ಅಧಿಕಾರಿಗಳ ನಿರ್ಲಕ್ಷ ಧೋರಣೆ ಜೈ ಭಾರತ್ ವೇದಿಕೆ ಆಕ್ರೋಶ

ಬಂಗಾರಪೇಟೆ. ಆ.೩-ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ರಸ್ತೆಗಳನ್ನು ಸಮರ್ಪಕವಾಗಿ ದುರಸ್ತಿ ಮಾಡಿಲ್ಲ ಎಂದು ಜೈ ಭಾರತ್ ಜಾಗೃತಿ ವೇದಿಕೆ ಸಂಸ್ಥಾಪನ ರಾಜ್ಯಾಧ್ಯಕ್ಷ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು
ಬಂಗಾರಪೇಟೆ ತಾಲೂಕಿನ ದ್ವಿಪತ ರಸ್ತೆ ನಿರ್ಮಾಣ ಕಾರ್ಯಕ್ಕೆ ೨೦೧೫ ಮತ್ತು ೧೬ನೇ ಸಾಲಿನಲ್ಲಿ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅನುಮೋದನೆ ಯೊಂದಿಗೆ ೭ ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಿತ್ತು ತದನಂತರದ ವರ್ಷಗಳಲ್ಲಿ ಇದುವರೆಗೂ ರಸ್ತೆ ದುರಸ್ತಿ ಕಾರ್ಯಗಳು ನಡೆದಿರುವುದಿಲ್ಲ ಪ್ರಸ್ತುತ ಈಗ ರಸ್ತೆಗಳು ದೊಡ್ಡ ದೊಡ್ಡ ಹಳ್ಳಗಳಿಂದ ಕೂಡಿದ್ದು ಜನರ ಸಂಚಾರಕ್ಕೆ ಸಂಚಕಾರವನ್ನು ತರುವಂತಿದೆ ಈ ಮುಖ್ಯ ರಸ್ತೆಯು ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಹೋಗುವುದರಿಂದ ಬಾರಿ ಗಾತ್ರದ ಲಾರಿ ಮತ್ತು ಟ್ರಕ್ ಗಳು ಚಲಿಸುತ್ತದೆ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ಜಲ್ಲಿಕಲ್ಲುಗಳು ಮೇಲ್ಭಾಗದಲ್ಲಿ ಕಾಣಿಸಿತ್ತದೆ ಮಳೆ ಬಂದರೆ ಹಳ್ಳಗಳು ಕಾಣುವುದಿಲ್ಲ ಅಪಘಾತಗಳು ಸಂಭವಿಸಿ ಪ್ರಾಣ ಹಾನಿ ಆಗುವುದಕ್ಕೆ ಮುಂಚೆ ಲೋಕಪಯೋಗಿ ಇಲಾಖೆ ಅಧಿಕಾರಿಗಳು ದುರಸ್ತಿ ಕಾರ್ಯವನ್ನು ಮಾಡಬೇಕು ಇಲ್ಲದೇ ಹೋದ ಪಕ್ಷದಲ್ಲಿ ಸಂಘಟನೆಯ ವತಿಯಿಂದ ಲೋಕೋಪಯೋಗಿ ಇಲಾಖೆಯ ಮುಂದೆ ಧರಣಿ ಮಾಡಲಾಗುವುದು ಎಂದು ಜೈ ಭಾರತ್ ಜಾಗೃತಿ ವೇದಿಕೆಯ ಸಂಸ್ಥಾಪನಾ ರಾಜ್ಯಾಧ್ಯಕ್ಷ ಶಿವಕುಮಾರ್ ರವರು ಪತ್ರಿಕಾ ಹೇಳಿಕೆ ನೀಡಿದರು.