ಅಧಿಕಾರ ದಾಹದ ಬಿಜೆಪಿಗೆ ತಕ್ಕ ಪಾಠ ಕಲಿಸಲು ಮತದಾರರಲ್ಲಿ ಮನವಿ

ದಾವಣಗೆರೆ.ಮಾ.೨೭; ಇದೇ ತಿಂಗಳು 29ರಂದು ಇಲ್ಲಿನ ಮಹಾನಗರ ಪಾಲಿಕೆ 20ನೇ ವಾರ್ಡ್ನ ಉಪಚುನಾವಣೆಗೆ ಕಾಂಗ್ರೆಸ್‌ಅಭ್ಯರ್ಥಿ ಮೀನಾಕ್ಷಿಜಗದೀಶ್‌ಅವರ ಪರವಾಗಿ ಬಹಿರಂಗಸಭೆ, ಪ್ರಚಾರ ಕೊನೆಯ ದಿನವಾದ ಕಾಂಗ್ರೆಸ್ ಪಕ್ಷ ಶಕ್ತಿ ಪ್ರದರ್ಶನ ನಡೆಸಿತು.ಭಾರತ್ ಕಾಲೋನಿ, ಹೆಚ್ ಕೆ.ಆರ್.ನಗರ, ಅಣ್ಣಾ ನಗರ ಸೇರಿದಂತೆ ವಾರ್ಡ್ನ ಎಲ್ಲಾ ಭಾಗಗಳಲ್ಲಿ ಮಾಜಿ ಸಚಿವರು, ಹಾಲಿ ಶಾಸಕರುಗಳಾದ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಪಿ.ಟಿ.ಪರಮೇಶ್ವರನಾಯ್ಕ ಅವರುಗಳು ರೋಡ್ ಷೋ ನಡೆಸಿ ಬಹಿರಂಗ ಸಭೆಯನ್ನದೇಶಿಸಿ ಮಾತನಾಡುತ್ತಾ ಬಿಜೆಪಿಗರ ಅಧಿಕಾರದ ದುರಾಸೆಯಿಂದ ಮತ್ತೆ ಚುನಾವಣೆ ಬಂದಿದೆ. ಈ ಉಪಚುನಾವಣೆಯಲ್ಲೂ ಸಹ ಕಾಂಗ್ರೆಸ್ ಪಕ್ಷವನ್ನು ಒಗ್ಗಟ್ಟಿನ ಮೂಲಕ ಗೆಲ್ಲಿಸಬೇಕೆಂದು ಕರೆ ನೀಡಿದರು.ಬಿಜೆಪಿ ಪಕ್ಷದವರ ಅಧಿಕಾರ ದಾಹದಿಂದ ದೇಶ ಮತ್ತು ರಾಜ್ಯಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲೂ ಇಂದು ಉಪಚುನಾವಣೆ ಎದುರಾಗಿದ್ದು, ಈ ವಾರ್ಡಿನ ಮತದಾರರು ನೀಡಿದ ತೀರ್ಪನ್ನು ಧಿಕ್ಕರಿಸಿದವರಿಗೆ ತಕ್ಕಪಾಠ ಕಲಿಸಬೇಕೆಂದು ಕರೆ ನೀಡಿದರು.ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ಇರುವುದರಿಂದ ಕಳೆದ ಬಾರಿ ಪಕ್ಷದ ಅಭ್ಯರ್ಥಿಗೆ 2ನೇ ದೊಡ್ಡ ಜಯಭೇರಿ ನೀಡಿದ್ದ ಈ ವಾರ್ಡಿನ ಜನತೆ ಈ ಬಾರಿ ಬಿಜೆಪಿ ಅಭ್ಯರ್ಥಿಗೆ ಠೇವಣಿ ಸಿಗದಂತೆ ಕಾಂಗ್ರೆಸ್ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕೆಂದರು.ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಒಂದೇ ಅಭಿವೃದ್ಧಿ ಚಿಂತನೆ ಮಾಡಲಿದೆ ಎಂಬುದಕ್ಕೆ ಕಳೆದ 7 ವರುಷಗಳ ದುರಾಡಳಿತ ನೋಡಿರುವ ಜನತೆ ಸರ್ಕಾರದ ಜನ ವಿರೋಧಿ ನೀತಿಗಳಿಂದ ಬೇಸತ್ತು ಬೀದಿಗಿಳಿದು ಹೋರಾಟ ನಡೆಸುತ್ತಿರುವುದೇ ಸಾಕ್ಷಿ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಮಾತನಾಡಿ ಈ ವಾರ್ಡಿನ ಎಲ್ಲರ ಆಶಯದಂತೆ ನಿವೇ ಹೇಳಿದ ಅಭ್ಯರ್ಥಿಗೆ ಪಕ್ಷ ಮಣೆ ಹಾಕಿದ್ದು, ತಾವುಗಳು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೇ ಸ್ವಾಭಿಮಾನದ ಸಂಕೇತವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಬೇಕೆಂದು ಮನವಿ ಮಾಡಿದರು.ಅಚ್ಚೇದಿನ್ ಎಂದು ಹೇಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಇಂದು ಜನಜೀವನ ಸಾಗಿಸದಂತೆ ದಿನಬಳಕೆ ವಸ್ತುಗಳ ದರ ಹೆಚ್ಚಳ ಸೇರಿದಂತೆ ಜನವಿರೋಧಿ ನೀತಿಗಳನ್ನು ತಂದಿದ್ದು, ಇದರ ವಿರುದ್ಧ ಮತ ಚಲಾಯಿಸುವ ಮೂಲಕ ಈ ಭಾಗದ ಜನತೆ ಬಿಜೆಪಿ ಮುಕ್ತ ರಾಷ್ಟç ನಿರ್ಮಾಣಕ್ಕೆ ನಾಂದಿ ಹಾಡಬೇಕೆಂದು ಕರೆ ನೀಡಿದರು.ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಮೀನಾಕ್ಷಿ ಜಗದೀಶ್ ಮಾತನಾಡಿ ಈ ಭಾಗದ ಜನರು ಸ್ವಾಭಿಮಾನದ ಪ್ರತೀಕವಾಗಿದ್ದು, ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕರ‍್ಯದರ್ಶಿ ದಿನೇಶ್ ಕೆ.ಶೆಟ್ಟಿ, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಹೆಚ್.ಓಬಳಪ್ಪ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಮಹಾನಗರ ಪಾಲಿಕೆ ಸದಸ್ಯ ಜಿ.ಎಸ್. ಮಂಜುನಾಥ್, ಕೆ.ಚಮನ್‌ಸಾಬ್, ಪಾಮೇನಹಳ್ಳಿ ನಾಗರಾಜ್, ಜಿ.ಡಿ.ಪ್ರಕಾಶ್, ಜಾಕೀರ್, ಕಲ್ಲಹಳ್ಳಿ ನಾಗರಾಜ್,  ದಾದಾಪೀರ್ ಮತ್ತಿತರರಿದ್ದರು.