ಅಧಿಕಾರಿಗಳ ಮಾತಿಗೆ ಕಿಮ್ಮತು ನೀಡದೆ ಅಂಗಡಿಗಳು ಓಪನ್

ಸಿರವಾರ.ಏ.೩೦- ೨ ದಿನಗಳ ನಂತರ ಪ್ರಾರಂಭವಾದ ತರಕಾರಿ ಮಾರಾಟಕ್ಕೆ ಜನರು ಮುಗಿಬಿದ್ದೂ ತರಕಾರಿ ಖರೀದಿಸುತ್ತಿದ್ದರೆ, ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಿದರೂ ಅಧಿಕಾರಿಗಳ ಮಾತು ಗಾಳಿಗೆ ತೂರಿ ಎಲ್ಲಾ ಅಂಗಡಿಗಳು ತೆರೆದು ವ್ಯಾಪಾರ ಭರ್ಜರಿಯಾಗಿ ಮಾಡುತ್ತಿದ್ದರು.
ಪಟ್ಟಣದ ಮುಖ್ಯರಸ್ತೆಯ ಎರಡು ಭಾಗದಲ್ಲಿ ವಿವಿಧ ರೀತಿಯ ಅಂಗಡಿ, ತರಕಾರಿ, ವ್ಯಾಪಾರ ಕೇಂದ್ರವಾಗಿದೆ. ತರಕಾರಿ ಮಾರುಕಟ್ಟೆಯನ್ನು ತೆರೆದ ಪ್ರದೇಶಗಳಿಗೆ ಸ್ಥಳಾಂತರ ಮಾಡುವಂತೆ ಆಧೇಶ ಮಾಡಿದ ಹಿನ್ನಲೆಯಲ್ಲಿ ಅಲ್ಲಿಗೆ ಸ್ಥಳಾಂತರಗೊಳಲು ವ್ಯಾಪಾರಸ್ಥರು ಹಿಂದೆಟು ಹಾಕಿ ತರಕಾರಿ ಮಾರಾಟ ಮಾಡದೆ ಸ್ವಯಂ ಬಂದ್ ಮಾಡಿದರೂ, ಕೊನೆಗೆ ಅನಿವಾರ್ಯವಾಗಿ ದೇವದುರ್ಗ ರಸ್ತೆಯಲ್ಲಿ, ಸರ್ಕಾರಿ ಉನ್ನತಿಕರಿಸಿದ ಶಾಲೆಯ ಆವರಣ, ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ಬೆಳಗ್ಗೆಯಿಂದಲೇ ತರಕಾರಿ ಮಾರಾಟ ಪ್ರಾರಂಭವಾಗಿತು.
ಎರಡು ದಿನಗಳಿಂದ ತರಕಾರಿ ದೊರೆಯದೆ ಇರುವುದರಿಂದ ಮತ್ತೆ ಎಲ್ಲಾ ಬಂದ್ ಮಾಡಬಹುದು ಎಂಬ ಆತಂಕದಲ್ಲಿ ಜನರು ಸಾಮಾಜಿಕ ಅಂತರ ಮರೆತು ಖರಿದಿಸುತ್ತಿರುವುದು ಸಾಮಾನ್ಯವಾಗಿತು. ಒಬ್ಬರ ನಂತರ ಒಬ್ಬರು ಬನ್ನಿ, ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ ಧರಿಸಿ ಎಂದು ವ್ಯಾಪಾರಸ್ಥರು ಮನವಿ ಮಾಡಿಕೊಂಡರು ಅದನ್ನು ಲೆಕ್ಕಿಸದೆ ಗ್ರಾಹಕರು ತರಕಾರಿ ಖರಿದಿಸುತ್ತಿದ್ದರು.
ಜಿಲ್ಲೆಯಾದ್ಯಂತ ಅಗತ್ಯ ವಸ್ತುಗಳ ಖರಿದಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿತು. ಬಟ್ಟೆ, ಚಪ್ಪಲಿ, ಹಾರ್ಡವೇರ್, ಸಿಮೆಂಟ್ ಅಂಗಡಿ, ಅಟೋಮೊಬೈಲ್ ಸೇರಿದಂತೆ ಬಹುತೇಕ ವ್ಯಾಪಾರಕ್ಕೆ ನಿರ್ಭಂಧ ವಿಧಿಸಿದರು. ಆದರೆ ಇಂದು ಆ ಆಧೇಶವನ್ನೆಲ್ಲಾ ಗಾಳಿಗೆ ತೂರಿ ಮುಖ್ಯರಸ್ತೆಯಲ್ಲಿರುವ ಬಹುತೇಕ ಅಂಗಡಿಗಳು ತೆರೆದು ವ್ಯಾಪಾರ ಮಾಡುತ್ತಿದ್ದರು.
ದೊಡ್ಡ ದೊಡ್ಡ ಬಟ್ಟೆ ಅಂಗಡಿಗಳಲ್ಲಿ ಒಳಗಡೆ ಗ್ರಾಹಕರನ್ನು ಕರೆದುಕೊಂಡು ಬಾಗಿಲು ಮುಚ್ಚಿ ವ್ಯಾಪಾರ ಮಾಡುತ್ತಿರುವುದು ಸಾಮಾನ್ಯವಾಗಿದೆ.
ಬೆಲೆ ಏರಿಕೆ: ವ್ಯಾಪಾರಕ್ಕೆ ೪ ಗಂಟೆ ಮಾತ್ರ ಅವಕಾಶ ನೀಢಿದ ಹಿನ್ನಲೆಯಲ್ಲಿ ವ್ಯಾಪಾರಸ್ಥರು ಇದರ ಲಾಭ ಪಡೆಯಲು ಬೆಲೆ ಏರಿಕೆ ಮಾಡಿದ್ದಾರೆ. ವಾರದ ಹಿಂದಿನ ಧರಕ್ಕೂ ಈಗಿನ ಧರಕ್ಕೂ ಬಹಳ ವ್ಯಾತ್ಯಾಸವಿದ್ದೂ ಗ್ರಾಹಕರು ಚೌಕಾಸಿ ಅವಕಾಶ ನೀಡದೆ ಅಧಿಕ ಬೆಲೆ ನೀಡಿ ಖರೀದಿಸುವ ಅನಿವಾರ್ಯತೆ ಇದೆ.
೨ ಗಂಟೆಯಲ್ಲಿಯೆ ವ್ಯಾಪಾರ :- ಬೆಳಗ್ಗೆಯಿಂದ ಸಂಜೆವರೆಗೂ ಏಷ್ಟು ವ್ಯಾಪಾರ ಆಗುತ್ತಿತು. ಈಗ ಕೇಲವ ೨ ಗಂಟೆಯಲ್ಲಿಯೆ ವ್ಯಾಪಾರ ಆಗುತ್ತಿದೆ ಎಂಬುದು ಕೇಲ ವ್ಯಾಪಾರಸ್ಥರು ಹೇಳುತ್ತಿದ್ದರೆ, ಮದ್ಯಾಹ್ನದಿಂದಲೇ ವ್ಯಾಪಾರ ಪ್ರಾರಂಭವಾಗುವ ವ್ಯಾಪಾರ ಬಂದ್ ಆಗಿರುವುದದರಿಂದ ಆ ವ್ಯಾಪಾರಸ್ಥರು ಕಣ್ಣಿರು ಹಾಕುತ್ತಿದ್ದಾರೆ.
ಹೊಟೇಲ್ ಹೊರಗಡೆ ಅಹಾರ ಸೇವನೆ :- ಹೊಟೇಲ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ನೀಢಲಾಗಿದೆ. ಸ್ಥಳೀಯರು ಪಾರ್ಸಲ್ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ಬೇರೆ ಕಡೆಯಿಂದ ಆಗಮಿಸಿದ ಜನರು ಪಾರ್ಸಲ್ ತೆಗೆದುಕೊಂಡು ಹೋಗಿ ಎಲ್ಲಿ ಸೇವನೆ ಮಾಡಬೇಕು. ಹೊರವಲಯಕ್ಕೆ ತೆಗೆದುಕೊಂಡು ಹೋಗಿ ಸೇವೆನೆ ಮಾಡಲು ನೀರು ಸ್ಥಳ ಬೇಕು. ಇದರಿಂದ ಹೋಟಲ್‌ಗಳ ಮೆಟ್ಟಿಲು, ಮುಂಭಾಗದಲ್ಲಿಯೆ ಕುಳಿತುಕೊಂಡು ಉಪಹಾರ ಸೇವನೆ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಕೃತಕ ಲಾಕ್‌ಡೌನ್‌ನಿಂದಾಗಿ ಬಡವರ ಮೇಲೆ ಕಷ್ಟ ಹೆಚ್ಚಾಗುತ್ತಿದೆ.