ಅಧಿಕಾರಿಗಳ ವರ್ಗಾವಣೆಯಿಂದ ಅಡಳಿತ ಕುಂಟಿತ, ಯಾವ ವರ್ಗಾವಣೆಯೂ ಸಲ್ಲ-ಪಿ.ರಾಜು

ಸಂಡೂರು: ಏ:18:ಅಧಿಕಾರಿಗಳ ವರ್ಗಾವಣೆಯ ಕುರಿತು ಕೆಲ ಪಟ್ಟ ಭದ್ರರು ಮನವಿ ಸಲ್ಲಿಸಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಯಾವುದೇ ಕಾರಣಕ್ಕೂ ಅಧಿಕಾರಿಗಳ ವರ್ಗಾವಣೆಯನ್ನು ಮಾಡಬಾರದು, ಕಾರಣ ಈಗಾಗಲೇ ಮೀನುಗಾರಿಕೆ ಇಲಾಖೆ, ಪರಿಶಿಷ್ಟ ಪಂಗಡ, ಸಣ್ಣನೀರಾವರಿ, ರೇಷ್ಮೆ ಇಲಾಖೆ ಅಧಿಕಾರಿಗಳಿಲ್ಲದೆ ಅಭಿವೃದ್ದಿ ಕಾರ್ಯಗಳು ನಿಂತುಹೋಗಿವೆ, ಇನ್ನು ನಿಷ್ಟೆಯಿಂದ ಬಹು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿದಲ್ಲಿ ತಾಲೂಕು ಮತ್ತಷ್ಟು ಹಿಂದುಳಿದ ತಾಲೂಕಾಗುವುದರಲ್ಲಿ ಅನುಮಾನವಿಲ್ಲ ಅದ್ದರಿಂದ ಯಾವುದೇ ಕಾರಣಕ್ಕೂ ಅಧಿಕಾರಿಗಳ ವರ್ಗಾವಣೆ ಮಾಡಬಾರದು ಎಂದು ಕರಾವೇ, ಅಧ್ಯಕ್ಷ ರಾಜು,.ಪಿ, ರೈತ ಸಂಘದ ಅಧ್ಯಕ್ಷ ಬಿ.ಎಂ. ಉಜ್ಜಿನಯ್ಯ, ಜಿಲ್ಲಾ ಮುಖಂಡ ಎಂ.ಎಲ್.ಕೆ. ನಾಯ್ಡು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಿ.ರಾಜು ಮಾತನಾಡಿ ಈಗಾಗಲೇ ಅಧಿಕಾರಿಗಳ ಕೊರತೆಯಿಂದ ರೇಷ್ಮೆ ಇಲಾಖೆ ಕೂಡ್ಲಿಗಿ ಸ್ಥಳಾಂತರವಾಗಿದೆ, ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಲ್ಲದೆ ಕಛೇರಿ ಮುಚ್ಚುವ ಹಂತಕ್ಕೆ ಹೋಗಿದೆ, ಇದೇ ರೀತಿ ಹಲವಾರು ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದ ಅಭಿವೃದ್ದಿ ಕುಂಟಿತವಾಗಿವೆ, ಅದರ ಮದ್ಯದಲ್ಲಿ ಬಹುಕಾಲದಿಂದ ತಾಲೂಕಿನ ಸಮಾಜ ಕಲ್ಯಾಣ, ಜಿಲ್ಲಾ ಪಂಚಾಯಿತಿ ಇತರ ಇಲಾಖೆಗಳಲ್ಲಿ ನಿರಂತರ ಕೆಲಸ ಮಾಡುತ್ತಿದ್ದು ಅವರನ್ನೂ ವರ್ಗಾಯಿಸಿ ಎನ್ನುವುದು ಎಷ್ಟು ಸರಿ , ಇದರಿಂದ ಅಧಿಕಾರಿಗಳು ಖಿನ್ನತೆಗೆ ಒಳಗಾಗಿದ್ದಾರೆ, ಅದ್ದರಿಂದ ಸರ್ಕಾರ ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡದೆ ಖಾಲಿ ಇರುವ 150ಕ್ಕೂ ಹೆಚ್ಚು ಶಿಕ್ಷಕರು, ಪಶುಸಂಗೋಪನೆ, ತೋಟಗಾರಿಕೆ, ಕೃಷಿ, ಕಂದಾಯ, ಅಸ್ಪತ್ರೆಯಲ್ಲಿ ಖಾಲಿ ಇರುವ ಸಿಬ್ಬಂದಿಗಳನ್ನು ನೇಮಿಸಿ ನಂಜುಂಡಪ್ಪ ವರದಿಯ ಅನ್ವಯ ಪ್ರಗತಿಯನ್ನು ಸಾಧಿಸಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಇಂದು ಪಟ್ಟಣದ ತಹಶೀಲ್ದಾರ್ ಕಛೇರಿಯ ಅವರಣದಲ್ಲಿ ಕರ್ನಾಟಕ ರಕ್ಷಣಾವೇದಿಕೆ ಅಧ್ಯಕ್ಷ ಪಿ.ರಾಜು, ಹಾಗೂ ಸದಸ್ಯರು, ಕನ್ನಡ ಕ್ರಾಂತಿದಳ ಕಾರ್ಯದರ್ಶಿ ಕೆ.ಕೆ.ದಾದಾಖಲಂದರ್, , ರೈತ ಸಂಘ ಅಧ್ಯಕ್ಷ ಬಿ.ಎಂ. ಉಜ್ಜಿನಯ್ಯ, , ಚಾಲಕರ ಕ್ಷೇಮಾಭಿವೃದ್ದಿ ಸಂಘ ಅಧ್ಯಕ್ಷ ಕೊಟ್ರೇಶ್, ಡಾ. ಬಿ.ಅರ್. ಅಂಬೇಡ್ಕರ್ ಸಂಘ ಅಧ್ಯಕ್ಷ ಶಿವಲಿಂಗಪ್ಪ, ಇತರ ಹಲವಾರು ಸಂಘದ ಅಧ್ಯಕ್ಷರುಗಳು ಪದಾಧಿಕಾರಿಗಳು ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಕಛೇರಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ವರ್ಗಾವಣೆ ಬೇಡ, ಕೆಲ ಪಟ್ಟಭದ್ರದ ಹಿತಾಸಕ್ತಿಗೆ ಬಲಿಯಾಗವುದು ಬೇಡ ಎಂದು ಹೇಳಿ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.