ಅಧಿಕಾರ ಇರಲಿ, ಇಲ್ಲದೇ ಇರಲಿ ಕ್ಷೇತ್ರದ ಜನರೊಂದಿಗೆ ಸದಾ ಇರುವೆ

ರಾಯಚೂರು,ಜ.೧೧- ಮಾನ್ವಿ ಕ್ಷೇತ್ರದ ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಅವರ ೮೩ನೇ ವರ್ಷದ ಹುಟ್ಟಹಬ್ಬವನ್ನು ಅವರ ಸ್ವಗ್ರಾಮ ಬಲ್ಲಟಗಿಯಲ್ಲಿ ಮಂಗಳವಾರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕೇಕ್ ಕತ್ತರಿಸಿ ಸಿಹಿ ತಿನ್ನಿಸಿ ಸಂಭ್ರಮದಿಂದ ಆಚರಣೆ ಮಾಡಿದರು.
ನಂತರ ಮಾತನಾಡಿದ ಮಾಜಿ ಶಾಸಕರ ಜಿ.ಹಂಪಯ್ಯ ನಾಯಕ ಅವರು ನಮ್ಮ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನನ್ನ ಮೇಲೆ ಹೀಗೆ ಸದಾ ಪ್ರೀತಿ, ವಿಶ್ವಾಸ ಮತ್ತು ನಂಬಿಕೆ ಇಟ್ಟಿದ್ದಾರೆ. ಭಗವಂತನ ಕರುಣೆ ಮತ್ತು ಕ್ಷೇತ್ರದ ಜನತೆಯ ಆಶೀರ್ವಾದ ಸದಾ ನನ್ನ ಮೇಲೆ ಇರಲಿ, ಕ್ಷೇತ್ರದ ಜನತೆಯೊಂದಿಗೆ ನಾನಿರುತ್ತೇನೆ. ಜನತೆ ಆರ್ಶೀವಾದವಿದ್ದರೆ ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ನಾನು ಸದಾ ಸಿದ್ದನಿದ್ದೇನೆ ಎಂದು ಅವರು ಹೇಳಿದರು.
ನಾನು ನನ್ನ ೧೦ ವರ್ಷಗಳ ಅವಧಿಯಲ್ಲಿ ಎಂದೂ ೪೦ ಪರ್ಸೆಂಟ್ ಕಮಿಷನ್ ಪಡೆಯಲಿಲ್ಲ. ಸ್ವಗ್ರಾಮದಲ್ಲೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಿದ್ದೇನೆ. ಕಳೆದ ಚುನಾ ವಣೆಯಲ್ಲಿ ಜನರು ಬದಲಾವಣೆ ಬಯಸಿದ್ದರು, ನೂತನ ಶಾಸಕರು ಏನಾದರೂ ಬದಲಾವಣೆ ಮಾಡುತ್ತಾರೆ ಎಂದು ಜನರು ಬಯಸಿದ್ದರೂ, ಆದರೆ ೫ ವರ್ಷಗಳಲ್ಲಿ ಸ್ವಲ್ಪವೂ ಬದಲಾವಣೆಯಾಗಿಲ್ಲ. ಬದಲಾಗಿ ೪೦ ಪರ್ಸೆ೦ಟ ಕಮಿಷನ್ ದಂಧೆನಡೆಯಿತು.
ಈ ಬಾರಿ ಮತದಾರರು ಮತ್ತೆ ಬದಲಾವಣೆ ಬಯಸಿದ್ದಾರೆ ಮತ್ತೊಮ್ಮೆ ನನಗೆ ಮತದಾರರು ಆಶೀರ್ವಾದ ಮಾಡಲಿದ್ದಾರೆ ಎಂದು ಮಾಜಿ ಶಾಸಕ ಹಂಪಯ್ಯ ನಾಯಕ ವಿಶ್ವಾಸ ವ್ಯಕ್ತಪಡಿಸಿದರು.