ಅಧಿಕಾರಿಗಾಗಿ ಲಂಚ ಪಡೆದ ಗುತ್ತಿಗೆದಾರನ ಬಂಧನ

ವಿಜಯಪುರ ಏ 21 ವಿಜಯಪುರದ ಮಹಾನಗರ ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರೊಬ್ಬರ ಹಿಂಬಾಲಕ ಗುತ್ತಿಗೆದಾರನೊಬ್ಬನನ್ನು ಲಂಚ ಪಡೆದ ಆರೋಪದ ಮೇಲೆ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಸದಾನಂದ ವಿಠ್ಠಲ ಗುನ್ನಾಪುರ ನೀಡಿದ ದೂರಿನ ಮೇರೆಗೆ ಗುತ್ತಿಗೆದಾರ ಮಹಾಂತೇಶ ಬಳಿಗಾರ 4 ಸಾವಿರ ರೂ ಲಂಚ ಪಡೆದು, ಎಇಇ ತಾರಾಸಿಂಗ್ ದೊಡಮನಿಗೆ ಹಣ ಸ್ವೀಕರಿಸಿದ ಬಗ್ಗೆ ಮೊಬೈಲ್ ಮೂಲಕ ತಿಳಿಸಿದ ಬಳಿಕ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ, 4 ಸಾವಿರ ರೂ ಲಂಚದ ಹಣ ಜಪ್ತಿ ಮಾಡಿದ್ದಾರೆ.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರಾಸಿಂಗ್ ದೊಡಮನಿಯವರಿಗೆ ಕಳೆದ ಒಂದು ವಾರದ ಹಿಂದೆ ಮಹಾನಗರ ಪಾಲಿಕೆಯಿಂದ ವರ್ಗಾವಣೆ ಆಗಿದೆ. ಆದರೂ ಬಿಲ್‍ಗೆ ಸಹಿ ಮಾಡದೇ ಪೀಡಿಸುತ್ತಿದ್ದರೆಂದು ಆರೋಪಿಸಲಾಗಿದೆ.