ಅಧಿಕಾರಿ, ಸದಸ್ಯರಗಳಿಂದ ಶೌಚಾಲಯದ ಹಣ ದುರ್ಬಳಕೆ

ಮಾನ್ವಿ,ಆ.೧೦- ಸ್ವಚ್ಚಭಾರತ ಅಭಿಯಾನದಡಿಯಲ್ಲಿ ೧ಕೋಟಿ ೨೨ ಲಕ್ಷ ಪಟ್ಟಣಕ್ಕೆ ಅನುದಾನ ಬಂದಿದ್ದು ಕೇವಲ ೫೧ ಲಕ್ಷ ಅನುದಾನವನ್ನು ಮಾತ್ರ ಖರ್ಚುಮಾಡಲಾಗಿದ್ದು ಇನ್ನುಳಿದ ಹಣವನ್ನು ಅಧಿಕಾರಿಗಳು ಹಾಗೂ ಸದಸ್ಯರು ದುರ್ಬಳಕೆ ಮಾಡಿಕೊಂಡಿರುವ ಶಂಕೆಯಿದೆ ಅದರಂತೆಯೇ ಪಟ್ಟಣದ ೧೬ನೇ ವಾರ್ಡ್ನಲ್ಲಿ ಶೌಚಾಲಯ ನಿರ್ಮಾಣ ಯೋಜನೆಯ ಹಣ ಫಲನುಭಾವಿಗಳ ಖಾತೆಗೆ ಜಮ ವಾಗಿಲ್ಲ ಹಾಗೂ ವಾರ್ಡ್ನಲ್ಲಿ ಸುಸಜ್ಜಿತವಾದ ಶೌಚಾಲಯ ವ್ಯವಸ್ಥೆ ಇಲ್ಲದೆ ಮಹಿಳೆಯರು ಸೇರಿದಂತೆ ಅಲ್ಲಿನ ನಿವಾಸಿಗಳು ತುಂಬ ತೊಂದರೆ ಅನುಭವಿಸುತ್ತಿದ್ದಾರೆ ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಸೂಕ್ತವಾದ ತನಿಖೆಯನ್ನು ನಡೆಸಿ ತಪಿತಸ್ಥರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ನಿರುಪಾದಿ ಗೋಮರ್ಸಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ನಿರುಪಾದಿ ಕೆ.ಗೋಮರ್ಸಿ ಮಾತನಾಡಿ ರಾಜ್ಯ ಮತ್ತು ಕೇಂದ್ರ ,ಸರಕಾರಗಳು ಪಟ್ಟಣದಲ್ಲಿ ಬಹಿರ್ದೆಸೆ ಮುಕ್ತವಾಗಿಸಲು ಪುರಸಭೆಗೆ ಕೋಟ್ಯಾಂತರ ಅನುದಾನವನ್ನು ಬಿಡುಗೊಳಿಸುತ್ತದೆ ಪುರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ಮನೆಗಳವರಿಗೆ ಶೌಚಾಲಯವನ್ನು ಕಟ್ಟಿಸಿಕೊಳ್ಳಲು ಸಹಾಯ ಧನವನ್ನು ನೀಡುತ್ತದೆ ಹಾಗೂ ಸಾರ್ವಜನಿಕ ಶೌಚಾಲಯವನ್ನು ಕಟ್ಟಿಸುವುದಕ್ಕೆ ಹಾಗೂ ದುರಸ್ತಿಗಾಗಿಯು ಕೂಡ ಸಾಕಷ್ಟು ಅನುದಾನ ಬರುತ್ತದೆ ಆದ್ದರೆ ಮಾನ್ವಿ ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ವಾರ್ಡ್ಗಳನ್ನು ಚುನಾಯಿತ ಪುರಸಭೆ ಸದಸ್ಯರುಗಳ ನಿರ್ಲಕ್ಷದಿಂದಾಗಿ ಸರಕಾರದ ಮುಖ್ಯ ಅಶಾಯವಾದ ಬಹಿರ್ದೆಸೆ ಮುಕ್ತ ಪಟ್ಟಣವಾಗಿಸಲು ಇನ್ನೂ ಕೂಡ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಬಸವಪ್ರಭು ಮೇದಾರ, ಸದಸ್ಯರಾದ ಜಿ.ವೆಂಕಟೇಶ, ರಮೇಶನಾಯಕ, ಪಂಪಾಪತಿ ಹಡಪದ, ಸೇರಿದಂತೆ ಇನ್ನಿತರರು ಇದ್ದರು.