ಅಧಿಕಾರಿಗಳ ನಿರ್ಲಕ್ಷ್ಯ: ಹಾಳು ಬಿದ್ದ ಎಪಿಎಂಸಿ ಗೋಡಾನ್

ಹನುಮೇಶ ಛಲವಾದಿ
ಸಿರವಾರ.ಮೇ೩- ಎಪಿಎಂಸಿಗೆ ವಾರ್ಷಿಕ ೧.೫ ಲಕ್ಷ ಲಾಭ ಕೊಡಿವ ಗೋಡಾನ್ ಅಧಿಕಾರಿಗಳ ನಿರ್ಲಕ್ಷಕ್ಕೆ ಒಳಗಾಗಿ ಪಾಳು, ಬಿದ್ದೂ ಅಕ್ರಮ ಚಟುವಟಿಕೆ ತಾಣವಾಗಿ ಮಾರ್ಪಾಡಾಗಿದೆ. ಪಟ್ಟಣದ ಎಪಿಎಂಸಿ ಆವರಣದಲ್ಲಿ ಸುಮಾರು ೨೫ ವರ್ಷಗಳ ಹಿಂದೆ ಗೋಡಾನ್ ನಿರ್ಮಾಣವಾಗಿತು. ಅಂದಿನಿಂದ ಅನೇಕ ವರ್ತಕರು ತಾವು ಖರಿದಿ ಮಾಡಿದ ಭತ್ತ, ಹತ್ತಿ ಇನ್ನಿತರ ವಸ್ತುಗಳನ್ನು ದಾಸ್ತಾನು ಮಾಡುತ್ತಿದ್ದರು.
ಬಹುತೇಕ ವಾರ್ಷೀಕ ಬಾಡಿಗೆಗೆ ನೀಡಲಾಗುತ್ತಿತು. ಹಿಂದೆ ಗೋಡಾನುಗಳ ಕಡಿಮೆ ಇದ್ದಾಗ ಇದಕ್ಕೆ ಬೇಡಿಕೆ ಹೆಚ್ಚಾಗಿತು. ಈ ಗೋಡಾನು ಗೋಡೆಗಳು, ಮೇಲೆ ಹೊದಿಸಿರುವ ಟೀನ್ ಗಳು ಚೆನ್ನಾಗಿವೆ, ಬಾಗಿಲು(ಶೇಟರ್) ಹಾಳಾಗಿದೆ. ಇದು ಒಂದು ದುರಸ್ತಿಗೊಳಿಸಿ, ನೇಲ ಸಮ ಮಾಡಿಕೊಟ್ಟರೆ ಬಳಕೆಗೆ ಯೋಗ್ಯವಾಗುತ್ತದೆ. ವಾರ್ಷೀಕ ಆದಾಯ ಬರುವ ಬಾಡಿಗೆ ಹಣದ ಅರ್ದದಷ್ಟು ಖರ್ಚು ಮಾಡಿದರೆ ಮುಂದಿನ ೫ ವರ್ಷಗಳ ಕಾಲ ಬಾಡಿಗೆ ನೀಡಬಹುದು. ಅದು ಅಲ್ಲದೆ ದೊಡ್ಡ ದೊಡ್ಡ ಲಾರಿಗಳು ಸಾಮಗ್ರಿಗಳನ್ನು ಹೊತ್ತುಕೊಂಡು ಹೋಗಿ- ಬರಲು ರಸ್ತೆ ಚೆನ್ನಾಗಿರುವದರಿಂದ ಅನುಕೂಲವಾಗಿದೆ.
ಇಂತಹ ಗೋಡಾನ್ ಅಧಿಕಾರಿಗಳ ನಿರ್ಲಕ್ಷದಿಂದ ಇಂದು ಕುಡುಕರ ತಾಣ, ಶೌಚಾಲಯವಾಗಿ ಮಾರ್ಪಾಡಾಗಿದೆ. ಎಪುಎಂಸಿಗಳಿಗೆ ಆದಾಯದ ಮೂಲಗಳು ಕಡಿಮೆ ಇವೆ ಎಂದು ಹೇಳುತ್ತಾರೆ ಇಂತಹ ಕಟ್ಟಡಗಳು ಅಧಿಕಾರಿಗಳಿಗೆ ಕಾಣುತ್ತಿಲ್ಲವೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲಾ, ದಾಸ್ತಾನು ಮಾಡಲು ಕಡಿಮೆ ಧರದಲ್ಲಿ ಗೋಡಾನ್ ಗಳು ದೊರೆಯುತ್ತಿಲ್ಲ ಇಂತಹ ಗೋಡಾನ್ ದುರಸ್ಥಿಗೊಳಿಸಿ ಬಾಡಿಗೆ ನೀಡಿದರೆ ಆದಾಯ ಬರುತ್ತದೆ.
ಇದೇ ಎಪಿಎಂಸಿ ಆವರಣಕ್ಕೆ ಹೊಂದಿಕೊಂಡು ಸುಮಾರು ೭ ಮಳಗಿಗಳು ಸಹ ನಿರ್ಮಾಣವಾಗಿ ೧೦ ವರ್ಷಗಳು ಆಗಿವೆ ಇಲ್ಲಿಯವರೆಗೂ ಹರಾಜಿಗೆ ಟೆಂಡರ್ ಕರೆದಿರುವುದು ಬಿಟ್ಟರೆ ಒಂದೆ ಒಂದು ಮಳಗಿಯೂ ಸಹ ಬಾಡಿಗೆ ನೀಡಿಲ. ಕೇಲವರು ತಮ್ಮ ಪ್ರಭಾವ ಬಳಸಿ ಸಿಮೆಂಟೆ ಇನ್ನಿತರ ದಾಸ್ತಾನು ಮಾಡಿದರು, ಆದರೆ ಬಾಡಿಗೆ ಹಣ ಮಾತ್ರ ಯಾರಿಗೆ ನೀಡಿದ್ದಾರೆಂಬುದು ತಿಳಿಯದಂತಾಗಿದೆ ಎಂಬುದು ರೈತಾಪಿವರ್ಗದವರ ಆರೋಪವಾಗಿದೆ. ಪಟ್ಟಣದಲ್ಲಿರುವ ಬಹುತೇಕ ಸರ್ಕಾರಿ ಕಛೇರಿಗಳಿಗೆ ಸ್ವಂತ ಕಟ್ಟಡಗಳು ಇಲ್ಲಾ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತವೆ.
ಮುಖ್ಯ ರಸ್ತೆಗಿಂತಲೂ ದೂರ ದೂರ ಇವೆ, ಈ ಮಳಿಗೆಗಳು ಮುಖ್ಯರಸ್ತೆಯ ಪಕ್ಕದಲ್ಲಿವೆ, ಹಾಗೂ ಪಾರ್ಕಿಂಗ್ ಸ್ಥಳ ಲಭ್ಯವಿದೆ. ಸರ್ಕಾರಿ ಕಛೇರಿಗಳಿಗೆ ಬಾಡಿಗೆ ನೀಡಲು ಏನು ತೊಂದರೆ ಎಂದು ಸಾರ್ವಜನಿಕರು ಕೇಳುತ್ತಾರೆ. ಒಟ್ಟಿನಲ್ಲಿ ಇಲಾಖೆಗೆ ಆದಾಯ ತರವು ಇಂತಹ ಮಳಿಗೆ, ಗೋಡಾನ್ ಅಧಿಕಾರಿಗಳ ನಿರ್ಲಕ್ಷಕ್ಕೆ ಒಳಗಾಗಿದೆ. ಕೂಡಲೇ ಬಳಕೆ ಮಾಡಿಕೊಳುವಂತೆ ಸದಸ್ಯರು ಒತ್ತಡ ಹಾಕಬೇಕಾಗಿದೆ.