ಅಧಿಕಾರಿ ಸೋಗು,೨೫೦ ಮಹಿಳೆಯರಿಗೆ ವಂಚನೆ

ಬೆಂಗಳೂರು ,ಫೆ.೨೯-ಸಂಗಾತಿಗಳನ್ನು ಹುಡುಕಲು ಸಹಾಯ ಮಾಡುವ ಮ್ಯಾಟ್ರಿಮೋನಿ ಸೈಟ್ ನಲ್ಲಿ ೪೫ ವರ್ಷದ ವ್ಯಕ್ತಿಯೊಬ್ಬ ತನ್ನ ೨೫ ವರ್ಷದ ಫೋಟೋ ಹಾಕಿ ಮ್ಯಾಟ್ರಿಮೋನಿ ಸೈಟ್ ನಲ್ಲಿ ನಕಲಿ ಖಾತೆ ತೆರೆದು ತಾನು ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿ ಎಂದು ನಂಬಿಸಿ ಕಳೆದ ಎರಡು ವರ್ಷಗಳಿಂದ ೨೫೦ ಮಹಿಳೆಯರೊಂದಿಗೆ ಮಾತುಕತೆ ನಡೆಸಿ ೧೯೫ ಯುವತಿಯರನ್ನು ವಂಚಿಸಿರುವ ಪ್ರಕರಣ ವರದಿಯಾಗಿದೆ.
ಮಹಿಳೆಯರು ಮತ್ತು ಯುವತಿಯರನ್ನು ಮದುವೆಯಾಗುವುದಾಗಿ ಹೇಳಿ ವಂಚಿಸುತ್ತಿದ್ದ ಆರೋಪಿಯನ್ನು ಬೆಂಗಳೂರು ನಗರ ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತ ಆರೋಪಿ ೪೫ ವರ್ಷದ ನರೇಶ್ ಪುರಿ ಅಲಿಯಾಸ್ ಗೋಸ್ವಾಮಿ, ಕಾಟನ್‌ಪೇಟೆ ಪ್ರದೇಶದ ಜವಳಿ ಅಂಗಡಿಯ ಉದ್ಯೋಗಿ ಎಂದು ಗುರುತಿಸಲಾಗಿದೆ.
ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚಿಸುತ್ತಿದ್ದ. ಅದರಲ್ಲಿಯೂ ವಿಧವೆಯರನ್ನು ಮತ್ತು ವಿಚ್ಛೇದಿತ ಮಹಿಳೆಯರಿಗೆ ಮೋಸ ಮಾಡುವುದು ಆತನ ಉದ್ಯೋಗವಾಗಿದೆ.
ಈ ವೇಳೆ ಅವರಿಗೆ ವಿವಿಧ ಕಾರಣಗಳನ್ನು ಹೇಳಿ ವಂಚಿಸಿ ಫರಾರಿ ಆಗುತ್ತಿದ್ದ ಎನ್ನಲಾಗಿದೆ. ಮಹಿಳೆಯರನ್ನು ಮದುವೆ ಮಾತುಕತೆಗೆ ಬೆಂಗಳೂರಿಗೆ ಕರೆಸಿಕೊಳ್ಳುತ್ತಿದ್ದನು. ಬಳಿಕ ಟಿಕೆಟ್ ರಿಸರ್ವೇಷನ್ ಮಾಡಿಸಬೇಕಿರುವುದರಿಂದ ಪರ್ಸ್ ಮನೆಯಲ್ಲಿಯೇ ಬಿಟ್ಟು ಬಂದಿದ್ದಾಗಿ ತಿಳಿಸಿ ಹಣ ಪಡೆದಿದ್ದಾನೆ.ನಂತರ ಅವರಿಗೆ ವಿವಿಧ ಕಾರಣಗಳನ್ನು ಹೇಳಿ ವಂಚಿಸಿ ಫರಾರಿ ಆಗುತ್ತಿದ್ದ ಎನ್ನಲಾಗಿದೆ. ಆರೋಪಿ ಎರಡು ಸಿಮ್ ಕಾರ್ಡ್ ಗಳನ್ನು ಬಳಸುತ್ತಿದ್ದ ಎನ್ನಲಾಗಿದೆ. ಹಿಂದಿ ಪತ್ರಿಕೆಯಲ್ಲಿ ಜಾಹಿರಾತಿನಲ್ಲಿ ಬರುವ ವಧು -ವರ ಮೊಬೈಲಿಗೆ ಪೋನ್ ಮಾಡಿ ತಾನು ಅವಿವಾಹಿತ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದ. ಅಗರ್ ಸೇನಾಜಿ ವೈವಾಹಿಕ ಮಂಚ್ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಸೇರ್ಪಡೆಕೊಳ್ಳುತ್ತಿದ್ದನು ಎನ್ನಲಾಗಿದೆ.
ಮಹಿಳೆಯರನ್ನು ಗುರುತಿಸಿ ಅವರೊಂದಿಗೆ ಪೋನ್ ಮೂಲಕ ಮಾತನಾಡಿ ಸಲುಗೆ ಬೆಳಸಿ ಮದುವೆ ಆಗುವುದಾಗಿ ಭರವಸೆ ನೀಡಿದ್ದಾನೆ. ರಾಜಸ್ಥಾನದ ೫೬, ಉತ್ತರ ಪ್ರದೇಶದ ೩೨, ದೆಹಲಿಯ ೩೨, ಕರ್ನಾಟಕದ ೧೭, ಮಧ್ಯಪ್ರದೇಶದ ೧೬, ಮಹಾರಾಷ್ರ ದ ೧೩, ಗುಜರಾತ್ ೧೧ ಮಹಿಳೆಯರಿಗೆ ವಂಚನೆ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಇನ್ನು ಅನೇಕ ವಂಚನೆ ಮಾಡಿದ ಪ್ರಕರಣಗಳು ತನಿಖೆಯಿಂದ ಹೊರಬರಲಿವೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.