ಅಧಿಕಾರಿ ಮೇಲೆ ಹಲ್ಲೆ ,ಶ್ರೀದೇವಿ ವಿರುದ್ಧ ಪ್ರಕರಣ ದಾಖಲು

ಸಿಂಧನೂರು.ನ.10- ಕರ್ತವ್ಯ ನಿರತ ಮಹಿಳಾ ‌ಅಧಿಕಾರಿ‌ ಮೇಲೆ ‌ಹಲ್ಲೆ‌ಮಾಡಿ ದರ್ಪ‌ತೋರಿದ‌ ಇಂದಿರಾಗಾಂಧಿ ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟದ ಅದ್ಯಕ್ಷರಾದ ಶ್ರೀದೇವಿ ಮೇಲೆ ನಿನ್ನೆ ತಡರಾತ್ರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಲಾಧಿಕಾರಿಗಳ ಆದೇಶದ ಮೇರೆಗೆ ಒಕ್ಕೂಟದ ಕಛೇರಿಗೆ ಬಂದು ಕಡತಗಳನ್ನು ಕೊಡಿ ಎಂದು ಕೇಳಿದ ಶಿಶು ಅಭಿವೃದ್ಧಿ ಯೋಜನೆಯ ಕಛೇರಿಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗಿತಾಬಾಯಿ ಮೇಲೆ ಒಕ್ಕೂಟದ ಅದ್ಯಕ್ಷೆ ಶ್ರೀದೇವಿ ದಾಖಲಾತಿಗಳನ್ನು ಕೊಡದೆ ಹೊರಗೆ ಎಸೆದು ಚಲ್ಲಾಪಿಲ್ಲಿ‌ಮಾಡಿ,ರಂಪಾಟ ನಡೆಸಿ ಅಧಿಕಾರಿ ಮೇಲೆ ಹಲ್ಲೆ ‌ಮಾಡಿದ್ದನ್ನು ಖಂಡಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಸೇರಿದಂತೆ ತಾಲೂಕಿನ ವಿವಿಧ ಕನ್ನಡಪರ ಸಂಘಟನೆಗಳು ಮತ್ತು ಅಂಗನವಾಡಿ ಮತ್ತು ಸಹಾಯಕಿಯರ ಸಂಘನಗರದಲ್ಲಿ ಬೃಹತ್ ಹೋರಾಟ ಪ್ರತಿಭಟನೆ ನಡೆಸಿ ಶ್ರೀದೇವಿ ಮೇಲೆ ಪ್ರಕರಣ ದಾಖಲಿಸಿ ಬಂಧಿಸಬೇಕು ಹಾಗೂ ‌ಹಲ್ಲೆಗೊಳಗಾದ ಅಧಿಕಾರಿಗೆ ರಕ್ಷಣೆ ನೀಡಬೇಕೆಂದು ಆಗ್ರಹ ಪಡಿಸಲಾಗಿತ್ತು .
ದಿ.9-11-2020 ರಂದು ಹಲ್ಲೆಗೊಳಗಾದ ಅಧಿಕಾರಿ ಯೋಗಿತಾಬಾಯಿ ಶ್ರೀದೇವಿ ವಿರುದ್ಧ ದೂರು ನೀಡಿದ ಕಾರಣ ನಗರ ಠಾಣೆಯಲ್ಲಿ ಪಿಎಸ್ಐ ವಿಜಯ ಕೃಷ್ಣ ಪ್ರಕರಣ ದಾಖಲು ಮಾಡಿಕೊಂಡು ಶ್ರೀದೇವಿ ‌ಬಂಧನಕ್ಕಾಗಿ ಪೋಲಿಸರು ಬಲೆ ಬಿಸಿದ್ದು ಶ್ರೀದೇವಿ ಪೋಲಿಸರು ಬಂಧಿಸುವ ಭಯಬೀತಿಯಿಂದ ನಗರದಿಂದ ನಾಪತ್ತೆಯಾಗಿದ್ದಾರೆಂದು‌ ತಿಳಿದುಬಂದಿದೆ.