ಅಧಿಕಾರಿಗಳ ಬೇಜವಾಬ್ದಾರಿ ಸಹಿಸುವುದಿಲ್ಲ: ಸಚಿವ ಕೃಷ್ಣಬೈರೆಗೌಡ


ಬಾಗಲಕೋಟೆ,ನ.7 : ತಹಶೀಲ್ದಾರರು ಇ-ಆಫೀಸ್ ಬಳಕೆ ಮಾಡದಿರಲು ಕಾರಣವೆನೆಂದು ಕಿಡಿಕಾರಿ, ಮುಂದಿನ 15 ದಿನಗಳಲ್ಲಿ ಇ-ಆಫೀಸ್ ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೆಗೌಡ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ ನೂತನ ಸಭಾಂಗಣದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀ¯ನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಗಷ್ಟ.1ರಿಂದ ಕೆಲವು ಜಿಲ್ಲೆಗಳು ಇ- ಆಫೀಸ್ ನ್ನು ಅನುಷ್ಟಾನಗೊಳಿಸಿಕೊಂಡಿದ್ದು, ಈ ಜಿಲ್ಲೆಯ ಅಧಿಕಾರಿಗಳು ಮಾತ್ರ ಅದರತ್ತ ಗಮನ ಕೊಟ್ಟಿಲ್ಲವೆಂದರೆ ಪರೋಕ್ಷವಾಗಿ ಇದು ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಕಡತಗಳನ್ನು ತಮ್ಮಲ್ಲಿಯೇ ಇಟ್ಟುಕೊಂಡು ಜನರನ್ನು ಅನಗತ್ಯವಾಗಿ ಅಲೆದಾಡಿಸಲು ಮಾಡಿರುವ ತಂತ್ರವಾಗಿದೆ ಎಂದೇ ಹೇಳಬೇಕಾಗುತ್ತದೆ. ಎಸಿ, ತಹಶೀಲ್ದಾರÀ ಶೀರಸ್ತೆದಾ ಪಾರದರ್ಶಕತೆಯಿಂದ ಕೆಲಸ ಮಾಡಬೇಕು. ಅಧಿಕಾರಿಗಳ ಬೇಜಾವಾಬ್ದಾರಿತನವನ್ನು ಯಾವುದೇ ಕಾರಣಕ್ಕೂ ಸಹಿಸುವದಿಲ್ಲ. ಆಯಾ ಅವಧಿಯೊಳಗೆ ಕಡತಗಳು ಇ- ಆಫೀಸ್ ಮೂಲಕವೇ ವಿಲೇವಾರಿಯಾಗಬೇಕು. ಸಾರ್ವಜನಿಕರು ಅನಗತ್ಯವಾಗಿ ಕಂದಾಯ ಇಲಾಖೆಗೆ ಸುತ್ತಾಡುವುದನ್ನು ತಪ್ಪಿಸಿ, ಜನರ ಜೀವನಕ್ಕೆ ಪೂರಕವಾಗಿ ಕೆಲಸ ಮಾಡಿ ಎಂದರು.
ಈ ವರ್ಷ ಬರಗಾಲ ಎದುರಾಗಿದ್ದು, ಮುಂಬರುವ ದಿನಗಳಲ್ಲಿ ಕುಡಿವ ನೀರಿನ ಸಮಸ್ಯೇ ಎದುರಾಗಿವ ಸಾಧ್ಯತೆ ಇರುತ್ತದೆ ಆದ್ದರಿಂದ ಅಧಿಕಾರಿಗಲು ಎಲ್ಲಿಲ್ಲಿ ನೀರಿನ ಸಮಸ್ಯೆ ಇದೆ ಎಂಬುದನ್ನು ಸರ್ವೆ ಮಾಡಿ ನೀರಿನ ಸಮಸ್ಯೆಕಂಡು ಬರುವ ಸ್ಥಳಗಳಲ್ಲಿ ಖಾಸಗಿ ಟ್ಯಾಂಕರ್ ಮೂಲಕ ನೀರನ್ನು ಪೂರೈಸತಕ್ಕದ್ದು. ಜಿಲ್ಲಾಧಿಕಾರಿಗಳ ಖಾತೆಗೆ ಎನ್ ಡಿ ಆರ್ ಎಫ್ ನ ಮೊದ¯ನೆ ಹಂತದಲ್ಲಿ 27ಕೋಟಿ ನಂತರ 7ಕೋಟಿ ಒಟ್ಟಾರೆ 34 ಕೋಟಿಯನ್ನು ಒದಗಿಸಲಾಗಿದ್ದು, ಕುಡಿಯುವ ನೀರಿಗೆ ಮತ್ತು ಜಾನುವಾರುಗಳ ಮೇವಿಗಾಗಿ ಹಣವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬಹುದಾಗಿದೆ ಸಲಹೆ ನೀಡಿದರು.
ಬೆಳೆ ಸಮೀಕ್ಷೆÉಗಾಗಿ ಜಿಲ್ಲೆಯ ಎಲ್ಲಾ ರೈತರ ಸಂಪೂರ್ಣ ಮಾಹಿತಿಯನ್ನು ಮುಂದಿನ 10 ದಿನಗಳಲ್ಲಿ ಫ್ರೂಟ್ಸ್ ತಂತ್ರಾಶದಲ್ಲಿ ನಮೂದಿಸುವ ಮೂಲಕ ರೈತರಿಗೆ ಪರಿಹಾರ ನೀಡಬೇಕು ಎಂದರು. ಬಾಗಲಕೋಟೆ ಜಿಲ್ಲೆಯ ಸರಹದ್ದಿನಲ್ಲಿ ಎಷ್ಟು ಸರ್ಕಾರಿ ಜಮೀನು ಇದೆ? ಈ ಪೈಕಿ ಎಷ್ಟು ಒತ್ತುವರಿಯಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕಬೇಕು, ಕಲೆಹಾಕಿ ಸರ್ಕಾರಿ ಭೂಮಿಯನ್ನು ರಕ್ಷಿಸಿಸುವ ಕೆಲಸ ಮಾಡಿ, ಭೂಮಿಯನ್ನು ಗುರುತಿಸಿದ ನಂತರ ,ಮೂರು ತಿಂಗಳಿಗೊಮ್ಮೆ ಬೀಟ್ ವ್ಯವಸ್ಥೆಯ ಮೂಲಕ ಒತ್ತುವರಿಯಾಗಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಈ ಮಾಹಿತಿಯನ್ನು ನಮೂದಿಸಲು ಬೀಟ್ ಆಪ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಶೀರ್ಘದಲ್ಲಿ ಬಳಕೆಗೆ ಮುಕ್ತವಾಗಲಿದೆ ಎಂದರು.
ಸಭೆಯಲ್ಲಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕ ಹೆಚ್.ವಾಯ್ ಮೇಟಿ, ಜೆ.ಟಿ ಪಾಟೀಲ, ವಿಜಯಾನಂದ ಕಾಶಪ್ಪಪ್ಪನವರ, ಸಿದ್ದು ಸವದಿ. ಜಗದೀಶ ಗುಡುಗುಂಟಿ, ಬಿ.ಬಿ ಚಿಮ್ಮನಕಟ್ಟಿ, ಎಮ್.ಎಲ್.ಸಿ. ಪಿ.ಹೆಚ್ ಪೂಜಾರ, ಕಂದಾಯ ಇಲಾಖೆ ಕಾರ್ಯದರ್ಶಿ ಪಿ. ಸುನೀಲ ಕುಮಾರ, ಜಿಲ್ಲಾಧಿಕಾರಿ ಜಾನಕಿ ಕೆ.ಎಮ್, ಸಿ.ಇ.ಓ ಶಶಿದರ್ ಕುರೇರ್ ಸೇರಿದಂತೆ ಇತರರು ಇದ್ದರು.