ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ೧೯ ಗ್ರಾಮಗಳಲ್ಲಿ ಪ್ಲೊರೈಡ್ ಮಿಶ್ರಿತ ನೀರು

೭ ವರ್ಷ ಕಳೆದರೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನನೆಗುದಿಗೆ
ದೇವದುರ್ಗ; ತಾಲ್ಲೂಕಿನ ಅಮರಾಪುರ, ಕರಡಿಗುಡ್ಡ ಮತ್ತು ಮುಂಡರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸುಮಾರು ೧೯ ಗ್ರಾಮಗಳಲ್ಲಿ ಕಂಡು ಬಂದಿರುವ ಪ್ಲೊರೈಡ್‌ಯುಕ್ತ ನೀರಿನಿಂದ ಜನರಿಗೆ ವಿವಿಧ ಕಾಯಿಲೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಗುಣಮಟ್ಟದ ನೀರನ್ನು ನೀಡಬೇಕೆಂಬ ಕಾರಣದಿಂದ ಸರ್ಕಾರ ಕೈಗೆತ್ತಿಕೊಂಡಿದ್ದ ಶಾಶ್ವತ ಕುಡಿಯುವ ನೀರಿನ ಜಲ ನಿರ್ಮಲ ಯೋಜನೆ ೭ ವರ್ಷಗಳು ಕಳೆದರೂ ಜನರಿಗೆ ನೀರು ನೀಡಲು ಆಗಿಲ್ಲ.
ಹತ್ತಾರೂ ವರ್ಷಗಳಿಂದ ಪ್ಲೊರೈಡ್‌ಯುಕ್ತ ನೀರನ್ನು ಕುಡಿಯುವ ಮೂಲಕ ವಿವಿಧ ಕಾಯಿಲೆಗಳಿಗೆ ತುತ್ತಾಗಿರುವುದನ್ನು ಕಂಡಿದ್ದ ಸರ್ಕಾರ ತಾಲ್ಲೂಕಿನಲ್ಲಿ ಹರಿಯುವ ಕೃಷ್ಣಾ ನದಿಯಿಂದ ನೀರನ್ನು ಸರಬರಾಜು ಮಾಡಲು ನಿರ್ಧರಿಸಿ ಕಳೆದ ೨೦೧೨ರಲ್ಲಿ ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರಿನ ವಿಭಾಗಕ್ಕೆ ವಿಶ್ವಬ್ಯಾಂಕ್ ನೆರವಿನ ಅಡಿಯಲ್ಲಿ ೧೨ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವ ಮೂಲಕ ಅಮರಾಪುರ, ಕರಡಿಗುಡ್ಡ ಮತ್ತು ಮುಂಡರಗಿ ಮೂರು ಗ್ರಾಪಂ ವ್ಯಾಪ್ತಿಯ ಸುಮಾರು ೧೯ ಗ್ರಾಮಗಳ ಜನರಿಗೆ ಶುದ್ಧ ಮತ್ತು ಶಾಶ್ವತ ಕಡಿಯುವ ನೀರಿನ ಯೋಜನೆಯನ್ನು ರೂಪಿಸಲಾಯಿತು.
೨೦೧೨ರಲ್ಲಿ ೧೨ಕೋಟಿ ರೂಪಾಯಿಯ ಬೃಹತ್ ಯೋಜನೆಗೆ ಟೆಂಡರ್ ಕರೆದ ನಂತರ ಆಂಧ್ರ ಪ್ರದೇಶ ಮೂಲದ ಗುತ್ತೆಗೆದಾರರಿಗೆ ಕಾಮಗಾರಿಯ ಒಪ್ಪಂದ ಮಾಡಿಕೊಳ್ಳಲಾಯಿತು. ಟೆಂಡರ್ ನಿಯಮದಂತೆ ಗುತ್ತೆಗೆದಾರರಿಗೆ ಒಂದು ವರ್ಷ( ೨೦೧೩)ದಲ್ಲಿ ಕಾಮಗಾರಿಯನ್ನು ಮುಗಿಸಿ ೧೯ ಗ್ರಾಮಗಳ ಜನರಿಗೆ ಶುದ್ಧ ನೀರನ್ನು ಸರಬರಾಜು ಮಾಡಲು ಹೇಳಲಾಗಿತ್ತು. ಆದರೆ ೭ ವರ್ಷಗಳು ಕಳೆದರೂ ಬೃಹತ್ ಯೋಜನೆ ನನೆಗುದಿಗೆ ಬಿದಿದ್ದರೂ ಈ ಬಗ್ಗೆ ಯಾರೊಬ್ಬರೂ ಅತ್ತಕಡೆ ಸುಳಿದಿಲ್ಲ.
ಯೋಜನೆಯ ಪ್ರಕಾರ ಕೃಷ್ಣಾ ನದಿಯಿಂದ ನೀರನ್ನು ಸರಬರಾಜು ಮಾಡಿಕೊಂಡು ಅಮರಾಪುರ ಕ್ರಾಸ್ ಬಳಿ ಯೋಜನೆಗೆಂದು ಖರೀದಿಸಲಾದ ಜಮೀನಿನಲ್ಲಿ ನಿರ್ಮಿಸಲಾಗಿರುವ ಪಂಪ್‌ಹೌಸ್ ಮತ್ತು ಶುದ್ಧೀಕರಣ ಘಟಕದಲ್ಲಿ ನೀರನ್ನು ಸಂಗ್ರಹಿಸಿಕೊಂಡು ನಂತರ ಮೂರು ಗ್ರಾಪಂ ವ್ಯಾಪ್ತಿಯ ೧೯ ಗ್ರಾಮಗಳಿಗೆ ಪ್ರತಿನಿತ್ಯ ನೀರು ಸರಬರಾಜು ಮಾಡಲು ಉದ್ದೇಶವಾಗಿತ್ತು. ಇದರ ಪ್ರಕಾರವೇ ಅಮರಾಪುರ ಕ್ರಾಸ್ ಬಳಿ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಪಂಪ್‌ಹೌಸ್, ನೀರು ಶುದ್ಧೀಕರಣ ಘಟಕ, ನೀರು ಸಂಗ್ರಹ ಕೋಣೆಯನ್ನು ನಿರ್ಮಿಸಲಾಗಿದೆ ಮತ್ತು ನದಿಯಿಂದ ಅಮರಾಪುರ ಕ್ರಾಸ್‌ವರೆಗೂ ಪೈಪ್‌ಲೈನ್ ಸಹ ಹಾಕಲಾಗಿದ್ದು, ಯಾವ ಕಾರಣದಿಂದ ಬೃಹತ್ ಯೋಜನೆ ನನೆಗುದಿಗೆ ಬಿದ್ದಿದೆ ಎಂಬುವುದೇ ಈಗ ದೊಡ್ಡ ಪ್ರಶ್ನೆಯಾಗಿದೆ.
ಯೋಜನೆಯ ಪ್ರಕಾರ ಅಮರಾಪುರ, ಗಾಜಲದಿನ್ನಿ, ಮುಕ್ಕನಾಳ ಪರಾಪುರ, ಸೋಲದಗುಡ್ಡ, ಮಂಡಲಗುಡ್ಡ, ಮುಂಡರಗಿ, ಮುಂಡರಗಿ ತಾಂಡಾ, ಹುಲಿಗುಡ್ಡ, ಗಣಜಲಿ, ದೇವತಗಲ್, ಕಾಟಮಳ್ಳಿ, ಮುದುಗೋಟ್, ಮೇದನಾಪುರ, ಬಾಗೂರು, ಹೇರುಂಡಿ, ಜಂಬುಲದಿನ್ನಿ, ನವಿಲಗುಡ್ಡ ಮತ್ತು ನಿಲವಂಜಿ ಗ್ರಾಮಗಳು ಯೋಜನೆಯ ಲಾಭ ಪಡೆಯಬೇಕಾಗಿದ್ದರೂ ಇಂದಿಗೂ ಯಾವ ಗ್ರಾಮಕ್ಕೂ ನೀರು ತಲುಪಿಸಲು ಸಾಧ್ಯವಾಗಿಲ್ಲ.
ಈಗಾಗಲೇ ಜಿಪಂ ವತಿಯಿಂದ ಗ್ರಾಮಗಳಲ್ಲಿನ ಕೊಳವೆಬಾವಿಯ ನೀರನ್ನು ಪರೀಕ್ಷಿಸಲಾಗಿದ್ದು, ಬಹುತೇಕ ಗ್ರಾಮಗಳಲ್ಲಿ ಪ್ಲೊರೈಡ್ ಮಿಶ್ರಿತ ನೀರು ಇರುವುದು ಕಂಡು ಬಂದಿದೆ. ಅನಿವಾರ್ಯ ಎಂಬುವಂತೆ ಜನರು ಪ್ರತಿನಿತ್ಯ ಅದೇ ನೀರನ್ನು ಕುಡಿಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಿಲ್ಲ. ಇದೇ ಕಾರಣಕ್ಕಾಗಿಯೇ ಅಲ್ಲಿನ ಜನರಿಗೆ ವಿವಿಧ ಕಾಯಿಲೆಗಳು ಕಂಡು ಬಂದಿದೆ.
೭ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬೃಹತ್ ಯೋಜನೆಯ ಬಗ್ಗೆ ಜಿಪಂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುವುದು ಈ ಭಾಗದ ಜನರ ಆರೋಪವಾಗಿದೆ.
ಕರ್ನಾಟಕ ಪ್ರಾಂತ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ಗ್ರಾಮಗಳ ಜನರು ನನೆಗುದಿಗೆ ಬಿದ್ದಿರುವ ಯೋಜನೆಯನ್ನು ಕೂಡಲೇ ಕೈಗೆತ್ತಿಕೊಂಡು ಗ್ರಾಮಗಳಿಗೆ ನೀರು ನೀಡಲು ಆಗ್ರಹಿಸಿ ಅನೇಕ ಬಾರಿ ಹೋರಾಟಗಳನ್ನು ರೂಪಿಸಿ ಪ್ರತಿಭಟಿಸಿದರು ಯಾವುದೇ ಪ್ರಯೋಜನೆ ಇಲ್ಲದಂತಾಗಿದೆ. ಸಂಘಟನೆಗಳ ಒತ್ತಡದಿಂದಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನನೆಗುದಿಗೆ ಬಿದ್ದಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೋದರೂ ಪೂರ್ಣಗೊಳ್ಳದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ.
೭ ವರ್ಷಗಳಿಂದ ಅನಾಥವಾಗಿ ಬಿದ್ದಿರುವ ಯೋಜನೆಯಿಂದಾಗಿ ಈ ಹಿಂದೆ ಹಾಕಲಾಗಿರುವ ಪೈಪ್ ಮತ್ತು ಕೆಲವು ಬೆಲೆ ಬಾಳುವ ಸಾಮಗ್ರಿಗಳು ಅನ್ಯರ ಪಾಲಾಗಿವೆ.

೧೯ಗ್ರಾಮಗಳ ಜನರಿಗೆ ಪ್ಲೊರೈಡ್ ನೀರು ಗತಿ
ಗ್ರಾಪಂಗೆ ಹಸ್ತಾಂತರ ಬಾಕಿ
ತುಕ್ಕು ಹಿಡಿದ ಯೋಜನೆ
ಕಾಮಗಾರಿ ಕೈಗೆತ್ತಿಕೊಂಡಿದ್ದ ಗುತ್ತೆಗೆದಾರರು ಸರ್ಕಾರದ ನಿಯಮದಂತೆ ಗ್ರಾಪಂಗಳಿಗೆ ಇಂದಿಗೂ ಹಸ್ತಾಂತರ ಮಾಡದೆ ಇರುವುದರಿಂದ ಜನರಿಗೆ ನೀರು ನೀಡಲು ಆಗಿಲ್ಲ.
ಟೆಂಡರ್ ಪ್ರಕಾರ ಗುತ್ತೆಗೆದಾರರು ಕಾಮಗಾರಿಯನ್ನು ಮುಗಿಸಿದ ನಂತರ ಸಾಂತೇತಿಕವಾಗಿ ಗ್ರಾಮಗಳಿಗೆ ನೀರು ಹರಿಸಲಾಯಿತು. ಗ್ರಾಪಂಗೆ ಹಸ್ತಾಂತರ ಮಾಡುವುದು ಬಾಕಿ ಉಳಿದಿದೆ.
ಗ್ರಾಮಸ್ಧರು.

ಕೋಟ್;

೧೯ಗ್ರಾಮಗಳ ಜನರಿಗೆ ಪ್ಲೊರೈಡ್ ನೀರು ಗತಿ
ಗ್ರಾಪಂಗೆ ಹಸ್ತಾಂತರ ಬಾಕಿ
ತುಕ್ಕು ಹಿಡಿದ ಯೋಜನೆ
ಕಾಮಗಾರಿ ಕೈಗೆತ್ತಿಕೊಂಡಿದ್ದ ಗುತ್ತೆಗೆದಾರರು ಸರ್ಕಾರದ ನಿಯಮದಂತೆ ಗ್ರಾಪಂಗಳಿಗೆ ಇಂದಿಗೂ ಹಸ್ತಾಂತರ ಮಾಡದೆ ಇರುವುದರಿಂದ ಜನರಿಗೆ ನೀರು ನೀಡಲು ಆಗಿಲ್ಲ. – ಶೇಖರಪ್ಪ ಪಿಡಿಒ ಅಮರಾಪುರ

ಪೋಟೋ೧೧ಡಿವಿಡಿ,೨