈ ಹಿಂದೆ ಮುಖ್ಯಾಧಿಕಾರಿಗಳ ವಿರುದ್ಧ ಎರಡು ಬಾರಿ ದೂರು ಸಲ್ಲಿಸಿದರೂ ಸಂಬಂಧಪಟ್ಟ ಮೇಲಾಧಿಕಾರಿಗಳಿಂದ ಯಾವುದೇ ಕ್ರಮ ಅವರ ವಿರುದ್ಧ ಕೈಗೊಳ್ಳದೆ ಇರುವದು ಭ್ರಷ್ಟ ಅಧಿಕಾರಿಗೆ ರಕ್ಷಣೆ ನೀಡುತ್ತಿರುವದು ಕಂಡು ಬರುತ್ತದೆ. ಸಾರ್ವಜನಿಕರು , ದಲಿತರು ಯಾವುದೇ ಕೆಲಸಕ್ಕೆ ಹೋದಾಗ ವಿನಾಕಾರಣ ವಿಳಂಬಮಾಡಿ ನಾಳೆ ಬನ್ನಿ ನೋಡೋಣ ಅಂತಾ ಹೇಳುವದು. ಯಾವುದೇ ಸಂಘಟನೆಗಳ ಪತ್ರಕ್ಕೆ ಬಿಡಿಕಾಸು ಕಿಮ್ಮತ್ತು . ಇಲ್ಲದಂತೆ ವ್ಯವಹರಿಸುವದು , ಯಾವುದೇ ರೀತಿ ಸೌಜನ್ಯ ಗೌರವ ನೀಡದೆ ದಲಿತ ಮುಖಂಡರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವದು. ಕೆಲವು ರಾಜಕೀಯ ವ್ಯಕ್ತಿಗಳ ಕೈ ಜೋಡಿಸಿ ರಾಜಕಾರಣ ಮಾಡುತ್ತ ದಲಿತ ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ಈ ವರ್ಷದ ಕ್ರೀಯಾ ಯೋಜನೆಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಇನ್ನೂವರೆಗೂ ಯಾವುದೇ ಕಾಮಗಾರಿಗಳು ಕಾಲೋನಿಯಲ್ಲಿ ಕೈಗೊಂಡಿರುವದಿಲ್ಲ. ಅಷ್ಟೆ ಅಲ್ಲದೆ ಇವರು ಒಬ್ಬ ಭ್ರಷ್ಟ ಅಧಿಕಾರಿ ಅಂತ ಹೇಳಲು ಇನ್ನೊಂದು ಉದಾ : ತಿಕೋಟಾ ಪಟ್ಟಣದ ಆಸ್ತಿ ನಂ. 174 ಸಾದು ಮಠ ಎಂದು ಪಟ್ಟಣದ ಸಾರ್ವಜನಿಕರಿಗೆ ಇರುವ ಆಸ್ತಿಯನ್ನು ಒಬ್ಬ ವ್ಯಕ್ತಿಗೆ ವೈಯಕ್ತಿಕವಾಗಿ ಹೆಸರಿನಲ್ಲಿ ದಾಖಲಿಸಿದ್ದು. ಈ ವಿಷಯಕ್ಕೆ ಸಂಬಂಧಿಸಿದಂತೆ ಕೂಲಕುಂಠವಾಗಿ ಪರಿಶೀಲಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕು.
ಪಟ್ಟಣದ ಮನೆ / ಖುಲ್ಲಾಜಾಗ / ಆಸ್ತಿಗಳ , ಕರ ವಸೂಲಿ ಇಸ್ವತ್ವ ( ಕಂಪ್ಯೂಟರ ) ಉತಾರೆಗಳನ್ನು ಮಾಡುವಲ್ಲಿ ರೂ . 15-20 ಸಾವಿರಗಳನ್ನು ಸಾರ್ವಜನಕರಿಂದ ವಸೂಲಿ ಮಾಡುತ್ತಿದ್ದು, ಇದು ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ದಲಿತ ಪೌರ ಕಾರ್ಮಿಕರಿಗೆ ಹಾಗೂ ಕೆಲವು ಸಿಬ್ಬಂದಿ ವರ್ಗಗಳಿಗೆ ಒಬ್ಬರಿಗೊಂದು, ಒಬ್ಬರಿಗೊಂದು ತಪ್ಪು ಮಾಹಿತಿ ನೀಡಿ ವಿನಾಕಾರಣ ನೋಟಿಸ್ ನೀಡುವುದು ಕಿರುಕುಳ ಕೊಡುವದು ಇವರ ಚಾಳಿಯಾಗಿದೆ . ಈ ಕಚೇರಿಯ ಸಿಬ್ಬಂದಿಗಳಿಗೆ ತಾರತಮ್ಯ ಮಾಡುವದು ಕೆಲವು ” ಡಿ ” ದರ್ಜೆಯ ಸಿಬ್ಬಂದಿಗಳಿಗೆ ಅವರ ಕಾರ್ಯವ್ಯಾಪ್ತಿ ಬಿಟ್ಟು ಬೇರೆ ಕೆಲಸಗಳಿಗೆ ಉಪಯೋಗಿಸಿಕೊಳ್ಳುವದು ಇವರ ಕಾಯಕವಾಗಿದೆ.
ಈ ಹಿಂದೆ ಖರ್ಚು ಮಾಡಿದ ಅನುದಾನಲ್ಲಿ ದುರುಪಯೋಗಪಡಿಸಿಕೊಂಡಿದ್ದು ಕಂಡು ಬಂದಿದ್ದು, ಕೂಡಲೇ ಖರ್ಚು ಹೆಚ್ಚಿನ ಬಗ್ಗೆ ತನಿಖೆ ಮಾಡಿ , ಇಂತಹ ಅಧಿಕಾರಿಯಿಂದ ಯಾವುದೇ ದಲಿತ ಕಾಲೋನಿಗಳ , ಪಟ್ಟಣಗಳು , ಅಭಿವೃದ್ಧಿಯಿಂದ ವಂಚನೆ ಆಗಿರುವದು ಇದಕ್ಕೆ ಇವರ ನೇರ ಹೊಣೆಗಾರರು ಆಗಿರುವದರಿಂದ ಕೂಡಲೇ ಇವರನ್ನು ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಿ ವಜಾ ಮಾಡುವಂತೆ ಆಗ್ರಹಪಡಿಸಿದರು.
ಸಂದರ್ಭದಲ್ಲಿ ಯಮನಪ್ಪ ಮಲಕನವರ, ಮಾಜಿ ಗ್ರಾ.ಪಂ. ಸದಸ್ಯರು ತಿಕೋಟಾ, ಮನೋಜ ಪರನಾಕರ ಮಾಜಿ ಗ್ರಾ.ಪಂ. ಉಪಾಧ್ಯಕ್ಷರು ತಿಕೋಟಾ, ಸಿದ್ದಾರ್ಥ ಪರನಾಕರ, ಜಿಲ್ಲಾ ಡಿ.ಎಸ್. ಸಮಿತಿ, ವಿಜಯಪುರ, ಕಲ್ಲಪ್ಪ ಪರನಾಕರ (ದಲಿತ ಮುಖಂಡರು, ಸದಾಶಿವ ಪೂಜಾರಿ (ಮಾಜಿ ಗ್ರಾ.ಪಂ. ಅಧ್ಯಕ್ಷರು, ತಿಕೋಟಾ) ಹಾಗೂ ಇನ್ನಿತರರು ಉಪಸ್ಥಿತರಿದ್ದರು.